Rashmika Mandanna: ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!
Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಎರಡನೇ ಸಿನಿಮಾ. ಹೋಮಿ ಅಡಜಾನಿಯಾ ನಿರ್ದೇಶನದ ಮೊದಲ ಕಾಕ್‌ಟೈಲ್ 2012 ರಲ್ಲಿ ಬಿಡುಗಡೆಯಾಯಿತು ಮತ್ತು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ರಶ್ಮಿಕಾ ಮಂದಣ್ಣ -
ಹೊಮಿ ಅದಜಾನಿಯ 'ಕಾಕ್‌ಟೇಲ್- 2' (Cocktail 2) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫಸ್ಟ್ ಲುಕ್ ಲಾಂಚ್ ಈವೆಂಟ್ ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಾಯ್ತಪ್ಪಿ F*** ಎಂಬ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಕೂಡಲೇ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.
ಚಿತ್ರದ ಪ್ರಮುಖ ತಾರೆಯರಾದ ರಶ್ಮಿಕಾ, ಕೃತಿ ಮತ್ತು ಶಾಹಿದ್ ಕಪೂರ್, ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಹೋಮಿ ಅಡಜಾನಿಯಾ ಮತ್ತು ಸಂಗೀತ ಸಂಯೋಜಕ ಪ್ರೀತಮ್ ಅವರೊಂದಿಗೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Maharashtra Horror: ಇನ್ಸ್ಟಾಗ್ರಾಂ ಪೋಸ್ಟ್‌ಗಾಗಿ ನಡೆದ ಜಗಳ ಭೀಕರ ಹತ್ಯೆಯೊಂದಿಗೆ ಅಂತ್ಯ-ಆರೋಪಿ ಅರೆಸ್ಟ್!
ರಶ್ಮಿಕಾ ಹೇಳಿದ್ದೇನು?
ಮಾಧ್ಯಮ ಮತ್ತು ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗ, ರಶ್ಮಿಕಾ ಕೃತಿಯನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಚಿತ್ರದಲ್ಲಿನ ಅವರ ಲುಕ್ ಬಗ್ಗೆ ಮಾತನಾಡುತ್ತಾ, " ಕಾಕ್‌ಟೇಲ್ 2 ರಲ್ಲಿ ಏನೋ ತುಂಬಾ ವಿಭಿನ್ನವಾಗಿತ್ತು" ಎಂದು ಹೇಳಿದರು. ನಂತರ ಅವರು ಕೃತಿಯನ್ನು ನೋಡಿ, "ನೀವು ಹಾಟ್ ಆಗಿ ಕಾಣುತ್ತೀರಿ. ಅದು ಜಗತ್ತಿಗೆ ತಿಳಿದಿದೆ... ಮತ್ತು ನೀವು ತುಂಬಾ ಹಾಟ್ ಆಗಿದ್ದೀರಿ" ಎಂದು ಹೇಳಿದರು.
ಕೃತಿ ಸನೂನ್ ಬಗ್ಗೆ ಮಾತನಾಡುತ್ತಾ ರಶ್ಮಿಕಾ ಈ ಪದ ಬಳಸಿದ್ದಾರೆ. ಕೃತಿ ನೀನು ಸಿನಿಮಾದಲ್ಲಿ ನಿಜಕ್ಕೂ ಸಖತ್ F**** ಹಾಟ್ ಆಗಿ ಕಾಣಿಸಿಕೊಂಡಿದ್ದೀಯಾ ಎಂದು ಹೇಳಿದ್ದಾರೆ. ಆ ಪದ ತಪ್ಪು ಎಂದು ಅರ್ಥವಾಗುತ್ತಿದ್ದಂತೆ "ಕ್ಷಮಿಸಿ, ಆ ಪದ ಮ್ಯೂಟ್ ಮಾಡಿ" ಎಂದು ಮನವಿ ಮಾಡಿದ್ದಾರೆ. ಆದರೂ ಲೈವ್‌ನಲ್ಲಿ ವೀಡಿಯೋ ವೈರಲ್ ಆಗಿದೆ.
Rashmika is literally all of us hyping up Kriti Sanon " You look HOT" on the mic is pure bestie energy. The stage is already on fire- Are you guys ready for this??
— THE GOSSIP QUEEN👸 (@TheGossipQueeen) May 17, 2026
#RashmikaMandanna #KritiSanon pic.twitter.com/O8Gct0H86u
ರಶ್ಮಿಕಾ ತಮ್ಮ ಸಹನಟಿಯ ಬಗ್ಗೆ ಹೈಪ್ ಮಾಡುತ್ತಲೇ ಇದ್ದರು, ಶಾಹಿದ್ ಕಪೂರ್ ಮತ್ತು ಕೃತಿ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ರಶ್ಮಿಕಾ, " ಕಾಕ್‌ಟೇಲ್ 2 ರಲ್ಲಿ ಏನೋ ತುಂಬಾ ವಿಭಿನ್ನವಾಗಿದೆ " ಎಂದು ಹಂಚಿಕೊಂಡರು.
ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಎರಡನೇ ಸಿನಿಮಾ.
ಹೋಮಿ ಅಡಜಾನಿಯಾ ನಿರ್ದೇಶನದ ಮೊದಲ ಕಾಕ್‌ಟೈಲ್ 2012 ರಲ್ಲಿ ಬಿಡುಗಡೆಯಾಯಿತು ಮತ್ತು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!
ಚಿತ್ರದಲ್ಲಿ ರಶ್ಮಿಕಾ ಹಾಗೂ ಕೃತಿ ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.