Yash's Toxic Postponed: 3 ತಿಂಗಳಿಗೆ 3 ಬಿಗ್ ಸಿನಿಮಾಗಳು ರಿಲೀಸ್; ಭರ್ಜರಿ ಪ್ಲ್ಯಾನ್ ಜೊತೆ ಅಖಾಡಕ್ಕಿಳಿದ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್!
KVN Productions Strategy: 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಿಕೆಯಾಗಿರುವುದು ಯಶ್ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮಾತ್ರ ಭರ್ಜರಿ ಪ್ಲಾನ್‌ನೊಂದಿಗೆ ಅಖಾಡಕ್ಕಿಳಿದಿದೆ. 3 ತಿಂಗಳಿಗೆ 3 ಚಿತ್ರಗಳನ್ನು ಬ್ಯಾಕ್-ಟು-ಬ್ಯಾಕ್ ರಿಲೀಸ್ ಮಾಡಲು ಸಂಸ್ಥೆ ಸಜ್ಜಾಗಿದೆ.
-
ನಟ ಯಶ್ ಅವರು ಬುಧವಾರ (ಮಾ.4) ಬೆಳಗ್ಗೆಯೇ ಸಿನಿಪ್ರಿಯರಿಗೆ ಒಂದು ಶಾಕ್ ನೀಡಿದರು. ಅದೇನಪ್ಪ ಅಂದರೆ, ʻಟಾಕ್ಸಿಕ್ʼ ಸಿನಿಮಾ ಪೋಸ್ಟ್‌ಪೋನ್ ಆಗಿದೆ ಅಂತ. ಈ ಸುದ್ದಿ ನಿಜಕ್ಕೂ ಫ್ಯಾನ್ಸ್‌ಗೆ ತುಂಬ ಬೇಸರ ನೀಡಿದ್ದಂತೂ ಸುಳ್ಳಲ್ಲ. ಈ ನಡುವೆ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಬಗ್ಗೆಯೂ ಚರ್ಚೆಗಳು ಶುರುವಾದವು. ಈ ಹಿಂದೆ ಇದೇ ಬ್ಯಾನರ್‌ನ ಜನ ನಾಯಗನ್ ಕೂಡ ಹೇಳಿದ ಟೈಮ್‌ಗೆ ರಿಲೀಸ್ ಆಗಲಿಲ್ಲ. ಈಗ ಟಾಕ್ಸಿಕ್ ಪೋಸ್ಟ್‌ಪೋನ್ ಆಗಿದೆ. ಆದರೆ ಕೆವಿಎನ್ ಪ್ರೊಡಕ್ಷನ್ಸ್‌ನ ಕಾರ್ಯತಂತ್ರವೇ ಬೇರೆ ಇದೆ ಎನ್ನುತ್ತವೆ ಮೂಲಗಳು!
ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ರಿಲೀಸ್
ಸದ್ಯ ಭಾರತದ ಟಾಪ್ ಪ್ರೊಡಕ್ಷನ್ಸ್‌ಗಳಲ್ಲಿ ಕೆವಿಎನ್ ಕೂಡ ಒಂದು. ಈಗಾಗಲೇ ದಳಪತಿ ವಿಜಯ್, ಯಶ್, ಧ್ರುವ ಸರ್ಜಾ, ಅಕ್ಷಯ್ ಕುಮಾರ್, ಚಿರಂಜೀವಿ ಮುಂತಾದ ನಟರ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಈ ಸಂಸ್ಥೆಯು ತಮ್ಮ ಮುಂದಿನ ಮೂರು ಬಿಗ್ ಬಜೆಟ್ ಸಿನಿಮಾಗಳನ್ನು ತಿಂಗಳೊಂದರಂತೆ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
Toxic Movie: ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್ ಪಾತ್ರ: ಯಾರಿದು ‘ಬೀರ’?
ಕೆಡಿ: ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ಕೆಡಿ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾವನ್ನು ಏಪ್ರಿಲ್ 30ರಂದು ರಿಲೀಸ್ ಮಾಡುವುದಾಗಿ ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಲಿದೆ.
ಜನ ನಾಯಗನ್: ಸೆನ್ಸಾರ್ ಸಮಸ್ಯೆಯಿಂದಾಗಿ ದಳಪತಿ ವಿಜಯ್ ಅವರ ಜನ ನಾಯಗನ್ ಸಿನಿಮಾ ಮುಂದೂಡಿಕೆ ಆಗಿದೆ. ವಿಜಯ್ ಮುಂದಿನ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದರಿಂದ ಆಗ ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವಿಲ್ಲ. ಆದರೆ ಮೇ ತಿಂಗಳಲ್ಲಿಯೇ ಚುನಾವಣೆ ಮುಗಿಯುವ ನಿರೀಕ್ಷೆ ಇದ್ದು, ಅದೇ ತಿಂಗಳಲ್ಲಿ ಜನ ನಾಯಗನ್ ಚಿತ್ರ ತೆರೆಕಾಣುವ ಸಾಧ್ಯತೆ ಇದೆ.
Toxic postponed: ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ; ಯಶ್ ಫ್ಯಾನ್ಸ್ ಶಾಕ್! ಕಾರಣ ಇದು
ಟಾಕ್ಸಿಕ್: ಯಶ್ ನಟನೆಯ ಟಾಕ್ಸಿಕ್ ಸಿನಿಮಾವನ್ನು ಮಾರ್ಚ್ 19ರಿಂದ ಜೂನ್ 4ಕ್ಕೆ ಮುಂದೂಡಿಕೆ ಮಾಡಲಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿನ ಯದ್ಧದ ಬಿಕ್ಕಟ್ಟನ್ನು ಕಂಡು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲಿಗೆ ಏಪ್ರಿಲ್, ಮೇ, ಜೂನ್ ತಿಂಗಳಿಗೆ ಮೂರು ಸಿನಿಮಾಗಳನ್ನು ಸಾಲಾಗಿ ಬಿಡುಗಡೆ ಮಾಡಲು ಕೆವಿಎನ್ ಪ್ಲ್ಯಾನ್ ಮಾಡಿಕೊಂಡಿದೆ.
ಟಾಕ್ಸಿಕ್ ಪೋಸ್ಟ್‌ಪೋನ್ ಮಾಡಲು ಕಾರಣವೇನು?
ಧುರಂಧರ್ 2 ಸಿನಿಮಾವು ಹಿಂದಿಯಲ್ಲಿ ಶೂಟ್ ಆಗಿದ್ದು, ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಲಿದೆ. ಅಲ್ಲದೆ, ಆ ಸಿನಿಮಾವನ್ನು ಗಲ್ಫ್ ರಾಷ್ಟ್ರಗಳು ಈ ಹಿಂದೆಯೇ ಬ್ಯಾನ್ ಮಾಡಿದ್ದವು. ಈಗ ಅಲ್ಲಿ ಯುದ್ಧ ನಡೆಯುತ್ತಿದ್ದರೂ, ಅದರಿಂದ ಧುರಂಧರ್‌ಗೆ ಏನೂ ನಷ್ಟವಿಲ್ಲ. ಆದರೆ ಟಾಕ್ಸಿಕ್ ವಿಚಾರ ಆ ರೀತಿ ಅಲ್ಲ. ಟಾಕ್ಸಿಕ್ ಸಿನಿಮಾವನ್ನು ಇಂಟರ್‌ನ್ಯಾಷನಲ್ ಆಡಿಯೆನ್ಸ್‌ನ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಶೂಟ್ ಮಾಡಲಾಗಿದೆ. ಹಾಗಾಗಿ, ಮಧ್ಯಪ್ರಾಚ್ಯ ದೇಶಗಳಲ್ಲಿನ ಕಲೆಕ್ಷನ್ ಕೂಡ ಮುಖ್ಯ. ಧುರಂಧರ್ ಅಲ್ಲಿ ರಿಲೀಸ್ ಆಗೋದಿಲ್ಲ ಎಂದಮೇಲೆ ಅಲ್ಲಿನ ಕಲೆಕ್ಷನ್ ಎಲ್ಲಾ ಟಾಕ್ಸಿಕ್‌ಗೆ ಸಿಗಲಿದೆ. ಆದರೆ ಈಗಿನ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಈ ಎಲ್ಲಾ ಕಾರಣಗಳಿಂದಲೇ ಯಶ್ ತಂಡ ಇಂಥದ್ದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ.
ವ್ಯವಹಾರ ಮುಗಿಸಿರುವ ಕೆವಿಎನ್
ಜನ ನಾಯಗನ್ ಮತ್ತು ಟಾಕ್ಸಿಕ್ ಸಿನಿಮಾಗಳಿಗಾಗಿಯೇ ಸಾವಿರಾರು ಕೋಟಿ ರೂ.ಗಳನ್ನು ಕೆವಿಎನ್ ಹೂಡಿಕೆ ಮಾಡಿದೆ. ಹೀಗೆ ಸಿನಿಮಾಗಳನ್ನು ಮುಂದೂಡಿಕೆ ಮಾಡಿದರೆ, ಟೆನ್ಷನ್ ಆಗೋದು ಸಹಜ. ಆದರೆ ಕೆವಿಎನ್‌ಗೆ ಆ ಸಮಸ್ಯೆ ಇಲ್ಲ ಎನ್ನುತ್ತವೆ ಮೂಲಗಳು. ಕಾರಣ, ಈಗಾಗಲೇ ಸಿನಿಮಾಗಳು ಪ್ರೀ-ರಿಲೀಸ್ ವ್ಯವಹಾರದಲ್ಲೇ ಉತ್ತಮ ಕಮಾಯಿಯನ್ನು ನಿರ್ಮಾಪಕರು ಮಾಡಿಕೊಂಡಿದ್ದಾರಂತೆ. ಸದ್ಯ ಚಿತ್ರಮಂದಿರಗಳಿಂದ ಎಷ್ಟು ಕಲೆಕ್ಷನ್ ಆಗಲಿದೆ ಎಂಬ ಲೆಕ್ಕಚಾರಕ್ಕಾಗಿ ಚಿತ್ರತಂಡ ಕಾಯುತ್ತಿದೆಯಂತೆ.
ಟಾಕ್ಸಿಕ್ ಪೋಸ್ಟ್‌ಪೋನ್ ಕುರಿತ ವಿಡಿಯೋ
ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣ
ಕೆಡಿ, ಟಾಕ್ಸಿಕ್, ಜನ ನಾಯಗನ್ ಮಾತ್ರವಲ್ಲ, ಕೆವಿಎನ್ ಪ್ರೊಡಕ್ಷನ್ಸ್ ಈಗ ಬೇರೆ ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಟನೆಯ ಹೊಸ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಅದರ ಶೂಟಿಂಗ್ ಮುಕ್ತಾಯವಾಗಿ, ಸದ್ಯ ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೆಯುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿ ಮತ್ತು ಬಾಬಿ ಕೊಲ್ಲಿ ಕಾಂಬಿನೇಷನ್‌ನ ಹೊಸ ಸಿನಿಮಾವನ್ನು ಕೆವಿಎನ್ ಹಣ ಸುರಿಯುತ್ತಿದ್ದು, ಶೂಟಿಂಗ್ ಕೆಲಸಗಳು ಕೂಡ ಆರಂಭವಾಗಿವೆ. ಮಾಲಿವುಡ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ʻಮಂಜುಮ್ಮೆಲ್ ಬಾಯ್ಸ್ʼ ಟೀಮ್ ಹೊಸ ಸಿನಿಮಾ ಆರಂಭಿಸಿದ್ದು, ಅದಕ್ಕೂ ಕೆವಿಎನ್ ಸಂಸ್ಥೆಯೇ ನಿರ್ಮಾಪಕರು.