ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಅಪ್ಪಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆʼ; ಗಂಡು ಮಗುವಿಗೆ ತಂದೆಯಾದ ಡೈರೆಕ್ಟರ್‌ ‌ʻಸಿಂಪಲ್ʼ ಸುನಿ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ 'ಸಿಂಪಲ್' ಸುನಿ ಅವರು ತಂದೆಯಾಗಿದ್ದಾರೆ. ಅವರ ಪತ್ನಿ ಸೌಂದರ್ಯ ಅವರು ಮಾರ್ಚ್ 11ರ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಸುನಿ ಹಂಚಿಕೊಂಡಿದ್ದಾರೆ.

ಸಿಂಪಲ್ ಸುನಿ ಮನೆಗೆ ಬಂದ ಅಪ್ಪಟ ಅಪರಂಜಿ; ಗಂಡು ಮಗುವಿನ ತಂದೆಯಾದ ನಿರ್ದೇಶಕ

-

Avinash GR
Avinash GR Mar 11, 2026 7:32 PM

ಸ್ಯಾಂಡಲ್‌ವುಡ್‌ ನಿರ್ದೇಶಕ ಸಿಂಪಲ್‌ ಸುನಿ ಅವರು ಶುಭ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಮಾರ್ಚ್‌ 11ರಂದು ಅವರು ಗಂಡು ಮುದ್ದಾದ ಮಗುವಿಗೆ ತಂದೆಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಹಂಚಿಕೊಂಡು, ಈ ಶುಭ ಸುದ್ದಿಯನ್ನು ತಿಳಿಸಿದ್ದಾರೆ. "ಮಾರ್ಚ್ 11ರ ಬೆಳಗ್ಗೆ 9.16ಕ್ಕೆ ಅಪ್ಪಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆ.. ಈ ಸೃಷ್ಟಿಗೆ ನಮನಗಳು" ಎಂದು ಸುನಿ ಹೇಳಿಕೊಂಡಿದ್ದಾರೆ.

ಪೋಷಕರಾದ ಸೌಂದರ್ಯ - ಸುನಿ ದಂಪತಿ

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಿರ್ದೇಶಕ 'ಸಿಂಪಲ್' ಸುನಿ ಅವರು 2017ರ ಫೆಬ್ರವರಿಯಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಸೌಂದರ್ಯ ಅವರಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುನಿ ಅವರ ಮದುವೆ ನಡೆದಿತ್ತು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದೀಗ ಮುದ್ದು ಕಂದನ ಪೋಷಕರಾಗಿ ಬಡ್ತಿ ಹೊಂದಿದ್ದಾರೆ. ಸಿಂಪಲ್‌ ಸುನಿ ಅವರಿಗೆ ಆಶಿಕಾ ರಂಗನಾಥ್‌, ವಿನಯ್‌ ರಾಜ್‌ಕುಮಾರ್‌, ನಿಧಿ ಸುಬ್ಬಯ್ಯ, ಕಾರ್ತಿಕ್‌ ಮಹೇಶ್‌, ಅಮೂಲ್ಯ, ಆರೋಹಿ ನಾರಾಯಣ್‌, ಶುಭ್ರಾ ಅಯ್ಯಪ್ಪ ಸೇರಿದಂತೆ ಇನ್ನಿತರ ಸ್ನೇಹಿತರು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Gatha Vaibhava OTT: ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?

ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದ ಸುನಿ

ಕಳೆದ ಫೆಬ್ರವರಿಯಲ್ಲಿ ಮದುವೆಯ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದ ಸಿಂಪಲ್ ಸುನಿ, ತಾವು ತಂದೆಯಾಗುತ್ತಿರುವ ವಿಷಯವನ್ನು ಪತ್ನಿ ಸೌಂದರ್ಯ ಅವರ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು.

"ಮದುವೆಯಾಗಿ 8 ವರ್ಷಗಳು ಹೇಗೆ ಕಳೆದವೋ ಗೊತ್ತಿಲ್ಲ.. ಮುಂದಿನ ವರ್ಷಗಳು ಹೇಗಿರುತ್ತವೋ ಗೊತ್ತಿಲ್ಲ.. ಆದರೂ ಜೊತೆ ನಡೆಯುತ್ತಿದ್ದೇವೆ ಇಷ್ಟೇ ಜೀವನ.. ಸರಸವೋ ಸಮರಸವೋ ಎಂದೆಂದೂ ಒಂದಾಗಿರೋಣ.. ನಮ್ಮಿಬ್ಬರಿಂದ ಒಬ್ಬರಾಗಿ ಬರುವವರ ಬದುಕು ಚೆಂದವಾಗಿಸೋಣ.. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.. ನಿನ್ನ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲಿ" ಎಂದು ಬರೆದುಕೊಂಡಿದ್ದರು ಸುನಿ.

ಸುನಿ ಹಂಚಿಕೊಂಡ ಪೋಸ್ಟ್

ಸುನಿ ಮೊದಲ ಬಾರಿಗೆ ನಿರ್ದೇಶನ ಮಾಡಿದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರವು ಮಾರ್ಚ್‌ 8ರಂದು ತೆರೆಕಂಡಿತ್ತು. ಆ ಮೂಲಕ ನಿರ್ದೇಶಕರಾಗಿ ಬಡ್ತಿ ಹೊಂದಿದ್ದರು. ಇದೀಗ ಮಾರ್ಚ್‌ ತಿಂಗಳಿನಲ್ಲೇ ತಂದೆಯಾಗಿ ಸುನಿ ಬಡ್ತಿ ಹೊಂದಿದ್ದಾರೆ.