ರಣವೀರ್ ಸಿಂಗ್, ಸಂಜಯ್ ದತ್ ನಟನೆಯ ʻಧುರಂಧರ್ 2ʼ ಸಿನಿಮಾವು ದೇಶಾದ್ಯಂತ ಭರ್ಜರಿಯಾಗಿ ಕಮಾಯಿ ಮಾಡುತ್ತಿದೆ. ಈಗಾಗಲೇ ಮೂರೇ ದಿನಕ್ಕೆ ಈ ಚಿತ್ರದ ಗಳಿಕೆಯು 500 ಕೋಟಿ ರೂ. ಗಡಿ ಸಮೀಪದಲ್ಲಿದೆ. ಕರ್ನಾಟಕದಲ್ಲೂ ಉತ್ತಮ ಓಪನಿಂಗ್ ಪಡೆದುಕೊಂಡಿರುವ ʻಧುರಂಧರ್ 2ʼ ಸಿನಿಮಾಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಒಂದು ಬೆಳವಣಿಗೆ ಮಾತ್ರ ಕನ್ನಡಿಗರಿಗೆ ಬೇಸರ ಮೂಡಿಸಿದೆ.
ಬೆಂಗಳೂರಿನಲ್ಲಿ ಕನ್ನಡ ವರ್ಷನ್ನೇ ಇಲ್ಲ!
ʻಧುರಂಧರ್ 1ʼ ಸಿನಿಮಾವು ಹಿಂದಿಯಲ್ಲಿ ಮಾತ್ರ ತೆರೆಕಂಡಿತ್ತು. ಆದರೆ, ʻಧುರಂಧರ್ 2ʼ ಸಿನಿಮಾವು ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆ ಕುರಿತಂತೆ ಪ್ರಚಾರ ಮಾಡಲಾಗಿತ್ತು. ಇದರಿಂದ ಕನ್ನಡಿಗರು ಖುಷಿಯಾಗಿದ್ದರು. ಆದರೆ ಪೇಯ್ಡ್ ಪ್ರೀಮಿಯರ್ ಶೋಗಳು ಬರೀ ಹಿಂದಿಯಲ್ಲೇ ನಡೆದವು. ರಿಲೀಸ್ ದಿನವೂ ಕೂಡ ಕನ್ನಡ, ತೆಲುಗು ಇನ್ನಿತರ ಭಾಷೆಯ ವರ್ಷನ್‌ಗಳು ತೆರೆಕಾಣಲಿಲ್ಲ. ಬರೀ ಹಿಂದಿ ವರ್ಷನ್ ಮಾತ್ರ ತೆರೆಕಂಡಿತು. ಸದ್ಯ ಎಲ್ಲಾ ಭಾಷೆಯ ವರ್ಷನ್‌ಗಳು ಈಗ ರಿಲೀಸ್ ಆಗಿವೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆಯೇ ಸಿಗುತ್ತಿದೆ. ವಿಪರ್ಯಾಸವೆಂದರೆ, ʻಧುರಂಧರ್ 2ʼ ಕನ್ನಡ ವರ್ಷನ್‌ಗೆ ಬೆಂಗಳೂರಿನಲ್ಲಿ ಶೋ ಇಲ್ಲ! ಬುಕ್ ಮೈ ಶೋನಲ್ಲಿ ಹುಡುಕಿದರೂ ಒಂದು ಶೋ ಕಾಣಿಸ್ತಿಲ್ಲ.
Dhurandhar 2 Review: ಧುರಂಧರ್ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ
ತೆಲುಗು - ತಮಿಳು ವರ್ಷನ್ ಇದೆ
ಮತ್ತೊಂದು ಬೇಸರದ ಸಂಗತಿ ಎಂದರೆ, ಬೆಂಗಳೂರಿನಲ್ಲಿ ಹಿಂದಿ ವರ್ಷನ್‌ಗೆ 700ಕ್ಕೂ ಅಧಿಕ ಶೋಗಳನ್ನು ನೀಡಲಾಗಿದೆ. ಜೊತೆಗೆ ತಮಿಳು ಮತ್ತು ತೆಲುಗು ವರ್ಷನ್‌ಗಳಿಗೆ ಬೆಂಗಳೂರಿನಲ್ಲಿ ಶೋಗಳನ್ನು ನೀಡಲಾಗಿದೆ. ಕನ್ನಡಿಗರಿಗೆ ಈ ಸಿನಿಮಾವನ್ನು ಕನ್ನಡದಲ್ಲಿ ನೋಡಲು ಕನ್ನಡ ವರ್ಷನ್ ಇಲ್ಲ. ಆದರೆ ಕನ್ನಡಿಗರು ಇರುವ ಬೆಂಗಳೂರಿನಲ್ಲಿ ಧುರಂಧರ್ 2 ತಮಿಳು ಮತ್ತು ತೆಲುಗು ವರ್ಷನ್ ಇರುವುದು ದೊಡ್ಡ ವಿಪರ್ಯಾಸವಾಗಿದೆ. ಈ ಬಗ್ಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ.
Dhurandhar 2: 'ಧುರಂಧರ್ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಪ್ರತಿ ಬಾರಿ ಇದೇ ಸಮಸ್ಯೆ!
ಸಾಮಾನ್ಯವಾಗಿ ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡಕ್ಕೂ ಡಬ್ ಮಾಡುತ್ತೇವೆ ಎಂದು ಹೆಸರಿಗಷ್ಟೇ ಹೇಳುತ್ತಾರೆಯೇ ವಿನಃ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುವುದಿರಲಿ, ಕನ್ನಡಕ್ಕೂ ಡಬ್ಬಿಂಗ್ ವರ್ಷನ್‌ಗೆ ಸರಿಯಾದ ಸಮಯಕ್ಕೆ ಶೋಗಳನ್ನು ನೀಡುವುದಿಲ್ಲ. ಇದೀಗ ಧುರಂಧರ್ 2 ಚಿತ್ರದ ವಿಚಾರದಲ್ಲೂ ಅದು ಮತ್ತೆ ರಿಪೀಟ್ ಆಗಿದೆ. ಹಿಂದಿ ಅರ್ಥವಾಗದವರು, ಕನ್ನಡದಲ್ಲಿ ಧುರಂಧರ್ 2 ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಈಗ ನಿರಾಸೆ ಆಗಿದೆ.
ನಿರ್ದೇಶಕ ಆದಿತ್ಯ ಧರ್ ಅವರು ಈ ಹಿಂದೆ, "ಕೆಲವು ಅನಿರೀಕ್ಷಿತ ತಾಂತ್ರಿಕ ಕಾರಣಗಳಿಂದಾಗಿ, ನಮ್ಮ ಮಲಯಾಳಂ ಮತ್ತು ಕನ್ನಡ ಆವೃತ್ತಿಯ ಪ್ರದರ್ಶನಗಳು ನಾಳೆ (ಮಾ.20) ಬೆಳಿಗ್ಗೆಯಿಂದ ಆರಂಭವಾಗಲಿವೆ. ನಿಮಗಾದ ಅನಾನುಕೂಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ" ಎಂದು ಕೇಳಿಕೊಂಡಿದ್ದರು. ಆದರೆ ಈ ರೀತಿ ಸರಿಯಾಗಿ ಕನ್ನಡ ಡಬ್ ವರ್ಷನ್ ರಿಲೀಸ್ ಮಾಡದೇ ಇರುವುದಕ್ಕೆ ಚಿತ್ರತಂಡ ಕ್ಷಮೆ ಕೇಳಬೇಕು.