ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್‌ ಅಬ್ಬರ: 'ಧುರಂಧರ್ 2' ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟಾಗಬಹುದು?

'ಧುರಂಧರ್: ದಿ ರಿವೇಂಜ್' ಚಿತ್ರವು ಮಾರ್ಚ್ 19ರಂದು ಜಾಗತಿಕವಾಗಿ ತೆರೆಕಾಣಲಿದ್ದು, ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆಯುವ ಸಿನಿಮಾ ಇದಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಈಗಾಗಲೇ ಪೇಯ್ಡ್ ಪ್ರಿವ್ಯೂಗಳಿಂದ 45 ಕೋಟಿ ರೂ. ಬಾಚಿಕೊಂಡಿದ್ದು, ಮೊದಲ ದಿನ ದಾಖಲೆ ಪ್ರಮಾಣದ ಗಳಿಕೆ ಆಗೋದು ನಿಶ್ಚಿತ ಎನ್ನಲಾಗಿದೆ.

ಬಾಲಿವುಡ್‌ ನಟ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೇಂಜ್' ಚಿತ್ರವು ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ಆದಿತ್ಯ ಧರ್ ನಿರ್ದೇಶನದ ಈ ಸೀಕ್ವೆಲ್ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೇ, ಮಾರ್ಚ್ 18ರ ಸಂಜೆಯಿಂದಲೇ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ಕೂಡ ಇರಲಿದ್ದು, ಮುಂಗಡ ಬುಕಿಂಗ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ ಈ ಸಿನಿಮಾ.

ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಬಹುದು?

ದೇಶಾದ್ಯಂತ ಸುಮಾರು 7 ಸಾವಿರ ಪೇಯ್ಡ್‌ ಪ್ರೀಮಿಯರ್‌ ಶೋಗಳು ನಿಗದಿಯಾಗಿದ್ದು, ಈಗಾಗಲೇ ಸೇಲ್‌ ಆಗಿರುವ ಪೇಯ್ಡ್‌ ಪ್ರೀಮಿಯರ್‌ ಶೋಗಳ ಟಿಕೆಟ್‌ನಿಂದಲೇ ಸುಮಾರು 45 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆಯಂತೆ. ಮಾರ್ಚ್‌ 19ರಂದು ಕೂಡ ದೊಡ್ಟಮಟ್ಟದಲ್ಲಿ ಬುಕಿಂಗ್‌ ನಡೆಯುತ್ತಿರುವುದರಿಂದ, ಮೊದಲ ದಿನ ದಾಖಲೆ ಪ್ರಮಾಣದ ಮೊತ್ತವನ್ನು ಬಾಚಿಕೊಳ್ಳುವುದರಲ್ಲಿ ಅನುಮಾನವೇ ಬೇಡ ಎನ್ನಲಾಗಿದೆ.

ʻನೋ toxicity, ಓನ್ಲೀ ಧುರಂಧರ್‌ʼ; ಯಶ್‌ ಸಿನಿಮಾವನ್ನೇ ಟ್ರೋಲ್‌ ಮಾಡಿದ್ರಾ ನಟಿ ಸಾರಾ ಅರ್ಜುನ್?‌ ಅಸಲಿ ವಿಚಾರ ಇಲ್ಲಿದೆ!

ಪೇಯ್ಡ್‌ ಪ್ರೀಮಿಯರ್‌ ಶೋಗಳು ಕ‌ಲೆಕ್ಷನ್‌ ಮತ್ತು ಮಾರ್ಚ್‌ 19ರ ಗಳಿಕೆಯನ್ನು ಸೇರಿಸಿದರೆ, ಮೊದಲ ದಿನವೇ ಬರೋಬ್ಬರಿ 200 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು 'ಧುರಂಧರ್: ದಿ ರಿವೇಂಜ್' ಸಿನಿಮಾ ಬಾಚಿಕೊಳ್ಳಲಿದೆ ಎಂಬುದು ಬಾಕ್ಸ್‌ ಆಫೀಸ್‌ ಪಂಡಿತರ ಲೆಕ್ಕಾಚಾರ ಎನ್ನಲಾಗಿದೆ.

ಸದ್ಯ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಖ್ಯಾತಿಯು ಅಲ್ಲು ಅರ್ಜುನ್‌ ಅವರ ಪುಷ್ಪ 2 ಸಿನಿಮಾಗೆ ಇದೆ. ಇದರ ಗಳಿಕೆ 250 ಕೋಟಿ ರೂ. ಮೇಲಿದೆ. ನಂತರದ ಸ್ಥಾನ ಆರ್‌ಆರ್‌ಆರ್‌ ಚಿತ್ರಕ್ಕಿದೆ. ಈ ದಾಖಲೆಗಳನ್ನು 'ಧುರಂಧರ್ 2ʼ ಸಿನಿಮಾ ಮುರಿಯಲಿದೆಯಾ? ಸದ್ಯದ ಪ್ರಶ್ನೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಮೊದಲ ದಿನ ಎಷ್ಟು ಶೋ?

ಮೊದಲ ದಿನದ ದೇಶಾದ್ಯಂತ 17,000 ಕ್ಕೂ ಹೆಚ್ಚು ಪ್ರದರ್ಶನಗಳು ಕಾಣಲಿದ್ದು, ಅದರ ಸುಮಾರು 7 ಲಕ್ಷಕ್ಕೂ ಅದಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಚಿತ್ರಮಂದಿರಗಳು ತಡರಾತ್ರಿ ಮತ್ತು ಮಧ್ಯರಾತ್ರಿಯ ನಂತರದ ಪ್ರದರ್ಶನಗಳನ್ನು ನಡೆಸಲು ನಿರ್ಧರಿಸಿವೆ. ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಅಬ್ಬರ ಜೋರಾಗಿದ್ದು, ಮೊದಲ ವಾರಾಂತ್ಯದ ಮುಂಗಡ ಟಿಕೆಟ್‌ ಸೇಲ್‌ನಿಂದ 75 ಕೋಟಿ ರೂ. ಗಳಿಕೆ ಆಗಿದೆ ಎಂದು ವರದಿಗಳು ತಿಳಿಸಿವೆ. ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಬರೀ ಮುಂಗಡ ಬುಕಿಂಗ್ ಒಂದರಲ್ಲೇ ಸುಮಾರು 155 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಈ ಚಿತ್ರತಂಡ ಪಡೆದುಕಂಡಿದೆ.

ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಆದಿತ್ಯ ಧರ್‌ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ.

'ಧುರಂಧರ್ - ಪಾರ್ಟ್‌ 1' ಚಿತ್ರವು ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿ ಅತಿದೊಡ್ಡ ಯಶಸ್ಸು ಕಂಡಿತ್ತು ಮತ್ತು 75 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿತ್ತು. ಇದೀಗ ಎಲ್ಲರ ಕಣ್ಣು ಪಾರ್ಟ್‌ 2 ಮೇಲಿದೆ. ಇದರ ಅವಧಿ ಭರ್ತಿ 3 ಗಂಟೆ 55 ನಿಮಿಷ ಇರುವುದು ಇನ್ನೊಂದು ದಾಖಲೆ.