ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನನಗೆ ಬಲವಂತದ ರಜೆ ಸಿಕ್ಕಿದೆ, ದೇವರೇ ಹೀಗೆ ಮಾಡಿರಬೇಕುʼ; ಶೂಟಿಂಗ್‌ ಅವಘಡದ ಬಗ್ಗೆ ಎಲ್ಲವನ್ನೂ ಹೇಳಿದ ರಶ್ಮಿಕಾ ಮಂದಣ್ಣ!

ನಟಿ ರಶ್ಮಿಕಾ ಮಂದಣ್ಣ 'ಮೈಸಾ' ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ತಮ್ಮ ಬಲ ಸೊಂಟದ ಸ್ನಾಯುರಜ್ಜು (Tendon) ಗಾಯಗೊಳಿಸಿಕೊಂಡಿದ್ದು, ಸದ್ಯ ವೈದ್ಯರ ಸೂಚನೆಯಂತೆ ಬೆಡ್ ರೆಸ್ಟ್‌ನಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ, ಇದು ಸತತ ಮೂರನೇ ಗಾಯ ಎಂದು ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಈಚೆಗೆ ಸೊಂಟಕ್ಕೆ ಪೆಟ್ಟು ಮಾಡಿಕೊಂಡಿರುವುದು ಗೊತ್ತೇ ಇದೆ. ಮುಂಬರುವ ʻಮೈಸಾʼ ಸಿನಿಮಾದ ಸಾಂಗ್‌ ಶೂಟಿಂಗ್‌ ವೇಳೆ ಈ ಅವಘಡ ನಡೆದಿತ್ತು. ಈ ಅವಘಡದ ನಂತರ ರಶ್ಮಿಕಾಗೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸದ್ಯ ಅವರೀಗ ಬೆಡ್‌ ರೆಸ್ಟ್‌ನಲ್ಲಿದ್ದಾರೆ. ಇದೀಗ ಮೊದಲ ಬಾರಿಗೆ ತಮಗೆ ಪೆಟ್ಟು ಬಿದ್ದಿದ್ದರ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. "ನನಗೆ ಬಲವಂತದ ರಜೆ ಸಿಕ್ಕಿದೆ..." ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?

"ಹಾಯ್ ಫ್ರೆಂಡ್ಸ್... ಗಾಯಗಳಾಗೋದು ನಿಜಕ್ಕೂ ಬೇಸರದ ವಿಷಯ.. ಯಾರಿಗೂ ಗೊತ್ತಾಗಬಾರದು ಅಂತ ಅಂದುಕೊಂಡಿದ್ದೆ.. ಸ್ವಲ್ಪ ದಿನಗಳಿಂದ ಕಾಣೆಯಾಗಿದ್ದಕ್ಕೆ ಕ್ಷಮಿಸಿ.. ಆದರೆ, ನಾನು ಇಲ್ಲೇ ಇದ್ದೇನೆ! ಇದು ಸ್ವಲ್ಪ ದಿನಗಳ ಹಿಂದೆಯೇ ಆಗಿದ್ದು, ಸಾಲದಕ್ಕೆ ಇದು ಸಾಲಾಗಿ ನನಗೆ ಆಗಿರುವ 3ನೇ ಗಾಯ.. ನನ್ನ ದೇಹವನ್ನು ಮೆಷಿನ್ ತರ ನೋಡದೆ, ಮನುಷ್ಯರ ದೇಹದ ತರ ನೋಡಿಕೊಳ್ಳೋದನ್ನ ನಾನು ಖಂಡಿತ ಕಲಿಯಬೇಕಿದೆ" ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ.‌

ಅಯ್ಯೋ, ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್;‌ 6 ವಾರ ಯಾವ ಸಿನಿಮಾ ಶೂಟಿಂಗ್‌ಗೂ ಬರಂಗಿಲ್ಲ!

ʻನಾನು ಮಾಡಿದ ಅತ್ಯಂತ ಅಗ್ರೆಸಿವ್ ಸಿನಿಮಾ ಮೈಸಾʼ

"ಅಂದಹಾಗೆ, ಆ ಗಾಯದ ಬಗ್ಗೆ ಹೇಳಬೇಕೆಂದರೆ.. ಹೆಂಗೆ ವಿವರಿಸಲಿ..? ನಮ್ಮ ಹಿಪ್‌ನ ಎರಡೂ ಬದಿಯಲ್ಲಿ ಕಾಲನ್ನು ಸೊಂಟಕ್ಕೆ ಜೋಡಿಸುವ 4 ಸ್ನಾಯುರಜ್ಜುಗಳು ಇರುತ್ತವೆ. ಅದರಲ್ಲಿ ನನ್ನ ಬಲ ಸೊಂಟದ ಒಂದು ಟೆಂಡನ್ ಗಾಯಗೊಂಡಿದೆ. ನಾನು ಕಾಲನ್ನು ಎತ್ತಲು ಮತ್ತು ಸಾಮಾನ್ಯ ಚಟುವಟಿಕೆ ಮಾಡಬೇಕೆಂದರೆ, ಅದು ಮತ್ತೆ ಮೊದಲಿನಂತಾಗಬೇಕು.. ಅಂದಹಾಗೆ, ಇದು 'ಮೈಸಾ' ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ಆಯ್ತು. ಆಹಾ, ನಿಜಕ್ಕೂ ನಾನು ಮಾಡಿದ ಅತ್ಯಂತ ಅಗ್ರೆಸಿವ್ ಸಿನಿಮಾ ಅಂದ್ರೆ ಇದೇನೇ" ಎಂದು ರಶ್ಮಿಕಾ ತಮ್ಮನ್ನೇ ತಾವು ಕಾಲೆಳೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್



ನನಗೆ ಬಲವಂತದ ರಜೆ ಸಿಕ್ಕಿದೆ

"ಆದರೆ, ತೀರಾ ತಲೆ ಕೆಡಿಸಿಕೊಳ್ಳಬೇಡಿ.. ನೋವಿದೆ, ಆದ್ರೆ ಸಹಿಸಿಕೊಳ್ಳೋಕೆ ಆಗದೇ ಇರುವಷ್ಟೇನೂ ಇಲ್ಲ.. ಹಾಗಾಗಿ, ಈಗ ಇದಿಷ್ಟೇ ವಿಚಾರ.. ನನಗೆ ಅನಿಸುತ್ತೆ, 'ನಿನಗಾಗಿ ನೀನು ಬ್ರೇಕ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ನಾನೇ ಬ್ರೇಕ್ ಕೊಡ್ತಿದ್ದೀನಿ' ಅಂತ ದೇವರು ಹೀಗೆ ಮಾಡಿರಬೇಕು. ನನಗೆ ಆಗಿರೋ ಎಲ್ಲಾ ಗಾಯಗಳು ಸಿಕ್ಕಾಪಟ್ಟೆ ವಿಚಿತ್ರ ಮತ್ತು ಅನಿರೀಕ್ಷಿತ. ಹೀಗೆ ಆಗುತ್ತ ಅಂತ ಯಾರಿಗೆ ಗೊತ್ತಿತ್ತು ಹೇಳಿ? ಒಟ್ಟಿನಲ್ಲಿ ನನಗೆ ಬಲವಂತದ ರಜೆ ಸಿಕ್ಕಿದೆ. ಬಟ್ ನಾನಂತೂ ಅದನ್ನು ದೂರುತ್ತಿಲ್ಲ. ಈ ನಡುವೆ ಸಿಕ್ಕಾಪಟ್ಟೆ ಪಝಲ್ಸ್‌ಗಳನ್ನು (Puzzle) ಬಿಡಿಸ್ತಿದ್ದೀನಿ. ನನಗೆ ಇದರಲ್ಲಿ ಇಷ್ಟೊಂದು ಟ್ಯಾಲೆಂಟ್ ಇದೆ ಅಂತ ನನಗೇ ಗೊತ್ತಿರಲಿಲ್ಲ.." ಎಂದು ರಶ್ಮಿಕಾ ಹೇಳಿದ್ದಾರೆ.

ಸ್ವಲ್ಪ ದಿನ ವರ್ಕೌಟ್ ಮಾಡೋಕೆ ಆಗಲ್ಲ

"ಇನ್ನೊಂದು ವಿಷಯ, ತೂಕ ಹೆಚ್ಚಾಗಬಾರದು ಅಂತ ಸಿಕ್ಕಾಪಟ್ಟೆ ಟ್ರೈ ಮಾಡ್ತಿದ್ದೀನಿ.. ಯಾಕೆಂದರೆ, ನಾನು ಚೆನ್ನಾಗಿ ವರ್ಕೌಟ್ ಮತ್ತು ರನ್ನಿಂಗ್ ಮಾಡೋದರಿಂದ ಶೇಪ್‌ನಲ್ಲಿ ಇರ್ತಿದ್ದೆ. ಇನ್ಮೇಲೆ ಸ್ವಲ್ಪ ದಿನ ವರ್ಕೌಟ್, ರನ್ನಿಂಗ್ ಮಾಡೋಕೆ ಆಗಲ್ಲ. ನಂಗೆ ವರ್ಕೌಟ್ ಮಾಡೋಕೆ ಆಗಿಲ್ಲ ಅಂದ್ರೆ ಏನ್ ಮಾಡ್ತೀನಿ..? ಚೆನ್ನಾಗಿ ತಿಂತೀನಿ.. ಅದ್ರಲ್ಲೂ ಸ್ವೀಟ್ಸ್ ಅಂದ್ರೆ ಕಂಟ್ರೋಲ್ ಇಲ್ಲದೆ ತಿಂದು ಬಿಡ್ತೀನಿ.. ಅಯ್ಯೋ ದೇವ್ರೆ! ಸದ್ಯಕ್ಕೆ ಇವಿಷ್ಟೇ ವಿಷಯಗಳು.. ಇನ್ಯಾವುದಾದ್ರೂ ಮರೆತ್ನಾ..? ಇಲ್ಲ ಅಲ್ವಾ..? ಏನಾದ್ರೂ ಇದ್ರೆ ಬೇಗ ಅಪ್ಡೇಟ್ ಮಾಡ್ತೀನಿ. ಲವ್ ಯೂ ಆಲ್! ಯಾರೂ ಚಿಂತೆ ಮಾಡಬೇಡಿ ಓಕೆ.." ಎಂದು ಚಿಲ್‌ ಆಗಿ ಪೋಸ್ಟ್‌ ಮಾಡಿ, ಫ್ಯಾನ್ಸ್‌ಗೆ ಅಪ್ಡೇಟ್‌ ನೀಡಿದ್ದಾರೆ ರಶ್ಮಿಕಾ ಮಂದಣ್ಣ.