ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಟಾಕ್ಸಿಕ್‌ʼ ಪೋಸ್ಟ್‌ಪೋನ್‌ ಆದರೂ ʻಧುರಂಧರ್‌ 2ʼ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಎದುರಾಗಲಿದೆ ಫೈಟ್;‌ ಭರ್ಜರಿ ಕಲೆಕ್ಷನ್‌ ಮಾಡುವುದು ಸುಲಭವಿಲ್ಲ!

Dhurandhar 2: ರಣವೀರ್‌ ಸಿಂಗ್ ಅಭಿನಯದ ಬಹುನಿರೀಕ್ಷಿತ ʻಧುರಂಧರ್‌ 2ʼ ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರುತ್ತಿದ್ದು, ಯಶ್ ಅವರ 'ಟಾಕ್ಸಿಕ್' ಮುಂದೂಡಲ್ಪಟ್ಟಿರುವುದು ಚಿತ್ರಕ್ಕೆ ವರದಾನವಾಗಲಿದೆ ಎನ್ನಲಾಗಿತ್ತು. ಆದರೆ, ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಪ್ರೀ-ಪೋನ್ ಆಗಿರುವುದು ಮತ್ತು ಕನ್ನಡದ 'ಲವ್ ಮಾಕ್ಟೇಲ್ 3' ಬಿಡುಗಡೆಯಾಗುತ್ತಿರುವುದು ರಣವೀರ್ ಸಿಂಗ್‌ಗೆ ದಕ್ಷಿಣ ಭಾರತದಲ್ಲಿ ಕೊಂಚ ಸವಾಲಾಗಿದೆ.

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ಅಭಿನಯದ ʻಧುರಂಧರ್‌ 2ʼ ಸಿನಿಮಾವು ಮಾರ್ಚ್‌ 19ರಂದು ತೆರೆಗೆ ಬರುತ್ತಿದೆ. ಅಂದು ಯಶ್‌ ಅವರ ಟಾಕ್ಸಿಕ್‌ ಸಿನಿಮಾ ಕೂಡ ರಿಲೀಸ್‌ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಟಾಕ್ಸಿಕ್‌ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಗಾಗಿ, ಸೋಲೋ ರಿಲೀಸ್‌ ಆಗುವ ಖುಷಿಯಲ್ಲಿ ʻಧುರಂಧರ್‌ 2ʼ ಸಿನಿಮಾ ಟೀಮ್‌ ಇದೆ. ಮಾ.19ರ ರಜಅ ದಿನಗಳನ್ನು ಎನ್‌ಕ್ಯಾಶ್‌ ಮಾಡಿಕೊಂಡು ಭರ್ಜರಿ ಲಾಭ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿದೆ. ಆದರೆ ದಕ್ಷಿಣ ಭಾರತದಲ್ಲಿ ಅದು ಅಷ್ಟು ಸುಲಭವಿಲ್ಲ! ಯಾಕೆ ಗೊತ್ತಾ? ಮುಂದೆ ಓದಿ.

ತೆಲುಗು ಸ್ಟೇಟ್ಸ್‌ ಮತ್ತು ಕರ್ನಾಟಕದಿಂದ ದೊಡ್ಡ ಲಾಭ

ಹೌದು, ʻಧುರಂಧರ್‌ʼ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಭರ್ಜರಿ ಕಮಾಯಿ ಆಗಿದ್ದು, ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಅಂದಾಜು 110 ಕೋಟಿ ರೂ. ಗಳಿಕೆ ʻಧುರಂಧರ್‌ʼ ಚಿತ್ರಕ್ಕೆ ಆಗಿತ್ತು. ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ಅಷ್ಟೇನೂ ಮ್ಯಾಜಿಕ್‌ ಮಾಡಿರಲಿಲ್ಲ. ಇವೆರಡೂ ರಾಜ್ಯಗಳಿಂದ ಆಗಿದ್ದ ಗಳಿಕೆ 10+ ಕೋಟಿ ರೂ. ಮಾತ್ರ. ಆದರೆ ಈ ಬಾರಿ ʻಧುರಂಧರ್‌ 2ʼ ಚಿತ್ರಕ್ಕೆ ಕೊಂಚ ಸವಾಲು ಇದೆ ಎಂದೇ ಹೇಳಬಹುದು.

Toxic: ಯಶ್‌ ತೆಗೆದುಕೊಂಡ ಒಂದು ನಿರ್ಧಾರದಿಂದ ಚಿತ್ರರಂಗದ ಲೆಕ್ಕಾಚಾರಗಳೇ ಬುಡಮೇಲು! ಪವನ್‌ ಕಲ್ಯಾಣ್‌ ಸಿನಿಮಾ ರಿಲೀಸ್‌ ಡೇಟ್‌ ಕೂಡ ಚೇಂಜ್!‌

ತೆಲುಗು ರಾಜ್ಯಗಳಲ್ಲಿ ಪವನ್‌ ಅಬ್ಬರ

ಹೌದು, ಟಾಕ್ಸಿಕ್‌ ಸಿನಿಮಾ ಪೋಸ್ಟ್‌ಪೋನ್‌ ಆಗುತ್ತಿದ್ದಂತೆಯೇ ಪವನ್‌ ಕಲ್ಯಾನ್‌ ಅವರ ಉಸ್ತಾದ್‌ ಭಗತ್‌ ಸಿಂಗ್‌ ಸಿನಿಮಾವನ್ನು ಪ್ರೀ-ಪೋನ್‌ ಮಾಡಲಾಗಿದೆ. ಮಾ.19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಅದರಲ್ಲೂ ತೆಲುಗು ರಾಜ್ಯಗಳಲ್ಲಿನ ಪವನ್‌ ಕಲ್ಯಾನ್‌ ಅವರ ಫ್ಯಾನ್ಸ್‌ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅಲ್ಲಿನ ಹಲವು ಚಿತ್ರಮಂದಿರಗಳು ಉಸ್ತಾದ್‌ ಭಗತ್‌ ಸಿಂಗ್‌ ಸಿನಿಮಾಗೆ ಮೀಸಲಾಗುವುದು ಖಚಿತ. ಹಾಗಾಗಿ, ತೆಲುಗು ರಾಜ್ಯಗಳಲ್ಲಿ ಧುರಂಧರ್‌ 2 ಸಿನಿಮಾಗೆ ಭರ್ಜರಿ ಫೈಟ್‌ ಎದುರಾಗಲಿದೆ.

Yash's Toxic Postponed: 3 ತಿಂಗಳಿಗೆ 3 ಬಿಗ್‌ ಸಿನಿಮಾಗಳು ರಿಲೀಸ್;‌ ಭರ್ಜರಿ ಪ್ಲ್ಯಾನ್‌ ಜೊತೆ ಅಖಾಡಕ್ಕಿಳಿದ ಕನ್ನಡದ ಕೆವಿಎನ್‌ ಪ್ರೊಡಕ್ಷನ್ಸ್‌!

ಕರ್ನಾಟಕದಲ್ಲಿ ಲವ್‌ ಮಾಕ್‌ಟೇಲ್‌ 3

ಇನ್ನು, ಡಾರ್ಲಿಂಗ್‌ ಕೃಷ್ಣ ಅವರ ಲವ್‌ ಮಾಕ್‌ಟೇಲ್‌ 3 ಸಿನಿಮಾ ಮಾ.19ರಂ‌ದು ರಿಲೀಸ್ ಆಗುತ್ತಿದೆ. ಈ ಚಿತ್ರದ ಆಡಿಯೆನ್ಸೇ ಬೇರೆ ಇರುವುದರಿಂದ ಧುರಂಧರ್‌ 2ಗೆ ಅಷ್ಟೇನೂ ಎಫೆಕ್ಟ್‌ ಆಗೋದಿಲ್ಲ ಎನ್ನಲಾಗಿದೆ. ಆದರೆ ಮಲಯಾಳಂನಲ್ಲಿ ಅಂದು ಆಡು 3 ಎಂಬ ಸಿನಿಮಾ ರಿಲೀಸಾಗುತ್ತಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಜೊತೆಗೆ ಬಿಷ್ಮಾರ್‌, ಕಿರಾಟ ಇನ್ನೊಂದಿಷ್ಟು ಸಿನಿಮಾಗಳು ಕೂಡ ರಿಲೀಸ್‌ ಆಗಲಿವೆ. ತಮಿಳಿನಲ್ಲಿ ಯೂಥ್‌ ಸಿನಿಮಾ ರಿಲೀಸ್‌ ಆಗುತ್ತಿದ್ದು, ಈಗಾಗಲೇ ಹಾಡುಗಳಿಂದಲೇ ಈ ಚಿತ್ರ ಸದ್ದು ಮಾಡಿದೆ. ಜೊತೆಗೆ‌ ರೇಜ್ ಅನ್ನೋ ಮತ್ತೊಂದು ಸಿನಿಮಾ ಇದೆ. ಇವುಗಳ ಮಧ್ಯೆ ಧುರಂಧರ್‌ 2 ಸೌಂಡ್‌ ಮಾಡಲು ತುಸು ಕಷ್ಟಪಡಬೇಕಿದೆ. ಇದೆಲ್ಲದಕ್ಕೂ ಇನ್ನೂ 13 ದಿನಗಳಲ್ಲಿ ಉತ್ತರ ಸಿಗಲಿದೆ.