ದಕ್ಷಿಣ ಭಾರತಕ್ಕಾಗಿ 25 ಪ್ರಾಜೆಕ್ಟ್‌ಗಳನ್ನು ಘೋಷಿಸಿದ ಜಿಯೋ ಹಾಟ್‌ಸ್ಟಾರ್; 4 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ದೊಡ್ಡ ಪ್ಲ್ಯಾನ್!
JioHotstar: ದಕ್ಷಿಣ ಭಾರತದ ಮನರಂಜನಾ ಕ್ಷೇತ್ರಕ್ಕೆ ಜಿಯೋಹಾಟ್‌ಸ್ಟಾರ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ 4,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜಿಯೋಸ್ಟಾರ್ ಸಂಸ್ಥೆಯು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಒಟ್ಟು 25 ಹೊಸ ಶೋಗಳ ಪಟ್ಟಿಯನ್ನು ಅನಾವರಣಗೊಳಿಸಿದೆ.
-
ದಕ್ಷಿಣ ಭಾರತದ ಮನರಂಜನೆ ಉದ್ಯಮದ ಸೃಜನಾತ್ಮಕ ಆರ್ಥಿಕತೆಯನ್ನು ಉತ್ತೇಜಿಸಲು ಜಿಯೋಹಾಟ್‌ಸ್ಟಾರ್ ಸಂಸ್ಥೆಯ ಪೋಷಕ ಕಂಪನಿ ಜಿಯೋಸ್ಟಾರ್ ಸಂಸ್ಥೆಯು ಹೊಸ ಯೋಜನೆ ಹಾಕಿಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ದಕ್ಷಿಣ ಭಾರತದ ಎಂಟರ್‌ಟೇನ್‌ಮೆಂಟ್ ಕ್ಷೇತ್ರದಲ್ಲಿ 4 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಶೋ ಲಿಸ್ಟ್ ಅನೌನ್ಸ್ ಮಾಡಿದ ಉದಯನಿಧಿ ಸ್ಟಾಲಿನ್
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಕಮಲ್ ಹಾನಸ್ ಮುಂತಾದ ಗಣ್ಯರು ಹಾಜರಿದ್ದರು. ಇದೇ ವೇದಿಕೆಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಬಿಗ್ ಬಾಸ್ ಶೋಗಳನ್ನು ಒಳಗೊಂಡಂತೆ, 25 ಶೋಗಳ ಹೆಸರುಗಳನ್ನು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅನಾವರಣ ಮಾಡಿದ್ದಾರೆ.
Reliance Jio: ಈ ಬಾರಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಆನಂದಿಸಿ ಐಪಿಎಲ್
ಜಿಯೋ ಸ್ಟಾರ್ ಟೀಮ್ ಹೇಳಿದ್ದೇನು?
ಈ ವೇಳೆ ಮಾತನಾಡಿರುವ ಜಿಯೋಸ್ಟಾರ್‌ನ SVOD ಬ್ಯುಸಿನೆಸ್ ಹೆಡ್ ಹಾಗೂ ಚೀಫ್ ಮಾರ್ಕೆಟಿಂಗ್ ಆಫೀಸರ್ ಸುಶಾಂತ್ ಶ್ರೀರಾಮ್, "ನಾಳೆಯ ಮನರಂಜನೆಗೆ ಅಡಿಪಾಯ ಹಾಕಬೇಕು ಎಂಬ ಕನಸಿನೊಂದಿಗೆ ಜಿಯೋ ಹಾಟ್‌ಸ್ಟಾರ್ ಆರಂಭವಾಯಿತು. ನಮ್ಮ ದೇಶದ ಶ್ರೀಮಂತ ಕಥಾ ಪರಂಪರೆ, ಅದರ ಬಹು ಮುಖಗಳು ಮತ್ತು ಅಳಿಯದ ಸಂಸ್ಕೃತಿಗೆ, ಅತ್ಯುನ್ನತ ತಂತ್ರಜ್ಞಾನದ ಮೂಲಕ, ಭಾರತೀಯ ಮನರಂಜನೆಗಾಗಿ ಡೀಫಾಲ್ಟ್ ಗುರಿಯಾಯಿರುವ ವೇದಿಕೆಯನ್ನು ಕಟ್ಟುವ ಕನಸು ಇದಾಗಿದೆ. ದಕ್ಷಿಣ ಭಾರತದ ಅದ್ಭುತ ಕಥೆ ಹೇಳುವ ಪರಂಪರೆ ಮತ್ತು ಅದು ಭಾರತದ ಸಮಗ್ರ ಕಥಾ ಸಂಸ್ಕೃತಿಯ ಮೇಲೆ ಬೀರಿರುವ ಅಪಾರ ಪ್ರಭಾವ, ಇವೆಲ್ಲವೂ ನಮಗೆ ಇನ್ನೂ ಶ್ರೀಮಂತ, ನೈಜ ಮೂಲಕ್ಕೆ ನಿಷ್ಠವಾಗಿರುವ ಕಥಾನಕಗಳನ್ನು ಬೆಂಬಲಿಸಲು ಪ್ರೇರಣೆ ನೀಡುತ್ತವೆ" ಎಂದು ಹೇಳಿದ್ದಾರೆ. ಅಂದಹಾಗೆ, ಜಿಯೋ ಹಾಟ್‌ಸ್ಟಾರ್‌ನ ಹೊಸ ಶೋಗಳ ಪಟ್ಟಿ ಇಲ್ಲಿದೆ ನೋಡಿ.
ಕನ್ನಡ
ಬಿಗ್ ಬಾಸ್ ಕನ್ನಡ- ನಿರೂಪಣೆ: ಕಿಚ್ಚ ಸುದೀಪ
ತಮಿಳು
ಬಿಗ್ ಬಾಸ್ ತಮಿಳು- ನಿರೂಪಣೆ: ವಿಜಯ್ ಸೇತುಪತಿ
ಗುಡ್ ವೈಫ್ ಸೀಸನ್ 2 - ಪ್ರಿಯಾಮಣಿ, ಸಂಪತ್ ರಾಜ್, ಆರಿ ಅರ್ಜುನನ್
ಎಲ್.ಬಿ.ಡಬ್ಲ್ಯೂ – ಲವ್ ಬಿಯಾಂಡ್ ವಿಕೆಟ್ - ವಿಕ್ರಾಂತ್, ನಿಯತಿ ಕದಂಬಿ
ಲಕ್ಕಿ ದಿ ಸೂಪರ್‌ಸ್ಟಾರ್ - ಜಿ ವಿ ಪ್ರಕಾಶ್, ಅನಸ್ವರ ರಾಜನ್, ಮೇಘನಾ ಸುಮೇಶ್
ರೆಸಾರ್ಟ್ - ವಿಜಯ್ ಕುಮಾರ್ ರಾಜೇಂದ್ರನ್, ತಲೈವಾಸಲ್ ವಿಜಯ್
ಹಾರ್ಟ್‌ಬೀಟ್ ಸೀಸನ್ 3 - ಅನುಮೋಲ್, ಕಾರ್ತಿಕ್ ಕುಮಾರ್, ದೀಪಾ ಬಾಲು
ಲಿಂಗಂ- ಕಧೀರ್, ದಿವ್ಯಾ ಭಾರತಿ
ಲವ್ ಆಲ್ವೇಸ್- ಜಯ ಪ್ರಕಾಶ್, ಜಯಸುಧಾ, ಗೌರಿ ಕಿಶನ್, ರಾಮ್ಸನ್
ಕಾಟ್ಟಾನ್ - ವಿಜಯ್ ಸೇತುಪತಿ, ಮಿಲಿಂದ್ ಸೋಮನ್
ಸೆಕೆಂಡ್ ಲವ್
ತೆಲುಗು
ಬಿಗ್ ಬಾಸ್ ತೆಲುಗು - ನಿರೂಪಣೆ: ನಾಗಾರ್ಜುನ
ಮೂಡು ಲಂಥರ್ಲು- ಐಶ್ವರ್ಯ ರಾಜೇಶ್
ವಿಕ್ರಂ ಆನ್ ಡ್ಯೂಟಿ
ವಿಶಾಖ- ಕಾಜಲ್ ಅಗರ್ವಾಲ್
ವರಂ - ವಿಶ್ವದೇವ್ ರಚ್ಚಕೊಂಡ, ಶಿವಾತ್ಮಿಕಾ ರಾಜಶೇಖರ್, ಶ್ರೀನಿವಾಸ್ ಅವಸರಾಲ
ಬ್ಯಾಚ್‌ಮೇಟ್ಸ್
ಸೇವ್ ದಿ ಟೈಗರ್ ಸೀಸನ್ 3 - ಚೈತನ್ಯ ಕೃಷ್ಣ, ಪ್ರಿಯದರ್ಶಿ ಪುಲಿಕೊಂಡ, ಅಭಿನವ್ ಗೋಮಟಮ್
ಮ್ಯಾಡ್ ಫಾರ್ ಈಚ್ ಅದರ್ - ನಿರೂಪಣೆ: ರಾಧಾ ನಾಯರ್, ಶ್ರೀಮುಖಿ
ರೋಡೀಸ್
ಮಲಯಾಳಂ
ಬಿಗ್ ಬಾಸ್ ಮಲಯಾಳಂ- ನಿರೂಪಣೆ: ಮೋಹನ್‌ಲಾಲ್
ಕೇರಳ ಕ್ರೈಮ್ ಫೈಲ್ಸ್ ಸೀಸನ್ 03 - ಅಜು ವರ್ಗೀಸ್, ಲಾಲ್, ಅರ್ಜುನ್ ರಾಧಾಕೃಷ್ಣನ್
ಕಸಿನ್ಸ್ ಅಂಡ್ ಕಲ್ಯಾಣಂಸ್
ಸೀಕ್ರೆಟ್ ಸ್ಟೋರೀಸ್: ರೋಸ್ಲಿನ್ - ಮೀನಾ, ವಿನೀತ್, ಹಕೀಮ್
ಅನಾಲಿ - ಲಿಯೋನಾ ಲಿಶೋಯ್, ನಿಖಿಲಾ ವಿಮಲ್
1000 ಬೇಬೀಸ್ ಸೀಸನ್ 2 - ನೀನಾ ಗುಪ್ತಾ, ರೆಹಮಾನ್
ಫಾರ್ಮಾ - ನಿವಿನ್ ಪೌಲಿ, ರಜಿತ್ ಕಪೂರ್, ಶ್ರುತಿ ರಾಮಚಂದ್ರನ್
ಕಾಮಿಡಿ ಕುಕ್ಸ್