ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Girlfriend: ತಮ್ಮ ʻಸ್ಟಾರ್‌ ಪವರ್‌ʼ ಏನೆಂದು ತೋರಿಸಿದ ನಟಿ ರಶ್ಮಿಕಾ ಮಂದಣ್ಣ;‌ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದ ಕಲೆಕ್ಷನ್ ಎಷ್ಟು?

The Girlfriend Box Office Collection: ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಮಹಿಳಾ ಪ್ರಧಾನ ಸಿನಿಮಾ 'ದಿ ಗರ್ಲ್‌ಫ್ರೆಂಡ್‌' ಯಶಸ್ಸು ಕಂಡಿದೆ. ನವೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರ 11 ದಿನಗಳಲ್ಲಿ 28 ಕೋಟಿ ರೂ. ಗಳಿಸಿದೆ. ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೇ 21 ಕೋಟಿ ರೂ. ಹರಿದುಬಂದಿರುವ ಮಾಹಿತಿ ಇದೆ.

ರಶ್ಮಿಕಾ ನಟನೆಯ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾ ಗೆಲ್ತಾ? ಕಲೆಕ್ಷನ್‌ ಎಷ್ಟು?

-

Avinash GR
Avinash GR Nov 18, 2025 12:50 PM

ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾವು ನವೆಂಬರ್‌ 7ರಂದು ತೆರೆಕಂಡಿತ್ತು. ಇದು ರಶ್ಮಿಕಾ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ. ಈಗಾಗಲೇ ತಾವು ಸ್ಟಾರ್ ನಟಿ ಎಂಬುದನ್ನು ರಶ್ಮಿಕಾ ಸಾಬೀತು ಮಾಡಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಲ್ಲಿ ಮಿಂಚಿದ್ದ ರಶ್ಮಿಕಾ, ಈಗ ತಮ್ಮ ಮಹಿಳಾ ಪ್ರಧಾನ ಸಿನಿಮಾದ ಮೂಲಕ ತಮ್ಮ ಸ್ಟಾರ್‌ ಪವರ್‌ ಏನೆಂದು ತೋರಿಸಿಕೊಟ್ಟಿದ್ದಾರೆ. ಅಂದಹಾಗೆ, ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದ ಈವರೆಗಿನ ಕಲೆಕ್ಷನ್‌ ಎಷ್ಟು? ಮುಂದೆ ಓದಿ.

ನಿರ್ಮಾಪಕರ ಮೊಗದಲ್ಲಿ ನಗು ತರಿಸಿದ ʻದಿ ಗರ್ಲ್‌ಫ್ರೆಂಡ್‌ʼ

ರಾಹುಲ್‌ ರವೀಂದ್ರನ್‌ ನಿರ್ದೇಶಿಸಿರುವ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದಲ್ಲಿ ರಶ್ಮಿಕಾ ಲೀಡ್‌ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದು, ದೀಕ್ಷಿತ್‌ ಶೆಟ್ಟಿ ಅವರು ರಶ್ಮಿಕಾ ಎದುರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅನು ಎಮ್ಯಾನ್ಯುಲ್‌, ರಾವ್‌ ರಮೇಶ್‌ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಸದ್ಯ ಈ ಚಿತ್ರ ತೆರೆಕಂಡು 11 ದಿನಗಳು ಕಳೆದಿವೆ. ಚಿತ್ರತಂಡವೇ ಹೇಳಿಕೊಂಡಿರುವ ಪ್ರಕಾರ, ಈ ಚಿತ್ರವು ಈವರೆಗೂ ವಿಶ್ವಾದ್ಯಂತ 28 ಕೋಟಿ ರೂ. ಕಮಾಯಿ ಮಾಡಿದೆಯಂತೆ.

Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್‌ ದೇವರಕೊಂಡ ಭರ್ಜರಿ ವೆಕೇಶನ್‌? ವೈರಲ್‌ ಆಗಿರೋ ವಿಡಿಯೊದಲ್ಲೇನಿದೆ?

ಜೊತೆಗೆ ನೆಟ್‌ಫ್ಲಿಕ್ಸ್‌ ಸಂಸ್ಥೆಯು ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡಿದ್ದು, ಅದಕ್ಕಾಗಿ 14 ಕೋಟಿ ರೂ. ನೀಡಿದೆಯಂತೆ. ಜೊತೆಗೆ ಸ್ಯಾಟಲೈಟ್‌ ಹಕ್ಕುಗಳನ್ನು ಸುಮಾರು 7 ಕೋಟಿ ರೂ. ಗಳಿಗೆ ಮಾರಾಟವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಒಟ್ಟು 49 ಕೋಟಿ ರೂ. ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಇದೆ. ಚಿತ್ರಮಂದಿರದಲ್ಲಿ ಈ ಸಿನಿಮಾವು ಈಗಲೂ ಪ್ರದರ್ಶನ ಕಾಣುತ್ತಿರುವುದರಿಂದ ಇನ್ನಷ್ಟು ಗಳಿಕೆ ಆಗುವ ನಿರೀಕ್ಷೆ ಇದೆ.

ʻದಿ ಗರ್ಲ್‌ಫ್ರೆಂಡ್‌ʼ ಬಜೆಟ್‌ ಎಷ್ಟು?

ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾವನ್ನು ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಅಂದಹಾಗೆ, ಮಾರುಕಟ್ಟೆ ದೃಷ್ಟಿಯಿಂದ ಗಮನಸಿದರೆ, ಮಹಿಳಾ ಪ್ರಧಾನ ಸಿನಿಮಾಕ್ಕೆ ಈ ಬಜೆಟ್‌ ಜಾಸ್ತಿಯೇ ಆಯಿತು ಎಂದು ಹೇಳಲಾಗುತ್ತಿದೆ.

Rashmika Mandanna: ಫ್ಯಾನ್ಸ್‌ ಹೃದಯ ಗೆದ್ದ ನ್ಯಾಶನಲ್‌ ಕ್ರಶ್‌ ಅಭಿನಯ! ದೀಕ್ಷಿತ್, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್‌' ಮೂವಿ ನೋಡಿದವರು ಹೇಳಿದಿಷ್ಟು

2025ರಲ್ಲಿ ಲಕ್ಕಿಯಾದ ರಶ್ಮಿಕಾ

ರಶ್ಮಿಕಾ ನಟನೆಯ 5 ಸಿನಿಮಾಗಳು ಈಗಾಗಲೇ 2025ರಲ್ಲಿ ತೆರೆಕಂಡಿವೆ. ವಿಕಿ ಕೌಶಲ್ ನಟನೆಯ ʻಛಾವಾʼ ಚಿತ್ರದಲ್ಲಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಈ ಸಿನಿಮಾವು ಫೆಬ್ರವರಿ 14ರಂದು ತೆರೆಕಂಡಿತ್ತು. ಸಲ್ಮಾನ್‌ ಖಾನ್‌ ಜೊತೆಗೆ ʻಸಿಕಂದರ್ʼ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದರು. ಈ ಚಿತ್ರವು ಮಾರ್ಚ್ 30ರಂದು ರಿಲೀಸ್‌ ಆಗಿತ್ತು. ಧನುಷ್‌ ಜೊತೆಗೆ ರಶ್ಮಿಕಾ ನಟಿಸಿದ್ದ ʼಕುಬೇರʼ ಚಿತ್ರವು ಜೂನ್ 20ರಂದು ರಿಲೀಸ್‌ ಆಗಿತ್ತು. ಆಯುಷ್ಮಾನ್ ಖುರಾನಾ ಅವರ ಜೊತೆ ರಶ್ಮಿಕಾ ನಟಿಸಿದ್ದ ಹಾರರ್ - ಕಾಮಿಡಿ ಚಿತ್ರ ʻಥಾಮಾʼ ಅಕ್ಟೋಬರ್ 21 ರಂದು ತೆರೆಕಂಡಿತ್ತು. ಈಗ ʻದಿ ಗರ್ಲ್‌ಫ್ರೆಂಡ್‌ʼ ರಿಲೀಸ್‌ ಆಗಿದೆ. ಇದರಲ್ಲಿ ದಿ ಗರ್ಲ್‌ಫ್ರೆಂಡ್‌ ಹೊರತುಪಡಿಸಿ, ಮಿಕ್ಕೆಲ್ಲಾ ಸಿನಿಮಾಗಳ ಗಳಿಕೆಯು 100 ಕೋಟಿ ರೂ. ದಾಟಿದೆ.