ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Second Love: ನಟಿ ರಮ್ಯಾ ಕೃಷ್ಣನ್ ಕ್ರೇಜಿ ಡೇಟಿಂಗ್ ಶೋ; ಬ್ರೇಕಪ್ ಆದ ಪ್ರೇಮಿಗಳಿಗೆ ಪ್ಯಾಚ್-ಅಪ್ ಮಾಡ್ತಾರೆ ರಾಜಮಾತೆ ಶಿವಗಾಮಿ!

'ಬಾಹುಬಲಿ' ಖ್ಯಾತಿಯ ನಟಿ ರಮ್ಯಾ ಕೃಷ್ಣನ್ 'ಜಿಯೋ ಹಾಟ್‌ಸ್ಟಾರ್' ಒಟಿಟಿಯಲ್ಲಿ 'ಸೆಕೆಂಡ್ ಲವ್' ಎಂಬ ವಿಭಿನ್ನ ತಮಿಳು ಡೇಟಿಂಗ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಪ್ರೀತಿಯಲ್ಲಿ ಬ್ರೇಕಪ್ ಆಗಿ ನೊಂದಿರುವ 30 ವರ್ಷದೊಳಗಿನ 12 ಯುವಕ-ಯುವತಿಯರು ಎರಡನೇ ಪ್ರೀತಿ ಹುಡುಕಿಕೊಳ್ಳಲು ಈ ಶೋ ವೇದಿಕೆಯಾಗಲಿದ್ದು, ರಮ್ಯಾ ಕೃಷ್ಣನ್ ಮಾರ್ಗದರ್ಶಕಿಯಾಗಿ ಇರಲಿದ್ದಾರೆ.

ಬೆಳ್ಳಿತೆರೆಯ ಮೇಲೆ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರಮ್ಯಾ ಕೃಷ್ಣನ್ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ 'ರಾಜಮಾತೆ ಶಿವಗಾಮಿ'ಯಾಗಿ ಪವರ್‌ಫುಲ್ ನಟನೆಯ ಮೂಲಕ ದೇಶಾದ್ಯಂತ ಪ್ರಶಂಸೆ ಗಳಿಸಿದ್ದ ರಮ್ಯಾ ಕೃಷ್ಣನ್, ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಭಿನ್ನ ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ. ಪ್ರಮುಖ ಒಟಿಟಿ ಸಂಸ್ಥೆ 'ಜಿಯೋ ಹಾಟ್‌ಸ್ಟಾರ್'‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ 'ಸೆಕೆಂಡ್ ಲವ್' ಎಂಬ ತಮಿಳು ಡೇಟಿಂಗ್ ಶೋ ಮೂಲಕ ಹೊಸ ಜರ್ನಿ ಆರಂಭಿಸಲಿದ್ದಾರೆ ರಮ್ಯಾ ಕೃಷ್ಣನ್!‌

ಏನಿದು 'ಸೆಕೆಂಡ್ ಲವ್' ಪರಿಕಲ್ಪನೆ?

ಈ ರಿಯಾಲಿಟಿ ಸರಣಿಗೆ 'ಸೆಕೆಂಡ್ ಲವ್' (Second Love) ಎಂಬ ಇಂಟರೆಸ್ಟಿಂಗ್‌ ಟೈಟಲ್‌ ಇಡಲಾಗಿದೆ. ಪ್ರೀತಿಯಲ್ಲಿ ವಿಫಲರಾಗಿ, ಬ್ರೇಕಪ್ ನೋವಿನಲ್ಲಿರುವ 30 ವರ್ಷದೊಳಗಿನ 12 ಯುವಕ-ಯುವತಿಯರನ್ನು ಐಷಾರಾಮಿ ವಿಲ್ಲಾ ಒಂದಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಜೀವನದಲ್ಲಿ ಎರಡನೇ ಪ್ರೀತಿಯನ್ನು ಹುಡುಕಿಕೊಳ್ಳಲು ಮತ್ತು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಈ ಶೋ ವೇದಿಕೆಯಾಗಲಿದೆ. ‌

Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!

ಬ್ರೇಕಪ್ ಆದವರಿಗೆ ರಮ್ಯಕೃಷ್ಣ ನಿರೂಪಕಿಯಾಗಿ ನಿಂತು, ಹೊಸ ಸಂಗಾತಿಯನ್ನು ಹುಡುಕಿಕೊಡುವುದು ಈ ಶೋನ ಮುಖ್ಯ ಕಾನ್ಸೆಪ್ಟ್. ಪ್ರಸ್ತುತ ಜೆನ್-ಜಿ (Gen-Z) ಯುವ ಪೀಳಿಗೆಯನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿರುವ ಈ ವೆರೈಟಿ ಶೋ ಎಷ್ಟರ ಮಟ್ಟಿಗೆ ವೀಕ್ಷಕರನ್ನು ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್

ಇತ್ತೀಚೆಗೆ ಬಿಡುಗಡೆಯಾದ ಈ ಶೋನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಲ್ಲಿ ರಮ್ಯಾ ಕೃಷ್ಣನ್‌ ಅವರು ಬ್ರೇಕ್‌ ಅಪ್‌ ಹೃದಯದ ಗುರುತನ್ನು ಜೋಡಿಸುತ್ತಾ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಈ ಪೋಸ್ಟರ್‌ನಲ್ಲಿ ಅವರ ಗ್ಲಾಮರ್ ನೋಡಿದ ನೆಟ್ಟಿಗರು, "ರಮ್ಯಾ ಕೃಷ್ಣನ್‌ ಅವರು 90ರ ದಶಕದ ನಟಿಯಂತೆ ಕಾಣುತ್ತಿಲ್ಲ, ಇಂದಿನ ಯುವ ನಾಯಕಿಯರಿಗೂ ಪೈಪೋಟಿ ನೀಡುವಷ್ಟು ಎನರ್ಜಿಟಿಕ್ ಆಗಿ ಕಾಣುತ್ತಿದ್ದಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದು ದಕ್ಷಿಣ ಭಾರತದಲ್ಲಿ ಹೊಸ ಪ್ರಯೋಗ

ಈಗಾಗಲೇ ರಮ್ಯಾ ಕೃಷ್ಣನ್ ಅವರ ಸಮಕಾಲೀನ ಸ್ಟಾರ್ ನಟರಾದ ನಾಗಾರ್ಜುನ, ನಂದಮೂರಿ ಬಾಲಕೃಷ್ಣ, ಜಗಪತಿ ಬಾಬು ಅವರಂತಹ ಕಲಾವಿದರು ಕಿರುತೆರೆ ಮತ್ತು ಒಟಿಟಿಗಳಲ್ಲಿ ಟಾಕ್ ಶೋಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ನಟಿ ರಮ್ಯಾ ಕೃಷ್ಣನ್‌ ಕೂಡ ಅದೇ ಹಾದಿಯಲ್ಲಿದ್ದಾರೆ. ಆದರೆ, ರಮ್ಯಾ ಕೃಷ್ಣನ್‌ ಅವರು ಡೇಟಿಂಗ್ ಜೋನರ್ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ದಕ್ಷಿಣ ಭಾರತಕ್ಕಾಗಿ 25 ಪ್ರಾಜೆಕ್ಟ್‌ಗಳನ್ನು ಘೋಷಿಸಿದ ಜಿಯೋ ಹಾಟ್‌ಸ್ಟಾರ್‌; 4 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ದೊಡ್ಡ ಪ್ಲ್ಯಾನ್!‌

ನಿಜ ಹೇಳಬೇಕೆಂದರೆ, ಇಂತಹ ಡೇಟಿಂಗ್ ರಿಯಾಲಿಟಿ ಶೋಗಳು ಉತ್ತರ ಭಾರತದಲ್ಲಿ 'ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ' (MTV Splitsvilla) ಹೆಸರಿನಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದರೂ, ದಕ್ಷಿಣ ಭಾರತದ ಮಾರುಕಟ್ಟೆಗೆ ಇದು ಸಂಪೂರ್ಣ ಹೊಸ ಪ್ರಯೋಗ ಎಂದೇ ಹೇಳಬಹುದು. ಈ ಶೋ ಯಾವಾಗಿನಿಂದ ಬರಲಿದೆ ಎಂಬುದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.