ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranveer Singh: ʻಧುರಂಧರ್‌ 2ʼ ಸಿನಿಮಾ ಅವಧಿ 235 ನಿಮಿಷ! ರಿಲೀಸ್‌ಗೆ 17 ದಿನ ಬಾಕಿ ಇರುವಾಗ ಫ್ಯಾನ್ಸ್‌ ಕಾಡುತ್ತಿದೆ ದೊಡ್ಡ ಪ್ರಶ್ನೆ!

Dhurandhar 2 Movie Updates: ಕಳೆದ ವರ್ಷ 1300 ಕೋಟಿ ರೂ. ಬಾಚಿದ್ದ 'ಧುರಂಧರ್' ಚಿತ್ರದ ಸೀಕ್ವೆಲ್ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ. ಆದರೆ, ಸರಿಯಾದ ಪ್ರಮೋಷನ್ ಮಾಡದೇ ಇರುವ ಚಿತ್ರತಂಡದ ಬಗ್ಗೆ ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.

ರಣವೀರ್‌ ಸಿಂಗ್‌ ಅಭಿನಯದ ʻಧುರಂಧರ್‌ʼ ಸಿನಿಮಾವು ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಅಂದಾಜು 1300 ಕೋಟಿ ರೂ.ಗಳನ್ನು ಈ ಸಿನಿಮಾ ಬಾಚಿಕೊಂಡಿತ್ತು. ಇದೀಗ ಮಾರ್ಚ್‌ 19ಕ್ಕೆ ಧುರಂಧರ್‌ 2 ಸಿನಿಮಾವನ್ನು ತೆರೆಕಾಣಿಸಲು ನಿರ್ದೇಶಕ ಆದಿತ್ಯ ಧರ್‌ ಪ್ಲಾನ್‌ ಮಾಡಿಕೊಂಡಿದ್ಧಾರೆ. ಸಿನಿಪ್ರಿಯರಿಗೂ ಬಹಳಷ್ಟು ಕುತೂಹಲವಿದೆ. ಈ ಮಧ್ಯೆ ಕೆಲವೊಂದು ವಿಚಾರಗಳು ಸಿನಿಪ್ರಿಯರ ತಲೆ ಕೆಡಿಸಿವೆ. ಅದೇನು? ಮುಂದೆ ಓದಿ.

ಸಿನಿಮಾದ ಅವಧಿ 3.55 ಗಂಟೆ!

ಈ ಹಿಂದೆ ತೆರೆಕಂಡಿದ್ದ ಧುರಂಧರ್‌ ಸಿನಿಮಾದ ಅವಧಿ 3.35 ಗಂಟೆ ಇತ್ತು. ಆಗಲೇ ಇದು ದೀರ್ಘವಾಯ್ತು ಎಂಬ ಟಾಕ್‌ ಕೇಳಿಬಂದಿತ್ತು. ಅದರಾಚೆಗೂ ಚಿತ್ರ ಜಯಭೇರಿ ಬಾರಿಸಿತ್ತು ಮತ್ತು ಸಿನಿಮಾ ಚೆನ್ನಾಗಿದ್ದರೆ, ಅವಧಿ ಮ್ಯಾಟರ್‌ ಆಗಲ್ಲ ಅನ್ನೋ ಸಂದೇಶವನ್ನು ನೀಡಿತ್ತು. ಬಹುಶಃ ಅದನ್ನೇ ಸೀರಿಯಸ್‌ ಆಗಿ ತೆಗೆದುಕೊಂಡ ನಿರ್ದೇಶಕ ಆದಿತ್ಯ ಧರ್‌ ಅವರು ಈ ಬಾರಿ ಚಿತ್ರದ ಅವಧಿಯನ್ನು 3.55 ಗಂಟೆಗೆ ಅಂದರೆ, 235 ನಿಮಿಷಗಳಿಗೆ ಏರಿಸಿದರೇ ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ವಿದೇಶದ ಮುಂಗಡ ಟಿಕೆಟ್ ಬುಕಿಂಗ್ ಸೈಟ್‌ಗಳಲ್ಲಿ ಈ ಅವಧಿಯನ್ನೇ ಮೆನ್ಷನ್‌ ಮಾಡಲಾಗಿದೆಯಂತೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಪ್ರಚಾರ ಯಾಕ್‌ ಮಾಡ್ತಿಲ್ಲ?

ಸಿನಿಮಾದ ಅವಧಿ ಒಂದು ಕಡೆಯಾದರೆ, ಮತ್ತೊಂದು ತಲೆ ಕೆಡಿಸುತ್ತಿರುವ ಅಂಶ ಏನೆಂದರೆ, ಪ್ರಮೋಷನ್!‌ ಹೌದು, ಮಾರ್ಚ್‌ 19ಕ್ಕೆ ಬಾಕಿ ಇರುವುದು ಇನ್ನು 17 ದಿನಗಳು ಮಾತ್ರ. ಹೀಗಿದ್ದರೂ, ಚಿತ್ರತಂಡ ಮಾತ್ರ ಯಾವುದೇ ಪ್ರಮೋಷನ್‌ ಆಕ್ಟಿವಿಟಿ ಮಾಡುತ್ತಿಲ್ಲ. ಪಾರ್ಟ್‌ 1ರಲ್ಲಿ ಎಂಡ್‌ ಕ್ರೆಡಿಟ್ಸ್‌ನಲ್ಲಿ ತೋರಿಸಿದ್ದ ಸೀನ್‌ಗಳನ್ನೇ ಧುರಂಧರ್‌ 2 ಟೀಸರ್‌ ಎಂದು ರಿಲೀಸ್ ಮಾಡಿ, ಆಡಿಯೆನ್ಸ್‌ಗೆ ಚೀಟ್‌ ಮಾಡಿದ್ದರು ಆದಿತ್ಯ ಧರ್.‌ ಅದು ಬಿಟ್ಟರೆ, ಹೊಸ ಟೀಸರ್‌ ಆಗಲಿ, ಟ್ರೇಲರ್‌ ಆಗಲಿ, ಸಾಂಗ್‌ ಆಗಲಿ ಯಾವುದೂ ರಿಲೀಸ್‌ ಆಗಿಲ್ಲ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ಧುರಂಧರ್‌ 2 ಎದುರು ಬರುತ್ತಿರುವ ಟಾಕ್ಸಿಕ್‌ ಸಿನಿಮಾದ ಪ್ರಮೋಷನ್‌ ಬಿರುಸಿನಿಂದ ಸಾಗಿದೆ. ಇಂದು ಮೊದಲ ಹಾಡನ್ನು ಕೂಡ ಚಿತ್ರತಂಡ ರಿಲೀಸ್‌ ಮಾಡಿದೆ. ಇದೇ ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ದೊಡ್ಡ ಇವೆಂಟ್‌ಗೆ ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಆದರೆ ಧುರಂಧರ್‌ 2 ಕಡೆಯಿಂದ ಇಂಥ ಯಾವುದೇ ಅಪ್ಡೇಟ್‌ ಇಲ್ಲ!