ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rashmika Mandanna Birthday: ʻಐ ಲವ್ ಯೂ ಜಯಮ್ಮʼ ಅಂತ ಕ್ಯೂಟ್‌ ಆಗಿ ವಿಶ್‌ ಮಾಡಿದ ವಿಜಯ್‌ ದೇವರಕೊಂಡ; ವಿಡಿಯೋ ವೈರಲ್‌

Rashmika Mandanna Birthday: ಇಂದು ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಹುಟ್ಟು ಹಬ್ಬದ ಸಂಭ್ರಮ. 30 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚಿ ಅಲ್ಲಿಂದಲೇ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಗೆ ಹೊರಟಿದ್ದ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಆಗಲೇ ವೈರಲ್ ಆಗಿದ್ದವು. ವಿಮಾನ ನಿಲ್ದಾಣದಲ್ಲಿ, ನಟಿ ಕೇಕ್ ಕತ್ತರಿಸುತ್ತಿರುವ ಫೋಟೋಗಳು ವೈರಲ್‌ ಆಗಿವೆ. ಇದೀಗ ವಿಜಯ್‌ ದೇವರಕೊಂಡ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ

ಇಂದು ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ (Rashmika Mandanna Birthday) ಹುಟ್ಟು ಹಬ್ಬದ ಸಂಭ್ರಮ. 30 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಿಂಚಿ ಅಲ್ಲಿಂದಲೇ ಬಾಲಿವುಡ್‌ಗೂ (Bollywood) ಕಾಲಿಟ್ಟಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ (Vijay Devarakonda) ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಗೆ ಹೊರಟಿದ್ದ ರಶ್ಮಿಕಾ ಮಂದಣ್ಣ ಅವರ ಫೋಟೋಗಳು ಆಗಲೇ ವೈರಲ್ ಆಗಿದ್ದವು. ವಿಮಾನ ನಿಲ್ದಾಣದಲ್ಲಿ, ನಟಿ ಕೇಕ್ ಕತ್ತರಿಸುತ್ತಿರುವ ಫೋಟೋಗಳು ವೈರಲ್‌ ಆಗಿವೆ. ಇದೀಗ ವಿಜಯ್‌ ದೇವರಕೊಂಡ ಸ್ಪೆಷಲ್‌ ಆಗಿ (Wish) ವಿಶ್‌ ಮಾಡಿದ್ದಾರೆ.

ಜಯಮ್ಮ ಪಾತ್ರದ ಮೇಕಿಂಗ್‌ ವಿಡಿಯೋ

ರಶ್ಮಿಕಾ ಮಂದಣ್ಣ ಮದುವೆ ಆದ ವರ್ಷವೇ 30ನೇ ಜನ್ಮ ದಿನ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ವಿಜಯ್​​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಚಿತ್ರ ರಣಬಾಲಿ ಸಿನಿಮಾ ಬರುತ್ತಿರೋದು ಗೊತ್ತೇ ಇದೆ.

ಇದನ್ನೂ ಓದಿ: Bhagyalakshmi Serial: 16 ವರ್ಷ ನರಕ! ಮದುವೆಗೆ ರೆಡಿಯಾದ ಭಾಗ್ಯ; ಗೆದ್ದೇ ಬಿಟ್ಟನಾ ತಾಂಡವ್‌?

ಬರೋಬ್ಬರಿ 7 ವರ್ಷಗಳ ಬಳಿಕ ಈ ಜೋಡಿ ಆನ್​ ಸ್ಕ್ರೀನ್​ನಲ್ಲಿ ಜತೆಯಾಗಿ ನಟಿಸುತ್ತಿದ್ದು, ವಿರೋಶ್​ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ವಿಜಯ್ ದೇವರಕೊಂಡ ರಣಬಾಲಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ರಶ್ಮಿಕಾ ಜಯಮ್ಮ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಶ್ಮಿಕಾ ಅವರ ಜಯಮ್ಮ ಪಾತ್ರದ ಮೇಕಿಂಗ್‌ ವಿಡಿಯೋವನ್ನು ವಿಜಯ್‌ ದೇವರಕೊಂಡ ಶೇರ್‌ ಮಾಡಿಕೊಂಡಿದ್ದಾರೆ. I Love You Jayamma ಅಂತ ರಶ್ಮಿಕಾಗೆ ವಿಶ್‌ ಮಾಡಿದ್ದಾರೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ ಮತ್ತು ಟಿ-ಸಿರೀಸ್ ಪ್ರಸ್ತುತಪಡಿಸಿದೆ. ಚಿತ್ರವು ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಕಥೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ.



ರಾಹುಲ್ ಸಾಂಕೃತ್ಯಾಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. . ಕಾಕ್‌ಟೇಲ್ 2, ರಣಬಾಲಿ, ಪುಷ್ಪ 3, 'AA22xA6', ಅನಿಮಲ್ ಪಾರ್ಕ್, ಮೈಸಾ, ಆರ್‌ಸಿ 17, ಏಕ್ ಸಾಥ್ ದೋ ದೋ, ರೈನ್‌ಬೋ ಸೇರಿದಂತೆ ಹಲವು ಸಿನಿಮಾದಲ್ಲಿ ಮಂದಣ್ಣ ನಟಿಸುವ ಮಾಹಿತಿ ಇದೆ. ಆದರೆ ಕೆಲವೊಂದು ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಇದನ್ನೂ ಓದಿ: Fauzi: ಫೌಜಿ ಸಿನಿಮಾ ಸೆಟ್‌ನ ಫೋಟೋಗಳು ಲೀಕ್‌; ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ರು ಡೈರೆಕ್ಟರ್‌

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26, 2026 ರಂದು ಜೈಪುರದಲ್ಲಿ ವಿವಾಹವಾದರು. ವಿವಾಹ ಸಮಾರಂಭವು ಆತ್ಮೀಯ ಸಂಬಂಧವಾಗಿತ್ತು, ಮತ್ತು ಕೆಲವೇ ಸೆಲೆಬ್ರಿಟಿಗಳು ಹಾಜರಿದ್ದರು. ದಂಪತಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು, ಇದರಲ್ಲಿ ಚಲನಚಿತ್ರ ಕ್ಷೇತ್ರದ ಅವರ ಸ್ನೇಹಿತರು ಭಾಗವಹಿಸಿದ್ದರು.

Yashaswi Devadiga

View all posts by this author