ನಿತೇಶ್ ತಿವಾರಿ (Nitesh Tiwari) ಅವರ ರಾಮಾಯಣ(Ramayana Movie) 2026ರ ಬಹುನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸನ್ನಿ ಡಿಯೋಲ್ (Sunny Deol) ಹನುಮಾನ್ ಆಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿರುವ ಈ ಚಿತ್ರವು ಈ ವರ್ಷದ ದೀಪಾವಳಿಯಂದು ಚಿತ್ರಮಂದಿರಗಳಿಗೆ ಬರಲಿದೆ. ಇದಕ್ಕೂ ಮುನ್ನ, ತಯಾರಕರು ಕಳೆದ ವರ್ಷ ತಾರಾಬಳಗದ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದರು .ಇತ್ತೀಚೆಗೆ ರಣಬೀರ್ (Ranabir) ಮತ್ತು ಸಾಯಿ ಪಾತ್ರಧಾರಿಗಳ ಹೊಸ ಚಿತ್ರಗಳು ವೈರಲ್ ಆಗಿದೆ. ಈ ಫೋಟೋಗಳು ರೀಲ್? ರಿಯಲ್?
ಇದನ್ನೂ ಓದಿ: Amruthadhaare Serial: ಮಲ್ಲಿಗಾಗಿ ಮಹತ್ವದ ತ್ಯಾಗ ಮಾಡಿದ್ದಾರೆ ಗೌತಮ್-ಭೂಮಿಕಾ!
ಕ್ಲೀನ್ ಶೇವ್ ಲುಕ್‌ನಲ್ಲಿ ನಟ
ವೈರಲ್ ಆಗಿರುವ ಚಿತ್ರದಲ್ಲಿ, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಸಾಂಪ್ರದಾಯಿಕ ಉಡುಪಿನಲ್ಲಿ ಕಂಡಿದ್ದಾರೆ. ನಟ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಆದರೆ ಈ ಫೋಟೋಗಳನ್ನು ನಿತೇಶ್ ತಿವಾರಿ ಅವರ ರಾಮಾಯಣದ ಸೆಟ್‌ನಲ್ಲಿ ಕ್ಲಿಕ್ ಮಾಡಲಾಗಿಲ್ಲ .
ಈ ಚಿತ್ರಗಳು ವಾಸ್ತವವಾಗಿ ಸಿಯಾ ಕೆ ರಾಮ್ ಎಂಬ ಟಿವಿ ಕಾರ್ಯಕ್ರಮದ ಸ್ಟಿಲ್‌ಗಳಾಗಿದ್ದು , ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಫೋಟೋ ಮಾಡಲಾಗಿದೆ ಎಂದು ವರದಿಯಾಗಿದೆ ಆಶಿಶ್ ಶರ್ಮಾ, ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಸೋರಿಕೆಯಾದ ಚಿತ್ರದ ಬಗ್ಗೆ ಕ್ಲಾರಿಟಿಕೊಟ್ಟಿದ್ದಾರೆ. AI ನನ್ನ ಕೂದಲನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳನ್ನು ಮರು-ಹಂಚಿಕೊಳ್ಳುವ ಮೂಲಕ ಎಲ್ಲಾ ಅನುಮಾನಗಳನ್ನು ನಿವಾರಿಸಿದರು.
Modified pictures of Ranbir and Sai are getting viral on Twitter, removing the actors' heads from the TV show "Siya Ke Ram" (2015-2016), claiming they are the leaks from the upcoming movie.
by u/Separate_Record9354 in BollyBlindsNGossip
ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರಕ್ಕೆ ಜೀವ ತುಂಬುತ್ತಿರುವುದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.
ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಸರಳತೆ ಮತ್ತು ಅಭಿನಯ ಸೀತೆಯ ಪಾತ್ರಕ್ಕೆ ನ್ಯಾಯ ಒದಗಿಸಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ದಕ್ಷಿಣ ಭಾರತದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಮಿತ್ ಮಲ್ಹೋತ್ರಾ ಅವರು ಅತ್ಯಂತ ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಯಶ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರದ ಮೊದಲ ಭಾಗದ ಕೆಲಸಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿವೆ. ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಕೆಲಸಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿವೆ.
ಇದನ್ನೂ ಓದಿ: Krishna Rukku Serial: 19 ವರ್ಷಗಳ ಬಳಿಕ ಕಿರುತೆರೆ ಲೋಕಕ್ಕೆ ಕಮ್‌ಬ್ಯಾಕ್ ಆದ್ರು ನಟಿ ಸುಚಿತ್ರಾ !
ವರದಿಗಳ ಪ್ರಕಾರ, 'ರಾಮಾಯಣ' ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲಿದೆ. ಇದೊಂದು ಎರಡು ಭಾಗಗಳ ಸಿನಿಮಾವಾಗಿದ್ದು, ಭಾರತೀಯ ಮಹಾಕಾವ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.