ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ವಿರುದ್ದ ಎಫ್ ಐ ಆರ್ (FIR) ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಆಗಿದೆ. ಬಿ ಎನ್ ಕಾಯ್ದೆ 196,302,299 ಅಡಿಯಲ್ಲಿ ಕೇಸ್ ದಾಖಲು ಆಗಿದೆ. ಗೋವಾದಲ್ಲಿ (Goa) ನಡೆದಿದ್ದ ಫಿಲ್ಮ್ ಫೆಸ್ಟಿವಲ್ (Film Festival) ನಲ್ಲಿ ದೈವದ ಅಭಿನಯ ಮಾಡಿದ್ದರು. ಇದು ಅವಮಾನಿಸುವ ಮತ್ತು ಭಕ್ತರ ಭಾವನೆಗೆ ದಕ್ಕೆ ತರು ರೀತಿಯಲ್ಲಿ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಒಂದನೇ ಎಸಿಜೆಎಂ ನ್ಯಾಯಾಲಯದಲ್ಲಿ ದೂರುದಾರ ವಕೀಲ ಪ್ರಶಾಂತ್ ಮೇಥಲ್ ಖಾಸಗಿ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ನ್ಯಾಯಾಲಯದ ಆದೇಶ ಮಾಡಿತ್ತು. ನ್ಯಾಯಾಲಯದ ಆದೇಶದ ಅನ್ವಯ ಎಫ್ ಐ ಆರ್ ದಾಖಲು ಆಗಿದೆ.
ಏನಿದು ಆರೋಪ?
ಎಫ್ ಐ ಆರ್ ನಲ್ಲಿ ಕರಾವಳಿಯಲ್ಲಿ ಆರಾದಿಸುವ ಚಾವುಂಡಿ , ಗುಳಿಗ , ಪಂಜುರ್ಲಿ ದೈವಗಳನ್ನು ಅಳುಗಿಸುವ ಹಾಗು ಅವಮಾನಿಸುವ ಉದ್ದೇಶದಿಂದ ಕೃತ್ಯ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: L R Shivaramegowda: ಅಂಬರೀಶ್ ಬಗ್ಗೆ ಕೇವಲ ಮಾತು: ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್
ದೂರುದಾರರು ತಾವು ಕರಾವಳಿ ಕರ್ನಾಟಕದಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ ಭೂತಕೋಲ ವಿಧಿಗಳಲ್ಲಿ ಪೂಜಿಸಲ್ಪಡುವ ಪವಿತ್ರ ರಕ್ಷಕ ದೈವವಾದ ಚಾವುಂಡಿ ದೈವ ಅವರ ಭಕ್ತರಾಗಿದ್ದು, ಆ ದೈವವು ತಮ್ಮ ಕುಟುಂಬದ ದೈವವೂ ಆಗಿದೆ ಎಂದು ತಿಳಿಸಿದ್ದಾರೆ. ಅವರು ಬಾಲ್ಯದಿಂದಲೇ ಆ ದೈವಿಯನ್ನು ಅಪಾರ ಭಕ್ತಿಭಾವದಿಂದ ಆರಾಧಿಸುತ್ತಾ ಬಂದಿರುವುದಾಗಿ ತಿಳಿಸಿದ್ದಾರೆ.
ಕಾಂತಾರ: ಚಾಪ್ಟರ್ 1 ಚಿತ್ರದ ನಾಯಕನ ಸಮ್ಮುಖದಲ್ಲೇ ಪವಿತ್ರ ದೈವ ಪರಂಪರೆಯನ್ನು ಅವಮಾನಿಸುವ ಹಾಗೂ ಹಾಸ್ಯಾಸ್ಪದವಾಗಿ ನಿಂದಿಸುವ ಕೃತ್ಯಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಇರೋದೇನು?
ಆರೋಪಿತರು ಪಂಜುರ್ಲಿ / ಗುಳಿಗ ದೈವರ ದೈವಿಕ ಅಭಿವ್ಯಕ್ತಿಗಳನ್ನು ಅಸಭ್ಯ, ಹಾಸ್ಯಾತ್ಮಕ ಹಾಗೂ ಅವಮಾನಕಾರಿಯಾಗಿ ಅನುಕರಿಸಿದ್ದಾರೆ ಹಾಗೂ ಪವಿತ್ರ ಚಾವುಂಡಿ ದೈವರನ್ನು “ಹೆಣ್ಣು ಭೂತ” ಎಂದು ಮಾತಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ದೂರುದಲ್ಲಿ ತಿಳಿಸಲಾಗಿದೆ. ಇದಲ್ಲದೇ, ದೈವದ ಅಭಿನಯವನ್ನು ಮಾಡಬೇಡಿ ಎಂದು ವಿನಂತಿಸಿದ್ದರೂ ಸಹ, ಆರೋಪಿತರು ಕಾಂತಾರ: ಚಾಪ್ಟರ್ 1 ಚಿತ್ರದ ಭಾವನಾತ್ಮಕ “ಚಾವುಂಡಿ ದೈವ” ದೃಶ್ಯವನ್ನು ಅಭಿನಯಿಸಿದ್ದಾರೆ ಎಂಬ ಆರೋಪವೂ ಇದೆ.
ದೂರುದಾರರು ಸ್ಪಷ್ಟಪಡಿಸುವಂತೆ, ಚಾವುಂಡಿ ದೈವವು ಹೆಣ್ಣು ಭೂತವಲ್ಲ; ಅದು ನ್ಯಾಯ, ರಕ್ಷಣೆ ಮತ್ತು ದೈವಿಕ ಸ್ತ್ರೀಶಕ್ತಿಯನ್ನು ಪ್ರತಿನಿಧಿಸುವ ಶಕ್ತಿಶಾಲಿ ಹಾಗೂ ಉಗ್ರ ರಕ್ಷಕ ದೈವವಾಗಿದ್ದು, ಕರಾವಳಿ ಪ್ರದೇಶದ ಜನರಿಗೆ ಅತ್ಯಂತ ಆಳವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಆ ದೈವವನ್ನು ಭೂತ ಎಂದು ಕರೆಯುವುದು ಧರ್ಮನಿಂದನೀಯವಾಗಿದ್ದು, ಹಿಂದೂ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳಿಗೆ ಗಂಭೀರ ಅವಮಾನವಾಗಿದೆ ಎಂದು ವಿವರಿಸಲಾಗಿದೆ.
ತಮ್ಮ ಕೃತ್ಯದಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬುದನ್ನು ತಿಳಿದಿದ್ದರೂ ಸಹ, ಅಂತರರಾಷ್ಟ್ರೀಯ ವೇದಿಕೆಯ ಮೇಲೆ ಈ ಕೃತ್ಯವನ್ನು ನಡೆಸಿದ್ದಾರೆ. ಈ ಪ್ರದರ್ಶನದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ದೂರುದಾರರು ಹಾಗೂ ಇತರ ಭಕ್ತರಿಗೆ ತೀವ್ರ ಮಾನಸಿಕ ವೇದನೆ, ಕೋಪ ಮತ್ತು ಅಸಮಾಧಾನ ಉಂಟಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Arijit Singh: ಅರಿಜಿತ್ ಸಿಂಗ್ ಸಿಂಗಿಂಗ್‌ಗೆ ಗುಡ್‌ಬೈ ಹೇಳಲು ಕಾರಣ ಇದು?
ಇನ್ನು ಆರೋಪಿತನ ಕೃತ್ಯವು ಉದ್ದೇಶಪೂರ್ವಕ, ಜಾಣ್ಮೆಯಿಂದ ಹಾಗೂ ದುರುದ್ದೇಶದಿಂದ ನಡೆಸಲ್ಪಟ್ಟಿದ್ದು, ತಮ್ಮ ಧಾರ್ಮಿಕ ಭಾವನೆಗಳಷ್ಟೇ ಅಲ್ಲದೆ, ಲಕ್ಷಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ಧರ್ಮದ ಆಧಾರದ ಮೇಲೆ ವಿವಿಧ ಸಮೂಹಗಳ ನಡುವೆ ಶತ್ರುತ್ವ, ದ್ವೇಷ ಮತ್ತು ಅಸಮ್ಮತಿ ಉಂಟುಮಾಡುವುದು, ಪವಿತ್ರ ದೈವ ಪರಂಪರೆಯ ಅವಮಾನಕ್ಕೆ ಕಾರಣವಾಗುವುದು ಹಾಗೂ ಸಾಮಾಜಿಕ ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಭಂಗಗೊಳಿಸುವ ಉದ್ದೇಶ ಹೊಂದಿತ್ತು ಎಂದು ದೂರುದಾರರು ಆರೋಪಿಸಿದ್ದಾರೆ.