ನ್ಯಾಶನಲ್ ಕ್ರಶ್ ಮೀಟ್ಸ್ ನ್ಯಾಶನಲ್ ಬರ್ಡ್; ನವಿಲಿನೊಂದಿಗೆ ಮುದ್ದಾದ ಕ್ಷಣ ಕಳೆದ ನಟಿ ರಶ್ಮಿಕಾ ಮಂದಣ್ಣ: ಇಲ್ಲಿದೆ ವಿಡಿಯೊ
Rashmika Mandanna: ಸಿನಿಮಾ ಹೊರತಾಗಿ ಹೊಸ ಸ್ಥಳಕ್ಕೆ ಭೇಟಿ ನೀಡುವುದನ್ನು ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಪ್ರವಾಸಕ್ಕೆ ಹೋಗಿರುವ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಕೈಗಳಿಂದ ನವಿಲಿಗೆ ಆಹಾರವನ್ನು ನೀಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಎಇಯೊ ನೆಟ್ಟಿಗರ ಗಮನ ಸೆಳೆದಿದೆ.

Rashmika Mandanna -

ಮುಂಬೈ: ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಒಬ್ಬರು. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಸ್ಟಾರ್ ನಟರ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಜನಪ್ರಿಯರಾದ ಇವರನ್ನು ಸಿನಿಪ್ರೇಮಿಗಳು ನ್ಯಾಶನಲ್ ಕ್ರಶ್ ಎಂದೇ ಕರೆಯುತ್ತಾರೆ. ಸಿನಿಮಾ ಹೊರತಾಗಿ ಹೊಸ ಹೊಸ ಸ್ಥಳಕ್ಕೆ ಭೇಟಿ ನೀಡುವುದನ್ನು ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ತಾವು ಪ್ರವಾಸ ಕೈಗೊಂಡ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಕೈಯಿಂದಲೇ ನವಿಲಿಗೆ ಆಹಾರವನ್ನು ನೀಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಅವರ ಸರಳತೆ ನೆಟ್ಟಿಗರ ಗಮನ ಸೆಳೆದಿದೆ.
ರಶ್ಮಿಕಾ ಮಂದಣ್ಣ ಬಳಿಗೆ ಕಳ್ಳ ಹೆಜ್ಜಿಇಡುತ್ತ ಗಂಡು ನವಿಲೊಂದು ಬಂದಿದೆ. ಆಗ ರಶ್ಮಿಕಾ ತಮ್ಮ ಕೈಯಿಂದಲೇ ಅದಕ್ಕೆ ಆಹಾರ ನೀಡಿದ್ದಾರೆ. ಮುಂಗೈಗೆ ಒಂದಷ್ಟು ಕಾಳು ಸುರಿದು ಅದರ ಮುಂದೆ ಕೈಚಾಚಿದ್ದಾರೆ. ಯಾವುದೇ ಭೀತಿ ಇಲ್ಲದೆ ನವಿಲು ಅವರ ಕೈಯಿಂದ ಆಹಾರ ಸೇವಿಸಿದೆ. ಈ ಅಮೂಲ್ಯ ಕ್ಷಣದ ವಿಡಿಯೊವನ್ನು ರಶ್ಮಿಕಾ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ʼʼಕೆಲವೊಮ್ಮೆ ನಾವು ಪ್ರಕೃತಿಗೆ ಹತ್ತಿರವಾಗುವುದರಿಂದ ನಮಗೆ ತುಂಬ ಸ್ವಾತಂತ್ರ್ಯದ ಅನುಭವ ಸಿಕ್ಕಂತಾಗುತ್ತದೆ. ನನ್ನ ರಜೆಯ ಅವಧಿಯಲ್ಲಿ ನಾನು ಬೆಳಗ್ಗೆ 6 ಗಂಟೆಗೆ ದಿನಚರಿಯನ್ನು ವಿಶೇಷ ವಾಗಿ ಆರಂಭಿಸಿದ್ದೇನೆ. ಅವನು (ನವಿಲು) ಆಹಾರ ನೀಡಲು ಶಬ್ಧ ಮಾಡಿ ನನ್ನನ್ನು ಎಚ್ಚರಿಸುತ್ತಿದ್ದ. ನವಿಲಿಗೆ ಆಹಾರ ನೀಡುವ ಮೂಲಕ ಈ ದಿನ ನಾನು ಬಹಳ ಖುಷಿಪಟ್ಟೆʼʼ ಎಂದು ಬರೆದುಕೊಂಡಿದ್ದಾರೆ.
ನಟಿಯ ಈ ಪೋಸ್ಟ್‌ಗೆ ನೆಟ್ಟಿಗರು ನಾನಾ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ತೆರೆ ಮೇಲೆ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಹೀರೋಯಿನ್ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಸಿನಿಮಾ ಬಿಗ್ ಸಕ್ಸಸ್ ಆದ ಬಳಿಕ ಸಲ್ಮಾನ್ ಖಾನ್ ಜತೆಗಿನ ʼಸಿಕಂದರ್ʼ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ತೆರೆಕಂಡ ʼಕುಬೇರʼ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ರಶ್ಮಿಕಾ ಮಂದಣ್ಣ ʼಥಾಮʼ ಚಿತ್ರದಲ್ಲಿ ತಡಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಾರರ್ ಸಿನಿಮಾದಲ್ಲಿ ವಿಭಿನ್ನ ಪಾತ್ರ ಅಭಿನಯಿಸುತ್ತಿದ್ದು, ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.