ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನೋ toxicity, ಓನ್ಲೀ ಧುರಂಧರ್‌ʼ; ಯಶ್‌ ಸಿನಿಮಾವನ್ನೇ ಟ್ರೋಲ್‌ ಮಾಡಿದ್ರಾ ನಟಿ ಸಾರಾ ಅರ್ಜುನ್?‌ ಅಸಲಿ ವಿಚಾರ ಇಲ್ಲಿದೆ!

Sara Arjun Toxic Movie Controversy: 'ಧುರಂಧರ್ 2' ನಟಿ ಸಾರಾ ಅರ್ಜುನ್ ಅವರು ಯಶ್ ಅವರ 'ಟಾಕ್ಸಿಕ್' ಸಿನಿಮಾವನ್ನು ಟ್ರೋಲ್ ಮಾಡಿದ್ದಾರೆ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ನೋ ಟಾಕ್ಸಿಸಿಟಿ, ಓನ್ಲಿ ಧುರಂಧರ್" ಎಂಬ ಈ ಟ್ವೀಟ್ ನಕಲಿ ಖಾತೆಯಿಂದ ಬಂದಿದ್ದು, ಇದಕ್ಕೆ ಸಾರಾ ತಂದೆ ರಾಜ್ ಅರ್ಜುನ್ ಗರಂ ಆಗಿದ್ದಾರೆ.

ash: ಟಾಕ್ಸಿಕ್‌ ಚಿತ್ರವನ್ನೇ ಟ್ರೋಲ್‌ ಮಾಡಿದ್ರಾ ʻಧುರಂಧರ್ʼ ನಟಿ‌ ಸಾರಾ?‌

-

Avinash GR
Avinash GR Mar 9, 2026 1:25 PM

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮಾರ್ಚ್‌ 19ರಂದು ರಣವೀರ್ ಸಿಂಗ್‌ ನಟನೆಯ 'ಧುರಂಧರ್: ದಿ ರಿವೆಂಜ್' ಮತ್ತು ಯಶ್‌ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರಗಳ ನಡುವೆ ಮುಖಾಮುಖಿ ಆಗಬೇಕಿತ್ತು. ಆದರೆ, ಮಧ್ಯಪ್ರಾಚ್ಯ ದೇಶಗಳ ಯುದ್ಧದ ಭೀತಿಯಿಂದ 'ಟಾಕ್ಸಿಕ್' ಚಿತ್ರದ ಬಿಡುಗಡೆ ಮುಂದೂಡಿಕೆ ಆಗಿತ್ತು. ಅದರಿಂದ ಬಾಕ್ಸ್‌ ಆಫೀಸ್‌ ವಾರ್‌ ತಣ್ಣಗಾಗಿತ್ತು. ಆದರೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಅದೇನು? ಮುಂದೆ ಓದಿ.

ಸಾರಾ ಅರ್ಜುನ್‌ ತಂದೆ ಗರಂ

ಧುರಂಧರ್ 2 ಚಿತ್ರದ ನಟಿ ಸಾರಾ ಅರ್ಜುನ್‌ ಅವರು 'ಟಾಕ್ಸಿಕ್' ಚಿತ್ರದ ಬಿಡುಗಡೆ ಮುಂದೂಡಿಕೆಯನ್ನು ಲೇವಡಿ ಮಾಡುವ ರೀತಿಯಲ್ಲಿ ನಕಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ. ಸಾರಾ ಅರ್ಜುನ್‌ ಹೆಸರಿನ ಟ್ವಿಟರ್‌ ಪೇಜ್‌ನಲ್ಲಿ "ನೋ ಟಾಕ್ಸಿಸಿಟಿ, ಓನ್ಲಿ ಧುರಂಧರ್ (ವಿಷತ್ವ ಬೇಡ, ಧುರಂಧರ್ ಮಾತ್ರ ಬೇಕು)" ಎಂಬ ಟ್ವೀಟ್‌ ವೈರಲ್‌ ಆಗಿದೆ. ಆದರೆ ಇದು ಸಾರಾ ಅರ್ಜುನ್‌ ಅವರ ಪೇಜ್‌ ಅಲ್ಲ. ಬದಲಿಗೆ, ಇದು ಫ್ಯಾನ್ಸ್‌ ಪೇಜ್‌ ಆಗಿದೆ. ಆದರೆ ಈ ರೀತಿ ಟ್ವೀಟ್‌ ಮಾಡಿರುವುದಕ್ಕೆ ಸಾರಾ ಅರ್ಜುನ್‌ ತಂದೆ ಗರಂ ಆಗಿದ್ದಾರೆ. ಅಲ್ಲದೆ, ಈ ರೀತಿ ಮಾಡುವವರಿಗೆ ಸಾರಾ ತಂದೆ ಎಚ್ಚರಿಕೆ ನೀಡಿದ್ದಾರೆ. ‌

ಕನ್ನಡ ನಿರ್ಮಾಪಕರ ಬಿಗ್‌ ಬಜೆಟ್‌ ಸಿನಿಮಾದಲ್ಲಿ ʻಧುರಂಧರ್‌ʼ ಚೆಲುವೆ ಸಾರಾ ಅರ್ಜುನ್‌; ಏನ್‌ ರೋಲ್‌ ಗೊತ್ತಾ?

ಸಾರಾ ತಂದೆ ಹೇಳಿದ್ದೇನು?

ಸಾರಾ ಅವರ ತಂದೆ, ನಟ ರಾಜ್‌ ಅರ್ಜುನ್‌ ಅವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದು, "ಎಲ್ಲರಿಗೂ ನಮಸ್ಕಾರ, ಸಾರಾ ಹೆಸರಿನಲ್ಲಿ ನಕಲಿ ಅಕೌಂಟ್‌ನಿಂದ 'ನೋ ಟಾಕ್ಸಿಸಿಟಿ, ಓನ್ಲಿ ಧುರಂಧರ್' ಎಂದು ಪೋಸ್ಟ್ ಹರಿದಾಡುತ್ತಿದೆ. ಅಸಲಿಗೆ, ಸಾರಾ ಟ್ವಿಟರ್‌ ಅಕೌಂಟ್‌ ಅನ್ನೇ ಹೊಂದಿಲ್ಲ. ಅವಳು ಎಂದಿಗೂ ಇಂತಹದನ್ನು ಬರೆಯುವುದಿಲ್ಲ" ಎಂದು ಹೇಳಿದ್ದಾರೆ.

ʻಧುರಂಧರ್‌ʼ ಚಿತ್ರದ ನಟಿ ಸಾರಾ ಅರ್ಜುನ್‌ ಭುಜಕ್ಕೆ ಮುತ್ತು ಕೊಟ್ಟಿದ್ದ ರಾಕೇಶ್‌ ಬೇಡಿ; ನೆಟ್ಟಿಗರ ಟೀಕೆಗಳಿಗೆ ಸಿಕ್ತು ಭಾವನಾತ್ಮಕ ಪ್ರತಿಕ್ರಿಯೆ!

ಒಬ್ಬ ಕಾಳಜಿಯುಳ್ಳ ತಂದೆಯಾಗಿ ಕೇಳುತ್ತಿದ್ದೇನೆ

"ನಾವೆಲ್ಲರೂ ಒಂದೇ ಚಿತ್ರರಂಗಕ್ಕೆ ಸೇರಿದವರು, ಇದು ನಮಗೆ ಒಂದು ದೊಡ್ಡ ಕುಟುಂಬದಂತೆ. ಪ್ರತಿ ಕಲಾವಿದರನ್ನು ಮತ್ತು ಪ್ರತಿ ಚಿತ್ರವನ್ನು ಗೌರವಿಸುವುದನ್ನು ಸಾರಾಗೆ ನಾವು ಕಲಿಸಿದ್ದೇವೆ. ಇನ್ನೊಬ್ಬರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿ, ತನ್ನ ಕೆಲಸವನ್ನು ಪ್ರಚಾರ ಮಾಡುವ ವ್ಯಕ್ತಿ ಸಾರಾ ಅಲ್ಲ. ಅವರಳು ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಇದ್ದಾಳೆ. ಬೇರೆ ಯಾವುದೇ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ನಲ್ಲಿ ಇಲ್ಲ. ಆಕೆಯ ಹೆಸರಿನಲ್ಲಿ ಇರುವ ಅಕೌಂಟ್‌ಗಳೆಲ್ಲಾ ನಕಲಿ. ದಯವಿಟ್ಟು ಇಂತಹ ಪೋಸ್ಟ್‌ಗಳನ್ನು ನಂಬಬೇಡಿ ಮತ್ತು ಅವುಗಳನ್ನು ವೈರಲ್‌ ಮಾಡಬೇಡಿ.. ಒಬ್ಬ ಕಾಳಜಿಯುಳ್ಳ ತಂದೆಯಾಗಿ ಕೇಳುತ್ತಿದ್ದೇನೆ" ಎಂದು ರಾಜ್‌ ಅರ್ಜುನ್ ಅವರು ಹೇಳಿಕೊಂಡಿದ್ದಾರೆ.

ರಾಜ್‌ ಅರ್ಜುನ್‌ ಪೋಸ್ಟ್

'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಸಾರಾ ಅರ್ಜುನ್ ಅವರು ಯಾಲಿನಾ ಜಮೀಲ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ರಣವೀರ್ ಸಿಂಗ್ ಅವರ ಹಮ್ಜಾ ಅಲಿ ಮಜಾರಿ ಪಾತ್ರದ ಗೆಳತಿಯಾಗಿ ಕಾಣಿಸಿಕೊಂಡಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್ ಮಾಧವನ್, ರಾಕೇಶ್ ಬೇಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 19ರಂದು ವಿವಿಧ ಭಾಷೆಗಳಲಿ ತೆರೆಗೆ ಬರುತ್ತಿದೆ.