ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rani Kannada Serial: ʻರಾಣಿʼ ಧಾರಾವಾಹಿ ಅಂತಿಮ ಅಧ್ಯಾಯ ಪ್ರಾರಂಭ; ಹೊಸ ಸೀರಿಯಲ್‌ ಇದೇ!

Rani Kannada Serial: ಕಲರ್ಸ್ ಕನ್ನಡ ವಾಹಿನಿ (Colors Kannada) ಹಲವು ವಿಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ‘ಪವಿತ್ರ ಬಂಧನ’, ‘ಶ್ರೀಗಂಧದ ಗುಡಿ’, ‘ನಂದಗೋಕುಲ’, ‘ಮುದ್ದು ಸೊಸೆ’, ‘ಅಗ್ನಿಸಾಕ್ಷಿ’, ‘ಗೌರಿ ಕಲ್ಯಾಣ’ ಸೇರಿದಂತೆ ಅನೇಕ ಧಾರಾವಾಹಿಗಳು ಜನಪ್ರಿಯತೆ ಗಳಿಸಿವೆ. ಈ ಸಾಲಿನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಧಾರಾವಾಹಿ ಎಂದರೆ ‘ರಾಣಿ’ (Rani Serial).

ರಾಣಿ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿ (Colors Kannada) ಹಲವು ವಿಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ‘ಪವಿತ್ರ ಬಂಧನ’, ‘ಶ್ರೀಗಂಧದ ಗುಡಿ’, ‘ನಂದಗೋಕುಲ’, ‘ಮುದ್ದು ಸೊಸೆ’, ‘ಅಗ್ನಿಸಾಕ್ಷಿ’, ‘ಗೌರಿ ಕಲ್ಯಾಣ’ ಸೇರಿದಂತೆ ಅನೇಕ ಧಾರಾವಾಹಿಗಳು ಜನಪ್ರಿಯತೆ ಗಳಿಸಿವೆ. ಈ ಸಾಲಿನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಧಾರಾವಾಹಿ ಎಂದರೆ ‘ರಾಣಿ’ (Rani Serial).

ಆದರೆ ಇದೀಗ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಣಿ’ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಈ ಸುದ್ದಿ ಕೇಳಿದ ಧಾರಾವಾಹಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದು, ಒಳ್ಳೆಯ ಕಥೆ ಹೊಂದಿರುವ ಧಾರಾವಾಹಿಯನ್ನು ಇಷ್ಟು ಬೇಗ ಮುಗಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಅಂತಿಮ ಸಂಚಿಕೆಯೆಂದು ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: Bigg Boss Kannada 13: ಇಡೀ ಸೀಸನ್ ನಾಮಿನೇಟ್‌ ಆಗೋದು ಯಾರು? ಬಿಗ್‌ ಟ್ವಿಸ್ಟ್‌!

ಅಮ್ಮ-ಮಗಳ ಭಾವನಾತ್ಮಕ ಕಥೆ

‘ರಾಣಿ’ ಧಾರಾವಾಹಿಯ ಪ್ರಮುಖ ಆಕರ್ಷಣೆಯೇ ಪುಟ್ಟ ರಾಣಿ. ಮಾಡದ ತಪ್ಪಿಗಾಗಿ ಜೈಲು ಸೇರಿದ ಕಾವೇರಿ ತನ್ನ ಮಗಳನ್ನು ಜೈಲಿನಲ್ಲಿದ್ದರೂ ಅಪ್ಪಟ ಚಿನ್ನದಂತೆ ಬೆಳೆಸುತ್ತಾಳೆ. ತಾಯಿಯ ಪ್ರೀತಿಯಲ್ಲಿ ಬೆಳೆದ ರಾಣಿ, ನಂತರ ಮಾವನ ಮನೆಯಲ್ಲಿ ಹಲವು ಕಷ್ಟಗಳನ್ನು ಎದುರಿಸುತ್ತಾಳೆ.

ಇದರ ನಡುವೆ ರಾಣಿಗೆ ತನ್ನ ತಂದೆಯ ಪರಿಚಯವಾಗುತ್ತದೆ. ಬಳಿಕ ತಾಯಿಯ ಬಿಡುಗಡೆ, ಕುಟುಂಬದ ಕಲಹ, ಮೋಸ, ಜಗಳಗಳ ನಡುವೆ ಕಥೆ ಕುತೂಹಲಕರವಾಗಿ ಸಾಗುತ್ತದೆ. ಸರಳ ಕಥಾಹಂದರದ ಜೊತೆಗೆ ಅಮ್ಮ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ಸುಂದರವಾಗಿ ಕಟ್ಟಿಕೊಟ್ಟಿರುವುದು ಈ ಧಾರಾವಾಹಿಯ ವಿಶೇಷತೆ.



"ಕನಿಷ್ಠ 500 ಎಪಿಸೋಡ್ ಆದರೂ ಕಥೆ ಮುಂದುವರಿಸಬಹುದಿತ್ತು. ರಾಣಿಗೆ ಜನರೇಷನ್ ಲೀಪ್ ಕೊಡಬಹುದಿತ್ತು. ಪುಟ್ಟ ರಾಣಿ ದೊಡ್ಡವಳಾಗಿ ಲಾಯರ್ ಆಗಿ, ಒಂದು ಕೇಸ್ ಗೆದ್ದು, ಮದುವೆಯಾಗಿ ಕಥೆಗೆ ಸುಂದರವಾದ ಹ್ಯಾಪಿ ಎಂಡಿಂಗ್ ಕೊಡಬಹುದಿತ್ತು" ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು, "ಒಳ್ಳೆಯ ಸೀರಿಯಲ್‌ಗಳನ್ನು ಯಾಕೆ ಬೇಗ ಮುಗಿಸುತ್ತೀರಿ? ಇದಕ್ಕಿಂತ ಬಿಗ್ ಬಾಸ್ ಕಾರ್ಯಕ್ರಮವನ್ನೇ ಮುಗಿಸಬಹುದಿತ್ತು" ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಿಂಚುತ್ತಿರುವ ಬಾಲನಟಿ ಧನ್ವಿ!

ಧಾರಾವಾಹಿಯಲ್ಲಿ ರಾಣಿ ಪಾತ್ರಕ್ಕೆ ಜೀವ ತುಂಬುತ್ತಿರುವ ಬಾಲನಟಿ ಧನ್ವಿ ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಧನ್ವಿಗೆ ತಂದೆ-ತಾಯಿಯ ಪ್ರೋತ್ಸಾಹ ಮತ್ತು ಬೆಂಬಲ ದೊಡ್ಡ ಶಕ್ತಿಯಾಗಿದೆ.

ಈಗಾಗಲೇ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಧನ್ವಿ ಕನ್ನಡ ಮಾತ್ರವಲ್ಲದೆ ತಮಿಳು ಭಾಷೆಯಲ್ಲಿಯೂ ನಟಿಸಿ ಗಮನ ಸೆಳೆದಿದ್ದಾರೆ.

ಕಾವೇರಿ ಪಾತ್ರದಲ್ಲಿ ನಟಿ ಐಶ್ವರ್ಯ ಎಚ್. ಅಭಿನಯ!

ರಾಣಿ ತಾಯಿ ಕಾವೇರಿ ಪಾತ್ರದಲ್ಲಿ ನಟಿ ಐಶ್ವರ್ಯ ಎಚ್. ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕ ಮೂಲದವರಾದ ಐಶ್ವರ್ಯ ಈ ಹಿಂದೆ ‘ಕೃಷ್ಣ ತುಳಸಿ’, ‘ಕೃಷ್ಣ ಸುಂದರಿ’, ‘ಮುದ್ದು ಮಣಿಗಳು’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಜಯ್‌ ಸೂರ್ಯ ನಾಯಕರಾಗಿದ್ದ‘ದೃಷ್ಟಿಬೊಟ್ಟು’ ಧಾರಾವಾಹಿ ವರ್ಷಗಳ ಹಿಂದೆ ಮುಕ್ತಾಯವಾಗಿತ್ತು. ಈ ಧಾರಾವಾಹಿಯಲ್ಲಿ ನಾಯಕಿ ದೃಷ್ಟಿ ಪಾತ್ರ ನಿರ್ವಹಿಸಿದ್ದರು ನಟಿ ಅರ್ಪಿತಾ ಮೋಹಿತೆ, ಬಳಿಕ ತೆಲುಗು ಭಾಷೆಗೆ ಕಾಲಿಟ್ಟಿದ್ದರು.

ಇದನ್ನೂ ಓದಿ: Bigg Boss Kannada 13: ಪುರುಷ ಸ್ಪರ್ಧಿಗಳ ಒಗ್ಗಟ್ಟಿಗೆ ನಡುಗಿದ ಆಸಿಯಾ, ಸೌಂದರ್ಯ ಹಾಗೂ ʻಮಹಾರಾಣಿʼ ಗಾನವಿ!

ಸ್ಟಾರ್‌ ಮಾ ವಾಹಿನಿಯಲ್ಲಿ ‘ವಾರಸರಲು’ ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ಮತ್ತೇ ಕಲರ್ಸ್‌ ಕನ್ನಡ ವಾಹಿನಿಯ ‘ಸರಸ್ವತಿ ಚಂದ್ರ’ ಧಾರಾವಾಹಿ ಮೂಲಕ ಕನ್ನಡಕ್ಕೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ ನಟಿ. ಇದೀಗ ರಾಣಿ ಜಾಗಕ್ಕೆ ಈ ಸೀರಿಯಲ್‌ ಬರಲಿದೆ ಎನ್ನಲಾಗಿದೆ.

Yashaswi Devadiga

View all posts by this author