ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Girlfriend Movie: ರಶ್ಮಿಕಾ ಮಂದಣ್ಣ-ದೀಕ್ಷಿತ್‌ ಶೆಟ್ಟಿ ಜೋಡಿಯ ʼದಿ ಗರ್ಲ್‌ಫ್ರೆಂಡ್‌ʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ

Rashmika Mandanna: ಸ್ಯಾಂಡಲ್‌ವುಡ್‌ ಮೂಲಕ ಚಿತ್ರರಂಗ ಪ್ರವೇಶಿಸಿ ವಿವಿಧ ಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ದೀಕ್ಷಿತ್‌ ಶೆಟ್ಟಿ ಜತೆಗೆ ನಟಿಸಿರುವ, ಪ್ಯಾನ್‌ ಇಂಡಿಯಾ ಚಿತ್ರ ʼದಿ ಗರ್ಲ್‌ಫ್ರೆಂಡ್‌ʼನ ರಿಲೀಸ್‌ ಡೇಟ್‌ ಹೊರಬಿದ್ದಿದೆ.

ಹೈದರಾಬಾದ್‌: ಸದ್ಯ ವಿವಿಧ ಭಾಷೆಗಳಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಕೆಲವು ದಿನಗಳ ಹಿಂದೆ ತೆರೆಕಂಡ ಧನುಷ್‌ (Dhanush) ಜತೆಗಿನ 'ಕುಬೇರ' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಮಧ್ಯೆ ಅವರ ಬಹುನಿರೀಕ್ಷಿತ 2 ಚಿತ್ರಗಳು ಈ ವವರ್ಷವೇ ತೆರೆಗೆ ಬರಲಿ ಸಜ್ಜಾಗಿದೆ. ಬಾಲಿವುಡ್‌ ಸ್ಟಾರ್‌ ಆಯುಷ್ಮಾನ್‌ ಖುರಾನ ಜತೆಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಹಾರರ್‌ ಕಾಮಿಡಿ ʼಥಮ್ಮʼ ಹಿಂದಿ ಚಿತ್ರ ಅಕ್ಟೋಬರ್‌ 21ರಂದು ರಿಲೀಸ್‌ ಆಗಲಿದೆ. ಈಗಾಗಲೇ ಚಿತ್ರದ ಹಾಡು, ಟ್ರೈಲರ್‌ ಹೊರಬಿದ್ದಿದ್ದು, ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ದೀಕ್ಷಿತ್‌ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿಯ ಪ್ಯಾನ್‌ ಇಂಡಿಯಾ ತೆಲುಗು ಚಿತ್ರ ʼದಿ ಗರ್ಲ್‌ಫ್ರೆಂಡ್‌ʼನ (The Girlfriend Movie) ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ನವೆಂಬರ್‌ 7ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಈ ಬಗ್ಗೆ ರಶ್ಮಿಕಾ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼನೀವು ಇದಕ್ಕಾಗಿ ಕಾಯುತ್ತಿದ್ದೀರಿ ಎನ್ನುವುದು ನನಗೆ ಗೊತ್ತು. ʼದಿ ಗರ್ಲ್‌ಫ್ರೆಂಡ್‌ʼ ನವೆಂಬರ್‌ 7ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆʼʼ ಎಂದು ತಿಳಿಸಿದ್ದಾರೆ. ಜತೆಗೆ ಟೀಸರ್‌ ಕೂಡ ರಿಲೀಸ್‌ ಮಾಡಿದ್ದಾರೆ. ಆ ಮೂಲಕ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Rashmika Mandanna: ನ್ಯಾಷನಲ್‌ ಕ್ರಶ್‌ ಈಗ ವಿಲನ್‌; ಅಲ್ಲು-ಅಟ್ಲಿ-ದೀಪಿಕಾ ಚಿತ್ರದಲ್ಲಿ ರಶ್ಮಿಕಾಗೆ ನೆಗೆಟಿವ್‌ ರೋಲ್‌?

ರಾಹುಲ್ ರವೀಂದ್ರನ್ ನಿರ್ದೇಶನದ ‘ದಿ ಗರ್ಲ್​ಫ್ರೆಂಡ್​’ ಚಿತ್ರದಲ್ಲಿ ರಶ್ಮಿಕಾಗೆ ಮೊದಲ ಬಾರಿ ಕನ್ನಡ ನಟ, 'ದಿಯಾ' ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಟೀಸರ್‌ ಅನ್ನು ಟಾಲಿವುಡ್‌ನ ಸೂಪರ್‌ ಸ್ಟಾರ್‌ ವಿಜಯ್‌ ದೇವರಕೊಂಡ ಕಳೆದ ವರ್ಷ ರಿಲೀಸ್‌ ಮಾಡಿದ್ದರು. ಈ ಚಿತ್ರದಲ್ಲಿ ಕೌಶಿಕ್‌ ಮಹತಾ, ರೋಹಿಣಿ, ರಾವ್‌ ರಮೇಶ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹೆಶಮ್‌ ಅಬ್ದುಲ್‌ ವಹಾಬ್‌ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೇ ಹೊರಬಿದ್ದಿದ್ದು, ಹಿಟ್‌ ಲಿಸ್ಟ್‌ ಸೇರಿವೆ.

ಗುಟ್ಟಾಗಿ ನಿಶ್ವಿತಾರ್ಥ?

ಅಕ್ಟೋಬರ್‌ 3ರಂದು ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬಹಳ ಗುಟ್ಟಾಗಿ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತೀರಾ ಖಾಸಗಿಯಾಗಿ ನಡೆದ ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರಷ್ಟೇ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೆ ಹೊರ ಬರಬೇಕಿದೆ. ಬಹಳ ಹಿಂದಿನಿಂದಲೂ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನವ ಗುಸುಗುಸು ಹಬ್ಬಿದೆ. ಆದರೆ ಇದುವರೆಗೆ ಇಬ್ಬರೂ ಈ ಬಗ್ಗೆ ಮಾತನಾಡಿಲ್ಲ.

2018ರಲ್ಲಿ ತೆರೆಕಂಡ ಟಾಲಿವುಡ್‌ನ ರೊಮ್ಯಾಂಟಿಕ್‌ ಚಿತ್ರ ʼಗೀತ ಗೋವಿಂದಂʼನಲ್ಲಿ ಮೊದಲ ಬಾರಿಗೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ತೆರೆ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿನ ಇವರಿಬ್ಬರ ಜೋಡಿ ಪ್ರೇಕ್ಷಕರ ಗಮನ ಸೆಳೆದಿತ್ತು. ಚಿತ್ರ ಸುಮಾರು 5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ 135 ಕೋಟಿ ರೂ. ದೋಚಿಕೊಂಡಿತ್ತು. ಆ ಮೂಲಕ ಇವರು ಯಶಸ್ವಿ ಜೋಡಿ ಎನಿಸಿಕೊಂಡಿದ್ದರು. ಈ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಯಿತು ಎನ್ನಲಾಗಿದೆ.