ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Cocktail 2: ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ

Kriti Sanon: 2012ರ ಬಹುನಿರೀಕ್ಷಿತ ಚಿತ್ರ ಕಾಕ್‌ಟೇಲ್‌ನ ಮುಂದುವರಿದ ಭಾಗ ಕಾಕ್ಟೇಲ್ 2 ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ರಶ್ಮಿಕಾ ಮಂದಣ್ಣ , ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರ ಮತ್ತೊಮ್ಮೆ ಸುದ್ದಿಯಾಗಿದೆ. ರಶ್ಮಿಕಾ ಮತ್ತು ಕೃತಿ ಈ ಚಿತ್ರದಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರಶ್ಮಿಕಾ ಮಂದಣ್ಣ

2012ರ ಬಹುನಿರೀಕ್ಷಿತ ಚಿತ್ರ ಕಾಕ್‌ಟೇಲ್‌ನ (Cocktail) ಮುಂದುವರಿದ ಭಾಗ ಕಾಕ್ಟೇಲ್ 2 ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರ ಮತ್ತೊಮ್ಮೆ ಸುದ್ದಿಯಾಗಿದೆ. ರಶ್ಮಿಕಾ ಮತ್ತು ಕೃತಿ (Rashmika Mandanna and Kriti Sanon) ಈ ಚಿತ್ರದಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಲಿಂಗ ಕಾಮಿ ಜೋಡಿ

ಕೃತಿ ಸನೂನ್ ಹಾಗೂ ರಶ್ಮಿಕಾ ಸಲಿಂಗ ಕಾಮಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರ ಭಾರೀ ಸದ್ದು ಮಾಡ್ತಿದೆ. ಶಾಹಿದ್ ಕಪೂರ್ ಚಿತ್ರದ ನಾಯಕನಾಗಿ ಬಣ್ಣಹಚ್ಚಿದ್ದಾರೆ. 'ಕಾಕ್‌ಟೇಲ್'-2 ಚಿತ್ರದಲ್ಲಿ ಸಲಿಂಗ ಕಾಮಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಊಹಾಪೋಹ ಅಭಿಮಾನಿಗಳು ಮತ್ತು ಉದ್ಯಮ ವೀಕ್ಷಕರಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Actor Darshan: ಯಾವ ಶತ್ರುವಿಗೂ ಬೇಡ; ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

ಈ ಕಥಾಹಂದರವು ನಿಜವಾಗಿದ್ದರೆ, ಹಿಂದಿ ಸಿನಿಮಾಕ್ಕೆ, ವಿಶೇಷವಾಗಿ ರಶ್ಮಿಕಾ ಅಂತಹ ಪಾತ್ರವನ್ನು ನಿರ್ವಹಿಸುವುದರೊಂದಿಗೆ, ದಿಟ್ಟ ಮತ್ತು ಪ್ರಗತಿಪರ ಬದಲಾವಣೆಯನ್ನು ಗುರುತಿಸುತ್ತದೆ.

ಮೊದಲ ಕಾಕ್‌ಟೈಲ್ ಒಬ್ಬ ಪುರುಷ ಮತ್ತು ಅವನ ಇಬ್ಬರು ಆಪ್ತ ಮಹಿಳಾ ಸ್ನೇಹಿತರ ಸುತ್ತ ಇತ್ತು. ಆಧುನಿಕ ಸಂಬಂಧಗಳು ಮತ್ತು ಭಾವನಾತ್ಮಕ ಸಂಕೀರ್ಣತೆಗಳನ್ನು ಅನ್ವೇಷಿಸುವ ಕಥೆ ಒಳಗೊಂಡಿತ್ತು. ಆದಾಗ್ಯೂ, ಎರಡನೇ ಪಾರ್ಟ್‌ ಅಸಾಂಪ್ರದಾಯಿಕ ಥೀಮ್‌ನೊಂದಿಗೆ ಇದೆ.

ಅಧಿಕೃತ ಬಿಡುಗಡೆ ದಿನಾಂಕ?

ರಶ್ಮಿಕಾ ಈ ಹಿಂದೆಂದೂ ಅಂತಹ ಪಾತ್ರವನ್ನು ನಿರ್ವಹಿಸಿಲ್ಲ ಮತ್ತು ಶೀಘ್ರದಲ್ಲೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿರುವುದರಿಂದ ಈ ಸುದ್ದಿ ಅವರ ಅಭಿಮಾನಿಗಳ ಗಮನ ಸೆಳೆದಿದೆ. ವದಂತಿಗಳು ನಿಜವಾದರೆ, ಕಾಕ್‌ಟೇಲ್ 2 ಬಿಡುಗಡೆಯಾದ ನಂತರ ಹೆಚ್ಚು ಚರ್ಚಿಸಲ್ಪಡುವ ಚಿತ್ರಗಳಲ್ಲಿ ಒಂದಾಗಬಹುದು. ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಮೊದಲ ಭಾಗದಲ್ಲಿ ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ, ಬೊಮಾನ್ ಇರಾನಿ ಚಿತ್ರದಲ್ಲಿ ನಟಿಸಿದ್ದರು. ಅದೇ ಟೈಟಲ್‌ನಲ್ಲಿ ಈ ಬಾರಿ ಬೇರೆ ಕಥೆ ಹೇಳಲಾಗ್ತಿದೆ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಹೊಮಿ ಅಡಜಾನಿಯಾ ಈ ಚಿತ್ರವನ್ನು ಕೂಡ ಕಟ್ಟಿಕೊಟ್ಟಿದ್ದಾರೆ.



ಪ್ರೇಕ್ಷಕರು ಚಿತ್ರವನ್ನು ಯಾವಾಗ ಚಿತ್ರಮಂದಿರಗಳಲ್ಲಿ ನೋಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ, ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ರಹಸ್ಯವಾಗಿಡಲಾಗಿದೆ. ಆದಾಗ್ಯೂ, ಮಿಡ್-ಡೇ ವರದಿಯ ಪ್ರಕಾರ, ತಯಾರಕರು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್‌ ಇದೆ ಎನ್ನಲಾಗಿದೆ.

ಇದನ್ನೂ ಓದಿ: Bhagya Lakshmi Kannada Serial: ಸುನಂದಾ ಮಾತು ನಿರಾಕರಿಸಿ, ಭಾಗ್ಯಾ ಮೇಲಿನ ಪ್ರೀತಿ ರಿವೀಲ್‌ ಮಾಡಿದ ಆದಿ

ಶಾಹಿದ್ ಕಪೂರ್ ಅವರ 'ಓ'ರೋಮಿಯೋ' ರಿಲೀಸ್‌ ಆದ ಕಾರಣ ಸಿನಿಮಾ ರಿಲೀಸ್‌ ಮಾಡಲು ಮುಂದೂಡಲಾಗಿದೆ ಎನ್ನಲಾಗಿದೆ. 'ಗುಡ್‌ಬೈ' ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ ಪ್ರವೇಶಿಸಿದ್ದರು.'ಅನಿಮಲ್', 'ಛಾವ' ಸಿಕಂದರ್‌, ಥಮ್ಮಾ ಸಿನಿಮಾಗಳನ್ನು ಹಿಂದಿಯಲ್ಲಿ ಮಾಡಿದ್ದಾರೆ ರಶ್ಮಿಕಾ.

Yashaswi Devadiga

View all posts by this author