ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Photos: ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣಗೆ ಡಬಲ್‌ ಸಂಭ್ರಮ; ಅತ್ತೆಯೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ!

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯುಗಾದಿ ಹಬ್ಬದ ದಿನವೇ ಎರಡು ಡಬಲ್‌ ಸಂಭ್ರಮಗಳು ಸಿಕ್ಕಿವೆ. ಅದೇನಪ್ಪ ಅಂದರೆ, ಅವರು ಕಳೆದ ವರ್ಷ ನಟಿಸಿದ್ದ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾಕ್ಕೆ ಎರಡು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ. ಆ ಪ್ರಶಸ್ತಿಗಳು ಸಿಕ್ಕ ಖುಷಿಯಲ್ಲಿ ಅವರು ತಮ್ಮ ಅತ್ತೆ ಮಾಧವಿ ಜೊತೆಗೆ ಸಂಭ್ರಮಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಶ್ಮಿಕಾ, "ನಾನು ಚಿಕ್ಕವಳಿದ್ದಾಗ ಯಾರಾದರೂ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದರೆ, ಅವರನ್ನು ಒಬ್ಬ ಸೂಪರ್‌ ಸ್ಟಾರ್‌ ತರಹ ನೋಡುತ್ತಿದ್ದೆ. ಅವರು ಇದನ್ನು ಹೇಗೆ ಸಾಧಿಸಿದರು? ಅವರ ದಿನಚರಿ ಹೇಗಿರುತ್ತದೆ? ಅಂತೆಲ್ಲಾ ಆಶ್ಚರ್ಯಪಡುತ್ತಿದ್ದೆ. ನಿನ್ನೆ ಸಂಜೆ ಅಂತಹದ್ದೇ ಒಂದು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನನಗೆ ತುಂಬಾ ವಿಶೇಷ ಅನಿಸುತ್ತಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಯುಗಾದಿ ಹಬ್ಬಕ್ಕೆ ರಶ್ಮಿಕಾ ಮಂದಣ್ಣಗೆ ಡಬಲ್ ಧಮಾಕ; ಅತ್ತೆಯೊಂದಿಗೆ ಸಂಭ್ರಮ

-

Avinash GR
Avinash GR Mar 20, 2026 5:05 PM