ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Darshan: ಯಾವ ಶತ್ರುವಿಗೂ ಬೇಡ; ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

Dhanveerah: ದರ್ಶನ್ ಅಭಿಮಾನಿಗಳು ವಿಶೇಷವಾಗಿಯೇ ಜನ್ಮ ದಿನ ಆಚರಣೆ ಮಾಡಿದ್ದರು. ತಮ್ಮ ಏರಿಯಾಗಳಲ್ಲಿ ಅನ್ನ ಸಂತರ್ಪಣೆ ಮಾಡಿದ್ದರು. ಆಶ್ರಮಗಳಿಗೆ ಹೋಗಿ ಹಣ್ಣುಹಂಪಲು ವಿತರಣೆ ಮಾಡಿದ್ದರು. ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಮೋಷನ್‌ ಕೂಡ ಭರದಿಂದ ಸಾಗುತ್ತಿದೆ. ಸಂದರ್ಶನವೊಂದರಲ್ಲಿ ಬರ್ತ್‌ಡೇ ದಿನ ತಂದೆಯನ್ನು ಭೇಟಿ ಮಾಡಿದ ವಿನೀಶ್ ಬಗ್ಗೆ ಧನ್ವೀರ್‌ ಮಾತನಾಡಿ ಬೇಸರ ಹೊರ ಹಾಕಿದ್ದಾರೆ.

ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

ನಟ ದರ್ಶನ್‌ -

Yashaswi Devadiga
Yashaswi Devadiga Feb 20, 2026 7:13 PM

ಫೆಬ್ರವರಿ 16 ದರ್ಶನ್‌ (Darshan Birthday) ಬರ್ತ್‌ಡೇ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಸೆಲೆಬ್ರೆಟ್ ಮಾಡುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಣೆ ಮಾಡಿಕೊಳ್ಳುವಂತೆ ಆಯ್ತು. ಆದ್ರೂ ಕೂಡ ಫ್ಯಾನ್ಸ್‌ ನಟನ ಅನುಪಸ್ಥಿಯಲ್ಲಿಯೂ ಸೆಲೆಬ್ರೇಷನ್‌ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು (Darshan Fans) ವಿಶೇಷವಾಗಿಯೇ ಜನ್ಮ ದಿನ ಆಚರಣೆ ಮಾಡಿದ್ದರು. ತಮ್ಮ ಏರಿಯಾಗಳಲ್ಲಿ ಅನ್ನ ಸಂತರ್ಪಣೆ ಮಾಡಿದ್ದರು. ಆಶ್ರಮಗಳಿಗೆ ಹೋಗಿ ಹಣ್ಣುಹಂಪಲು ವಿತರಣೆ ಮಾಡಿದ್ದರು. ಧನ್ವೀರ್ ನಟನೆಯ 'ಹಯಗ್ರೀವ' (Hayagrriva) ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಮೋಷನ್‌ ಕೂಡ ಭರದಿಂದ ಸಾಗುತ್ತಿದೆ. ಸಂದರ್ಶನವೊಂದರಲ್ಲಿ ಬರ್ತ್‌ಡೇ ದಿನ ತಂದೆಯನ್ನು ಭೇಟಿ ಮಾಡಿದ ವಿನೀಶ್ ಬಗ್ಗೆ ಧನ್ವೀರ್‌ ಮಾತನಾಡಿ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Amruthadhaare Serial: ಗೌತಮ್‌ ದಿವಾನ್‌- ಸುನಿ ಮುಖಾಮುಖಿ; ಸಖತ್‌ ಗಾಬರಿ ಆದ ಜೇಡಿಯ ಪೈಲ್ವಾನ್!

ತುಂಬಾನೇ ಮೆಚ್ಯೂರಿಟಿ ಇದೆ

ಧನ್ವೀರ್‌ ಮಾತನಾಡಿ, ದರ್ಶನ್‌ ಪರ ಯಾರೂ ಬರಲಿಲ್ಲ. ವಿನೀಶ್ ನೋಡುವುದಕ್ಕೆ ಹಾಗೆ ಅನಿಸುತ್ತೆ. ಆ ಹುಡುಗನಿಗೆ ತುಂಬಾನೇ ಮೆಚ್ಯೂರಿಟಿ ಇದೆ. ಮಾತನಾಡುವಾಗ ತೂಕವಾಗಿ ಮಾತಾಡ್ತಾನೆ. ಎಲ್ಲಿ ಏನೂ ಮಾತನಾಡಬೇಕು ಅಲ್ಲಿ ಮಾತಾಡ್ತಾನೆ. ಶತ್ರುಗಳಿಗೂ ಆ ಸಂದರ್ಭ ಬರಬಾರದು. ಮೊನ್ನೆ ಜೈಲಿನಲ್ಲಿ ಇಬ್ಬರೂ ನೋಡಿ ಬೇಜಾರಾಯ್ತು. ಎಲ್ಲರಿಗೂ ಫ್ಯಾಮಿಲಿ ಇರತ್ತೆ ಎಂದರು. , ಯಾರೆಲ್ಲ ಪರ್ಸನಲ್ ಟಾರ್ಗೆಟ್ ಮಾಡಿ, ಏನೇನು ಮಾಡುತ್ತಾರೋ ಮಾಡಲಿ. ಕಾಲ ಹೀಗೆ ಇರುವುದಿಲ್ಲ. ಅವರಿಗೂ ಮಕ್ಕಳು ಇರುತ್ತಾರೆ. ಅವರಿಗೂ ಫ್ಯಾಮಿಲಿ ಇರುತ್ತೆ ಎಂದರು.

ವಿಜಯಲಕ್ಷ್ಮೀ ಅವರು ಗ್ರೇಟ್‌

ಹೊರಗಡೆ ಸಮಾಜವನ್ನು ಬೇರೆ ಫೇಸ್ ಮಾಡಬೇಕಾಗುತ್ತೆ. ಸ್ಕೂಲ್, ಕಾಲೇಜ್ ಅಂತಿರುತ್ತೆ. ಮಕ್ಕಳುಗಳು ಆಡಿಕೊಳ್ಳುತ್ತಾರೆ. ಪರ್ವಾಗಿಲ್ಲ ಅವರೂ ಸ್ಟ್ರಾಂಗ್ ಆಗಿ ಇದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಂಕಲ್ ಅಂತಾರೆ.

ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಂದಿದ್ದೇನೆ. ಮನೆ ಆಯ್ತು ಅಷ್ಟೇ. ಅಲ್ಲಿ-ಇಲ್ಲಿ ಎಲ್ಲಾದರೂ ಹೋಗಬೇಕಾದರೆ, ಅಕ್ಕನಾಗಲಿ, ಇಲ್ಲ ನನ್ನನ್ನಾಗಲಿ ಕರೆದುಕೊಂಡು ಹೋಗುತ್ತಾರೆ ಎಂದರು. ಇನ್ನು ಇದೆಲ್ಲ ಹ್ಯಾಂಡಲ್‌ ಮಾಡ್ತಿರೋ ವಿಜಯಲಕ್ಷ್ಮೀ ಅವರು ಗ್ರೇಟ್‌. ಬೇರೆ ಅವರು ಆಗಿದ್ದರೆ, ಸಹಸವಾಸ ಸಾಕು ಅಂತಿದ್ದರು. ಆದರೆ ಅವರಿಗೆ ಗಟ್ಟಿತನ ಇದೆ. ಗಂಡು ಮಕ್ಕಳಿಗೂ ಗಟ್ಟಿತನ ಇಲ್ಲ ಎಂದಿದ್ದಾರೆ.

ಧನ್ವೀರ್‌ ಅವರ ಹಯಗ್ರೀವ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ ನಟ. ಫೆ. 27 ರಂದು ಸಿನಿಮಾ ತೆರೆಗೆ ಬರುತ್ತಿದೆ. ಇನ್ನು, ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: Bhagya Lakshmi Kannada Serial: ಸುನಂದಾ ಮಾತು ನಿರಾಕರಿಸಿ, ಭಾಗ್ಯಾ ಮೇಲಿನ ಪ್ರೀತಿ ರಿವೀಲ್‌ ಮಾಡಿದ ಆದಿ

ಧನ್ವಿರ್‌ಗೆ ಜೋಡಿಯಾಗಿ ಸಲಗ' ಖ್ಯಾತಿಯ ಸಂಜನಾ ಆನಂದ್‌ ನಟಿಸಿದ್ದಾರೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.