ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಲ್ಲಿ ಮತ್ತೊಂದು ಬಂಪರ್‌ ಆಫರ್‌; ಹೃತಿಕ್‌ ರೋಷನ್‌ಗೆ ಕನ್ನಡತಿ ಜೋಡಿ

Krrish 4: ನ್ಯಾಶನಲ್‌ ಕ್ರಶ್‌, ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ ದೇಶದ ಬಹುಬೇಡಿಕೆಯ ನಟಿ ಎನಿಇಸಕೊಂಡಿದ್ದಾರೆ. ಟಾಲಿವುಡ್‌, ಕಾಲಿವುಡ್‌ ಜತೆಗೆ ಬಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಈ ಮಧ್ಯೆ ಅವರು ಬಾಲಿವುಡ್‌ ಸೂಪರ್‌ ಸ್ಟಾರ್‌ ಹೃತಿಕ್‌ ರೋಷನ್‌ ಅವರ ʼಕ್ರಿಶ್‌ 4ʼ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಹೃತಿಕ್‌ ರೋಷನ್‌ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ?

-

Ramesh B Ramesh B Sep 20, 2025 7:49 PM

ಮುಂಬೈ: ಸ್ಯಾಂಡಲ್‌ವುಡ್‌ನಿಂದ ವೃತ್ತಿ ಜೀವನ ಆರಂಭಿಸಿ ಟಾಲಿವುಡ್‌, ಕಾಲಿವುಡ್‌ ಬಳಿಕ ಬಾಲಿವುಡ್‌ಗೂ ಕಾಲಿಟ್ಟು ನ್ಯಾಶನಲ್‌ ಕ್ರಶ್‌ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ದೇಶದ ಬಹುಬೇಡಿಕೆಯ ನಟಿ. ಬಾಲಿವುಡ್‌ನಲ್ಲಿಯೂ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ನೀಡಿರುವ ಅವರು ಈಗಾಗಲೇ ಘಟಾನುಘಟಿ ಸ್ಟಾರ್‌ಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಅವರು ಹಿಂದಿಯ ಬಹುನಿರೀಕ್ಷಿತ ʼಥಮʼ, ʼಕಾಕ್‌ಟೇಲ್‌ 2ʼ ಚಿತ್ರಗಳ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಅವರನ್ನು ಅರಸಿಕೊಂಡು ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಬಂದಿದೆ. ಇದರಲ್ಲಿ ಅವರು ಹೃತಿಕ್‌ ರೋಷನ್‌ಗೆ (Hrithik Roshan) ಜೋಡಿಯಾಗಲಿದ್ದಾರೆ. ಆ ಮೂಲಕ ಬಂಪರ್‌ ಚಾನ್ಸೊಂದು ಅವರದ್ದಾಗಿದೆ. ವಿಶೇಷ ಎಂದರೆ ಇದರಲ್ಲಿ ಅವರು ಬಾಲಿವುಡ್‌ನ ಟಾಪ್‌ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರನ್ನು ರಿಪ್ಲೇಸ್‌ ಮಾಡಿದ್ದಾರೆ.

ಬಾಲಿವುಡ್‌ನ ಹಿಡ್‌ ಜೋಡಿಗಳಲ್ಲಿ ಹೃತಿಕ್‌ ರೋಷನ್‌-ಪ್ರಿಯಾಂಕಾ ಚೋಪ್ರಾ ಕೂಡ ಒಂದು. ಈಗಾಗಲೇ ಅವರು ʼಕ್ರಿಶ್‌ʼ ಮತ್ತು ʼಕ್ರಿಶ್‌ 3ʼ ಮೂಲಕ ಮೋಡಿ ಮಾಡಿದ್ದಾರೆ. ಇದೀಗ ʼಕ್ರಿಶ್‌ʼ ಸರಣಿಯ ಮುಂದುವರಿದ ಭಾಗವಾಗಿ ʼಕ್ರಿಶ್‌ 4ʼ ಬರಲಿದ್ದು, ಇದಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Rashmika-Vijay Deverakonda: ಮತ್ತೆ ರಶ್ಮಿಕಾ-ವಿಜಯ್‌ ದೇವರಕೊಂಡ ಭರ್ಜರಿ ವೆಕೇಶನ್‌? ವೈರಲ್‌ ಆಗಿರೋ ವಿಡಿಯೊದಲ್ಲೇನಿದೆ?

ಈಗಾಗಲೇ ʼಕ್ರಿಶ್‌ʼ ಸರಣಿಯ ಚಿತ್ರಗಳಾದ ʼಕೋಯಿ ಮಿಲ್‌ ಗಯಾʼ (2003), ʼಕ್ರಿಶ್‌ʼ, ʼಕ್ರಿಶ್‌ 3ʼ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಎನಿಸಿಕೊಂಡಿವೆ. ರಾಕೇಶ್‌ ರೋಷನ್‌ ನಿರ್ದೇಶನದ ಈ ಸೂಪರ್‌ ಹೀರೋ ಸರಣಿಯ ಎಲ್ಲ ಚಿತ್ರಗಳಲ್ಲಿ ನಾಯಕನಾಗಿ ಹೃತಿಕ್‌ ರೋಷನ್‌ ಕಾಣಿಸಿಕೊಂಡಿದ್ದಾರೆ. ʼಕೋಯಿ ಮಿಲ್‌ ಗಯಾʼ ಸಿನಿಮಾದಲ್ಲಿ ಹೃತಿಕ್‌ಗೆ ಜೋಡಿಯಾಗಿ ಪ್ರೀತಿ ಜಿಂಟಾ ಕಾಣಿಸಿಕೊಂಡಿದ್ದರೆ ʼಕ್ರಿಶ್‌ʼ ಮತ್ತು ʼಕ್ರಿಶ್‌ 3ʼಯಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಇದೀಗ ಸರಣಿಯ 4ನೇ ಭಾಗಕ್ಕೆ ಮತ್ತೆ ನಾಯಕಿ ಬದಲಾಗಿದ್ದು, ಪ್ರಿಯಾಂಕಾ ಬದಲು ರಶ್ಮಿಕಾಗೆ ಮಣೆ ಹಾಕಲಾಗಿದೆ ಎನ್ನುವ ವದಂತಿ ಜೋರಾಗಿ ಕೇಳಿ ಬರುತ್ತಿದೆ. ಪ್ರಿಯಾಂಕಾ ಹಾಲಿವುಡ್‌ ಮತ್ತು ಎಸ್‌.ಎಸ್‌.ರಾಜಮೌಳಿ-ಮಹೇಶ್‌ ಬಾಬು ಕಾಂಬಿನೇಷನ್‌ನ ಚಿತ್ರದಲ್ಲಿ ನಿರತರಾಗಿದ್ದು, ಸದ್ಯಕ್ಕೆ ಅವರ ಕಾಲ್‌ ಶೀಟ್‌ ಸಿಗೋದು ಕಷ್ಟ. ಹೀಗಾಗಿ ನಾಯಕಿಯಾಗಿ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.

ವಿಶೇಷ ಎಂದರೆ ʼಕ್ರಿಶ್‌ 4ʼ ಚಿತ್ರದಲ್ಲಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೃತಿಕ್‌ ರೋಷನ್‌ ಹೊರಲಿದ್ದಾರೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಆರಂಭವಾಗಿದ್ದು, 2026ರ ಮಧ್ಯಭಾಗದಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. 2027ರಲ್ಲಿ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ. ಅದ್ಧೂರಿ ಬಜೆಟ್‌ನಲ್ಲಿ, ಬಹು ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಾಗಲಿದೆ.

ಒಂದುವೇಳೆ ಈ ಸುದ್ದಿ ನಿಜವಾದರೆ ಮೊದಲ ಬಾರಿಗೆ ರಶ್ಮಿಕಾ ಮತ್ತು ಹೃತಿಕ್‌ ತೆರೆಮೇಲೆ ಒಂದಾಗಲಿದ್ದಾರೆ. ʼಅನಿಮಲ್‌ʼ, ʼಪುಷ್ಪ 2ʼ, ʼಛಾವʼ, ʼಕುಬೇರʼ ಸಿನಿಮಾಗಳ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾಗೆ ಇದು ಮತ್ತುಂದು ಬಹುದೊಡ್ಡ ಅವಕಾಶ ಎಂದೇ ಪರಿಗಣಿಸಲಾಗುತ್ತದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.