Nandagokula: ಕಲರ್ಸ್ ಕನ್ನಡ ವಾಹಿನಿಯ 'ನಂದಗೋಕುಲ' ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಂದಗೋಕುಲ' ಧಾರಾವಾಹಿ ಕಿರುತೆರ ಪ್ರೇಕ್ಷಕರ ಗಮನ ಸೆಳೆಉವಲ್ಲಿ ಯಸಸ್ವಿಯಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ಅಪ್ಪನ ಕತೆಯನ್ನು ಹೇಳುವ, 'ನಂದಗೋಕುಲ’ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದ್ದು, ಹೊಸ ತಿರುವುಗಳೊಂದಿಗೆ ಸಾಗುತ್ತಿದೆ.

Nandagokula Serial

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನ ಮಿಡಿ ಯುವ ಕತೆಗಳ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಆರಂಭಗೊಂಡ 'ನಂದಗೋಕುಲ' (Nandagokula) ಧಾರಾವಾಹಿ ವೀಕ್ಷಕರ ಮೆಚ್ಚುಗೆ ಪಾತ್ರವಾಗಿದೆ. ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ಅಪ್ಪನ ಕತೆಯನ್ನು ಹೇಳುವ 'ನಂದಗೋಕುಲ’ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದ್ದು, ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ.
ನಂದಕುಮಾರ್ ಕಟ್ಟುನಿಟ್ಟಾದ ನಡವಳಿಕೆ ಹೊಂದಿದ ವ್ಯಕ್ತಿ. 'ಗಿರಿಜಾ ಸ್ಟೋರ್ಸ್' ಎಂಬ ದಿನಸಿ ಅಂಗಡಿ ನಡೆಸುವ ಆತನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರು ಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದ ಕುಮಾರ್‌ಗೆ ಕೆಂಡದಂಥ ಕೋಪ, ವೈಷಮ್ಯ. ತನ್ನ ಹೆಂಡತಿ ಗಿರಿಜಾಳ ಸಹೋದರರೇ ಇವರಿಬ್ಬರು. ಇದೇ ಆತನ ಈ ದ್ವೇಷಕ್ಕೆ ಕಾರಣ. ನಂದ ಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ ಇದೆ.
ನಂದ ಕುಮಾರ್ ಮತ್ತು ಗಿರಿಜಾ ದಂಪತಿಯ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ ತಂದೆಯ ಕಟ್ಟುನಿಟ್ಟಿನ ನಡುವೆ ಬೆಳೆದವರು. ತನ್ನ ಮಕ್ಕಳು ತನ್ನಂತೆ ಪ್ರೀತಿಸಿ ಮದುವೆಯಾದರೆ ನೋವನುಭವಿಸಬೇಕಾಗುತ್ತದೆ, ನೆಮ್ಮದಿಯೂ ಇರುವುದಿಲ್ಲ ಎಂದು ನಿರ್ಧರಿಸಿ ಮಕ್ಕಳಿಂದ ಪ್ರೀತಿಸಿ ಮದ್ವೆ ಆಗೋದಿಲ್ಲ ಅಂತ ಭಾಷೆ ತೆಗೆದುಕೊಂಡಿರುತ್ತಾನೆ ನಂದ ಕುಮಾರ್. ಆದರೆ ಎರಡನೇ ಮಗ ಕೇಶವ್ ಮೀನಾಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಮೀನಾಳ ತಂದೆ ಬೇರೊಬ್ಬ ಹುಡುಗನ ಜತೆ ಮದುವೆ ಫಿಕ್ಸ್ ಮಾಡುತ್ತಾನೆ. ಇತ್ತ ನಂದ ಕುಮಾರ್‌ಗೂ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗುತ್ತದೆ. ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗ ಕೇಶವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿ ಒಂದೇ ಮನೆಯ ಅಕ್ಕ ತಂಗಿಯರನ್ನು ಫಿಕ್ಸ್ ಮಾಡಲಾಗುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜತೆ ನೆರವೇರುತ್ತಿರುತ್ತದೆ. ಆಗ ನಂದ ಕುಮಾರ್‌ನ ಮೂರನೇ ಮಗ ವಲ್ಲಭ ತನ್ನ ಅಣ್ಣನ ಪ್ರೀತಿಯನ್ನು ಒಂದು ಮಾಡಲು ನಿರ್ಧರಿಸುತ್ತಾನೆ. ಬೇಸರದಲ್ಲಿಯೇ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗಿರೋ ಮೀನಾಳನ್ನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕರೆ ದೊಯ್ಯುತ್ತಾನೆ. ವಲ್ಲಭನಿಗೆ ಕೇಶವನ ಮದುವೆ ಮೀನಾಳ ಜತೆ ಮಾಡಿಸಬೇಕಿದೆ.
ಇದನ್ನು ಓದಿ:Bhagya Lakshmi Serial: ಕಿಶನ್-ಪೂಜಾ ಮದುವೆ ನಿಲ್ಲಿಸಲು ಆದೀ ಮಾಸ್ಟರ್ ಪ್ಲ್ಯಾನ್: ಒಪ್ಪಿಕೊಂಡ ರಾಮ್ದಾಸ್?
ವಲ್ಲಭ ಅಣ್ಣನ ಮದುವೆಯನ್ನು ಮಾಡಿಸಲು ಯಶಸ್ವಿಯಾಗುತ್ತಾನಾ? ತನ್ನ ಮಕ್ಕಳು ತಾನು ಹಾಕಿದ ಗೆರೆ ದಾಟಲ್ಲ ಎಂದು ಭಾವಿಸಿರುವ ನಂದ ಕುಮಾರ್‌ಗೆ ತನ್ನ ಮಗ ಕೇಶವ ಪ್ರೀತಿಸಿ ಮದುವೆಯಾದರೆ ಆಗುವ ಆಘಾತವೇನು? ಅಪ್ಪಿತಪ್ಪಿ ಮದುವೆಯಾದಲ್ಲಿ ಆ ಮದುವೆಯನ್ನು ಒಪ್ಪಲು ಸಾಧ್ಯವೇ? ವರ್ಷಾನುಗಟ್ಟಲೆಯಿಂದ ಬೆಳೆಸಿಕೊಂಡು ಬಂದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲನ್ನು ನಂದ ಕುಮಾರ್ ಹೇಗೆ ಎದುರಿಸುತ್ತಾನೆ? ನಂದ ಗೋಕುಲದಂಥ ಕುಟುಂಬ ತಮ್ಮದಿರಬೇಕು, ಎಲ್ಲರೂ ಜತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದ ಕುಮಾರ್ ಕನಸು ತನ್ನ ಮಕ್ಕಳ ಆಯ್ಕೆಯಿಂದ ಏರುಪೇರಾಗುತ್ತದೆಯೇ? ಚೆಂದದ ಮನಸ್ಸುಗಳು ಸೇರಿದ ತುಂಬಿದ ಮನೆ ಜೇನಿನ ಗೂಡಾಗಿ ಇರುತ್ತದೆಯೇ? ಭೂಮಿಗೆ ಒಟ್ಟಿಗೆ ಬಂದವರು ಒಗ್ಗಟ್ಟಾಗಿರುವರೇ? ಭಿನ್ನ ಅಭಿರುಚಿ ಇದ್ದವರು ಒಂದೇ ಸೂರಿನಡಿ ಇರಬಲ್ಲರೇ? ಒಂದೇ ಮನಸಿನ ಮಂದಿ ಮನಸು ಮುರಿದು ಹೋಗುವಂತ ಸ್ಥಿತಿಗೆ ಬಂದರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಜುಲೈ 7 ಮತ್ತು 8ನೇ ತಾರೀಕು ರಾತ್ರಿ 9ಕ್ಕೆ ಪ್ರಸಾರವಾಗುವ 'ನಂದಗೋಕುಲ' ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ.
'ಬಣ್ಣ ಟಾಕೀಸ್' ನಿರ್ಮಿಸುತ್ತಿರುವ 'ನಂದ ಗೋಕುಲ' ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ನಟಿಸುತ್ತಿದ್ದಾರೆ.