ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಲ್ಲುಅರ್ಜುನ್‌-ರಶ್ಮಿಕಾ ಜೋಡಿಯ ‘ಪುಷ್ಪ 2' ದಾಖಲೆ ಮುರಿದು ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ರಣವೀರ್ ಸಿಂಗ್ ನಟನೆಯ ʼಧುರಂಧರ್ʼ

Dhurandhar Box Office: ರಣವೀರ್ ಸಿಂಗ್ ನಟನೆಯ ʼಧುರಂಧರ್ʼ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದು 2025ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಈ ಮೊದಲಿನ ಹಿಟ್ ಚಿತ್ರಗಳ‌ ದಾಖಲೆಗಳನ್ನೆಲ್ಲ ‘ಧುರಂಧರ್’ ಬ್ರೇಕ್ ಮಾಡಿದೆ. ಇದೀಗ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಜೋಡಿಯ 'ಪುಷ್ಪ 2' ಚಿತ್ರದ ಹಿಂದಿ ಆವೃತ್ತಿಯ ದಾಖಲೆಯನ್ನು ಮುರಿದು ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ ಎಂಬ ಬಿರುದು ಗಳಿಸಿದೆ.

ರಣವೀರ್ ಅಬ್ಬರ ಜೋರು: 'ಪುಷ್ಪ 2’ ದಾಖಲೆ ಅಳಿಸಿದ ʼಧುರಂಧರ್ʼ

ʼಧುರಂಧರ್ʼ ಸಿನಿಮಾದ ದೃಶ್ಯ -

Profile
Pushpa Kumari Jan 7, 2026 7:01 PM

ಮುಂಬೈ, ಡಿ. 7: ಬಾಲಿವುಡ್‌ನ ʼಧುರಂದರ್ʼ ಚಿತ್ರದ (Dhurandhar Movie) ಹವಾ ಇನ್ನಷ್ಟು ಜೋರಾಗಿದೆ. ಈಗಾಗಲೇ ಸಿನಿಮಾವು ಎಲ್ಲಕಡೆ ಧೂಳೆಬ್ಬಿಸಿದ್ದು ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ‌ಪಾಕಿಸ್ತಾನದಲ್ಲಿ ನಡೆಯುವ ರಕ್ಷಣಾ ಬೇಹುಗಾರಿಕೆ ಕುರಿತಾದ ಈ ಚಿತ್ರದಲ್ಲಿ ಆರ್‌. ಮಾಧವನ್‌, ಅರ್ಜುನ್ ರಾಮ್‌ಪಾಲ್‌, ಸಂಜಯ್‌ ದತ್‌, ಸಾರಾ ಅರ್ಜುನ್‌ ಸೇರಿದಂತೆ ಖ್ಯಾತ ನಟರು ಕಾಣಿಸಿಕೊಂಡಿದ್ದಾರೆ. ಸದ್ಯ ಇದು 2025ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಅಲ್ಲದೆ ಈ ಮೊದಲಿನ ಹಿಟ್ ಚಿತ್ರಗಳ‌ ದಾಖಲೆಗಳನ್ನು ‘ಧುರಂಧರ್’ ಬ್ರೇಕ್ ಮಾಡಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಚಿತ್ರದ ಹಿಂದಿ ಆವೃತ್ತಿಯ ದಾಖಲೆಯನ್ನು ಮುರಿದು ಅತಿ ಹೆಚ್ಚು ಗಳಿಕೆ ಸಿನಿಮಾ ಎಂಬ ಬಿರುದಿಗೆ ಪಾತ್ರವಾಗಿದೆ.

ಬಿಡುಗಡೆಯಾಗಿ 33 ದಿನಗಳು ಕಳೆದಿದ್ದು ಚಿತ್ರವನ್ನು ನಿರ್ಮಿಸಿದ ಜಿಯೋ ಸ್ಟುಡಿಯೋಸ್ ʼಧುರಂಧರ್ʼ ಭಾರತದ ಅತಿ ಹೆಚ್ಚು ಗಳಿಸಿದ ಹಿಂದಿ ಚಿತ್ರ ಎಂದು ಘೋಷಿಸುವ ಪೋಸ್ಟರ್ ಹಂಚಿಕೊಂಡಿದೆ. ಮಾಹಿತಿಯ ಪ್ರಕಾರ, ಸಿನಿಮಾ ಭಾರತದಲ್ಲಿ ಇದುವರೆಗೆ 831.40 ಕೋಟಿ ರುಪಾಯಿ ಕಲೆಕ್ಷನ್ ಗಳಿಸಿದೆ. ಈ ಅಂಕಿಅಂಶಗಳ ಪ್ರಕಾರ, ʼಧುರಂಧರ್ʼ ಈಗ ʼಪುಷ್ಪ 2ʼರ ಹಿಂದಿ ಆವೃತ್ತಿಯ ಒಟ್ಟು 821 ಕೋಟಿ ರುಪಾಯಿ ಕಲೆಕ್ಷನ್‌ ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಜಿಯೋ ಸ್ಟುಡಿಯೋಸ್‌ನ ಎಕ್ಸ್‌ ಪೋಸ್ಟ್‌:



ʼಪುಷ್ಪʼ ಚಿತ್ರವನ್ನು ಮೀರಿ ʼಧುರಂಧರ್ʼ ಹೊಸ ದಾಖಲೆ ನಿರ್ಮಿಸಿದೆ. ಹಿಂದಿಯಲ್ಲಿ ʼಛಾವಾʼ 601 ಕೋಟಿ ರುಪಾಯಿ ಗಳಿಸಿದರೆ, ʼಜವಾನ್ʼ 586 ಕೋಟಿ ರುಪಾಯಿ ಸಂಗ್ರಹಿಸಿದೆ. ʼಸ್ತ್ರೀ 2ʼ, ʼಗದರ್ 2ʼ, ʼʼಪಠಾಣ್ʼ, ʼಅನಿಮಲ್ʼ ಮತ್ತು ʼಬಾಹುಬಲಿ 2ʼ ಕಲೆಕ್ಷನ್‌ 500 ಕೋಟಿ ರುಪಾಯಿ ದಾಟಿದೆ. ಈ ಸಿನಿಮಾದ ವಿಶೇಷತೆಯೆಂದರೆ ಯಾವುದೇ ದಕ್ಷಿಣ ಭಾರತದ ಭಾಷೆಯ ಬೆಂಬಲ ಇಲ್ಲದೆ ಕೇವಲ ಹಿಂದಿಯಲ್ಲಿ‌ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ʼಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್‌ಗೆ ನಾಯಕಿಯಾಗಿ ಸಾರಾ ಅರ್ಜುನ್ ಅಭಿನಯಿಸಿದ್ದಾರೆ. ಚಿತ್ರ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.