ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ʻಧುರಂಧರ್‌ 2ʼ ಚಿತ್ರಕ್ಕೆ ಮಾ.18ರಂದೇ ದಾಖಲೆ ಸಂಖ್ಯೆಯ ಪೇಯ್ಡ್‌ ಪ್ರೀಮಿಯರ್‌ ಶೋ; ಅಬ್ಬಬ್ಬಾ! ಟಿಕೆಟ್‌ ರೇಟ್‌ ಎಷ್ಟಿದೆ ಗೊತ್ತಾ?

Dhurandhar 2 Paid Premiere Shows: ಧುರಂಧರ್‌ 2 ಸಿನಿಮಾವು ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಮಾರ್ಚ್ 19ರ ಬಿಡುಗಡೆಗೂ ಮುನ್ನವೇ ಮಾ. 18ರ ಸಂಜೆ 5 ಗಂಟೆಯಿಂದಲೇ ಪೇಯ್ಡ್ ಪ್ರೀಮಿಯರ್ ಶೋಗಳು ಪ್ರದರ್ಶನಗೊಳ್ಳಲಿವೆ. ಬೆಂಗಳೂರಿನಲ್ಲೂ ಈ ಸಿನಿಮಾ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿ 'ಧುರಂಧರ್ 2' ಅಬ್ಬರ: ಮಾ.18ಕ್ಕೆ ದಾಖಲೆಯ ಪ್ರೀಮಿಯರ್ ಶೋಗಳು

-

Avinash GR
Avinash GR Mar 8, 2026 5:41 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌: ದಿ ರಿವೆಂಜ್‌ʼ ಸಿನಿಮಾವು ಮಾ.19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮಾ.18ರಂದು ಪೇಯ್ಡ್‌ ಪ್ರೀಮಿಯರ್‌ ಮಾಡುತ್ತಿದೆ. ದೇಶಾದ್ಯಂತ ಮಾ.18ರ ಸಂಜೆ 5 ಗಂಟೆಯಿಂದಲೇ ಪೇಯ್ಡ್‌ ಪ್ರೀಮಿಯರ್‌ ಶೋಗಳು ಆರಂಭವಾಗಲಿವೆ. ವಿಶೇಷವೆಂದರೆ, ಬೆಂಗಳೂರಿನಲ್ಲೂ ದಾಖಲೆ ಸಂಖ್ಯೆಯ ಪ್ರೀಮಿಯರ್‌ ಶೋಗಳು ನಡೆಯಲಿವೆ.

ಬೆಂಗಳೂರಿನಲ್ಲಿ 250+ ಪೇಯ್ಡ್‌ ಪ್ರೀಮಿಯರ್‌ ಶೋಗಳು

ಬೆಂಗಳೂರಿನಲ್ಲಿ ಸಾಮಾನ್ಯವಾಗಿ 10-15 ಮಾಡುವುದನ್ನು ಕಂಡಿದ್ದೇವೆ. ಕೆಲ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಆ ಸಂಖ್ಯೆ 100ರ ತನಕವು ಹೋಗಿರುವುದನ್ನು ನೋಡಿದ್ದೇವೆ. ಆದರೆ ಬೆಂಗಳೂರಿನಲ್ಲಿ ʻಧುರಂಧರ್‌ 2ʼ ಸಿನಿಮಾಗೆ ಸಿಕ್ಕಿರುವುದ ಪೇಯ್ಡ್‌ ಪ್ರೀಮಿಯರ್‌ ಶೋಗಳ ಸಂಖ್ಯೆ ಬರೋಬ್ಬರಿ 250+ ಎಂದರೆ ನೀವು ನಂಬಲೇಬೇಕು.

Star Fashion Review 2026: ಸಿಂಪಲ್‌ ಸಾದಾ ಸೀರೆಯಲ್ಲಿ ಧುರಂಧರ್‌ ನಟಿ ಸಾರಾ ಅರ್ಜುನ್‌

ಕರ್ನಾಟಕದ ಬೇರೆ ಬೇರೆ ನಗರಗಳಲ್ಲಿ 10-15 ಶೋಗಳಿಂದರೆ, ಬೆಂಗಳೂರಿನಲ್ಲಿ ಮಾತ್ರ ಭರ್ತಿ 250+ ಶೋಗಳನ್ನ ನೀಡಲಾಗಿದೆ. ಈಗಾಗಲೇ ಬಹುತೇಕ ಶೋಗಳೂ ಸೋಲ್ಡ್‌ ಔಟ್‌ ಆಗಿರುವುದು ಧುರಂಧರ್‌ 2 ಸಿನಿಮಾಗೆ ಇರುವ ಕ್ರೇಜ್‌ ಎಂಥದ್ದು ಎಂಬುದನ್ನು ತೋರಿಸುತ್ತದೆ. ಇನ್ನು, ದೇಶಾದ್ಯಂತ ಸುಮಾರು 6000+ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಪ್ಲ್ಯಾನ್‌ ಮಾಡಲಾಗಿದೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಟಿಕೆಟ್ ದರ ಎಷ್ಟು?

ಇದರ ಮಧ್ಯೆ ಆಘಾತಕಾರಿ ವಿಚಾರ ಏನೆಂದರೆ, ಬೆಂಗಳೂರಿನಲ್ಲಿ ರಂಧರ್‌ 2 ಸಿನಿಮಾಗೆ ‌ದುಬಾರಿ ಟಿಕೆಟ್‌ ದರ ನಿಗದಿ ಮಾಡಲಾಗಿದೆ. ಕೆಲ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್‌ ದರ 2300 ರೂ. ದಾಟಿದೆ. ಸಾಮಾನ್ಯವಾಗಿ ಎಲ್ಲಾ ಕಡೆ ಕನಿಷ್ಟ ದರ 500 ರೂ. ಮೇಲೆಯೇ ಇದೆ. ಆದರೂ ಸಿನಿಪ್ರಿಯರು ಮಾತ್ರ ಟಿಕೆಟ್‌ ಬುಕ್‌ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ದೇಶಾದ್ಯಂತ ಬರೀ ಪೇಯ್ಡ್‌ ಪ್ರೀಮಿಯರ್‌ನಿಂದಲೇ ದೊಡ್ಡ ಮೊತ್ತವನ್ನು ಧುರಂಧರ್‌ 2 ಬಾಚಿಕೊಳ್ಳಲಿದೆ. ಮೂಲಗಳ ಪ್ರಕಾರ, ಈ ಸಿನಿಮಾದ ಈಗಾಗಲೇ 15 ಕೋಟಿ ರೂ. ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆಯಂತೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಯುಗಾದಿ, ರಂಜಾನ್‌ ಹಬ್ಬದಂದು ತೆರೆಕಾಣುತ್ತಿರುವ ಧುರಂಧರ್‌ 2 ಸಿನಿಮಾದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ ಮತ್ತು ಯಾಮಿ ಗೌತಮ್ ಸೇರಿದಂತೆ ಅನೇಕರು ನಟಿಸಿದ್ದಾರೆ.