ಹೈದರಾಬಾದ್, ಫೆ. 16: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ವಿಚಾರ ಕಳೆದ ಕೆಲವು ದಿನದಿಂದ ಚರ್ಚೆಯಾಗುತ್ತಿದೆ. ತೆಲುಗಿನ ʼಗೀತಾ ಗೋವಿಂದಂʼ ಚಿತ್ರದ ಮೂಲಕ ಜನ ಮನಗೆದ್ದ ಜೋಡಿ ಇದಾಗಿದ್ದು, ಇವರಿಬ್ಬರು ಸದ್ಯದಲ್ಲೆ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು.ಇದೀಗ ಕೊನೆಗೂ ಇದಕ್ಕೆ ಕ್ಲಾರಿಫಿಕೇಶನ್ ಸಿಕ್ಕಿದ್ದು ಹೊಸ ಆಯಾಮ ಪಡೆದುಕೊಂಡಿದೆ. ಅವರ ಮದಯವೆಯ ಆಮಂತ್ರಣ ಪತ್ರ ವೈರಲ್ ಆಗಿದ್ದು, ಫೆಬ್ರವರಿ 26ರಂದು ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.
ʼಗೀತಾ ಗೋವಿಂದಂʼ ಮತ್ತು ʼಡಿಯರ್ ಕಾಮ್ರೇಡ್ʼನಂತಹ ಹಿಟ್ ಚಿತ್ರದಲ್ಲಿ ನಟಿಸಿದ ಈ ಜನಪ್ರಿಯ ಜೋಡಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದೆ ಎಂದು ಅಭಿಮಾನಿಗಳು ಬಹಳ ಹಿಂದಿನಿಂದಲೂ ಊಹಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಮದುವೆಯ ಆಮಂತ್ರಣ ಪತ್ರಿಕೆ ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಜತೆ ಸಪ್ತಪದಿ ತುಳಿಯಲಿದ್ದಾರೆ.
ಮದುವೆ ಪತ್ರಿಕೆಯಲ್ಲಿ ಏನಿದೆ?
ಫೆಬ್ರವರಿ 26ರಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ. ರಾಜಸ್ಥಾನದ ಉದಯಪುರದ ಪಾರಂಪರಿಕ ಅರಮನೆಯಲ್ಲಿ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ. ಅದೇ ರೀತಿ ಹೈದರಾಬಾದ್‌ನಲ್ಲಿರುವ ವಿಜಯ್ ಅಭಿಮಾನಿಗಳಿಗೋಸ್ಕರ ವಿಶೇಷ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾರ್ಚ್ 4ರಂದು ಹೈದರಾಬಾದ್ನ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!
ಈ ಆಮಂತ್ರಣ ಪತ್ರಿಕೆಯನ್ನು ವಿಜಯ್ ದೇವರಕೊಂಡ ಅಗಲಿ ಅಥವಾ ರಶ್ಮಿಕಾ ಮಂದಣ್ಣ ಈವರೆಗೆ ಶೇರ್ ಮಾಡಿ ಕೊಂಡಿಲ್ಲ.ರಶ್ಮೀಕಾ ಹಾಗೂ ವಿಜಯ್ ಅತಿಥಿಗಳನ್ನು ಆಹ್ವಾನಿಸುತ್ತಿದ್ದು ಈ ರೀತಿ ಆಹ್ವಾನ ಕೊಟ್ಟವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರವನ್ನು ಹಂಚಿಕೊಂಡಿದ್ದಾರೆ ಎನ್ನ ಲಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತವಾಗಿಘೋಷಣೆ ಮಾಡಿಲ್ಲ. ಇದಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ವಾರ ಇಬ್ಬರೂ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಒಂದೇ ಕಾರಿನಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಮದುವೆ ಶಾಪಿಂಗ್‌ಗಾಗಿ ವಿದೇಶಕ್ಕೆ ತೆರಳಿರಬಹುದು ಎಂಬ ಸುದ್ದಿಯೂ ಹರಡಿದೆ.