ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಬರ್ತ್‌ ಡೇ ಸೆಲೆಬ್ರೇಶನ್‌? ವೈರಲಾಗ್ತಿರೋ ಈ ಫೊಟೋಗಳ ಅಸಲಿಯತ್ತು ಏನು?

ನಟಿ ರಶ್ಮಿಕಾ ಮಂದಣ್ಣ(Rashmika Mandanna) ರಕ್ಷಿತ್ ಶೆಟ್ಟಿ ಅವರ ಜೊತೆಗೆ ಹುಟ್ಟು ಹಬ್ಬ ಆಚರಿಸಿದ್ದ ಕೆಲವು ಫೋಟೊಗಳು ವೈರಲ್ ಆಗಿದ್ದು ಈ ಪೋಟೋ ನೋಡಿದ್ರೆ ಅವರೇ ಇವರಾ ಎಂಬ ಅಚ್ಚರಿ ಮೂಡುತ್ತದೆ. ವೈರಲ್‌ ಆಗಿರುವ ಫೋಟೋ ಮತ್ತು ವಿಡಿಯೋಗಳಲ್ಲಿ ಇಬ್ಬರು ಡಿಫರೆಂಟ್‌ ಆಗಿ ಕಾಣುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಬರ್ತ್‌ ಡೇ ಸೆಲೆಬ್ರೇಶನ್‌?

Profile Pushpa Kumari Apr 8, 2025 3:55 PM

ಬೆಂಗಳೂರು: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ಬರ್ತ್ ಡೇಯನ್ನು ಅದ್ಧೂರಿಯಾಗಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. 29 ವರ್ಷಕ್ಕೆ ಕಾಲಿಟ್ಟ ಕೊಡಗಿನ ಕುವರಿಯು ದೂರದ ಓಮನ್ ದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂಬಂಧಿತ ವಿಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಈ‌ ವಿಡಿಯೊ ವೈರಲ್ ಆಗುತ್ತಿದ್ದಂತೆ ಈ ಹಿಂದೆ ನಟ ರಕ್ಷಿತ್ ಶೆಟ್ಟಿ(Rakshith Shetty) ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಫೋಟೊ ಕೂಡ ಇದೀಗ ಸಖತ್ ವೈರಲ್ ಆಗುತ್ತಿದೆ. ನಟ ರಕ್ಷಿತ್ ‌ಜೊತೆ ‌ಇರುವ ಈ ಫೋಟೋಗಳಲ್ಲಿ ರಶ್ಮಿಕಾ ಬಹಳಷ್ಟು ಸಿಂಪಲ್ ಆಗಿ ಕಾಣಿಸಿಕೊಂಡಿದ್ದು ರಶ್ಮಿಕಾ ಅಭಿಮಾನಿಗಳೇ ಫುಲ್ ಶಾಕ್ ಆಗಿದ್ದಾರೆ.



ನಟಿ ರಶ್ಮಿಕಾ ಮಂದಣ್ಣ ಅವರು ಬರ್ತ್ ಡೇ ಸಂದರ್ಭದಲ್ಲಿ ಹೆಚ್ಚಾಗಿ ವಿದೇಶಿ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ಕೆಲವು ವರ್ಷಗಳ ಹಿಂದೆ ಅವರು ಬಹಳ ಸಿಂಪಲ್ ಆಗಿ ತಮ್ಮ ಬರ್ತ್ ಡೇ ಸೆಲೆಬ್ರೇಟ್‌ ಮಾಡಿಕೊಂಡಿದ್ದರು. ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಈ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದು ಕಿರಿಕ್ ಪಾರ್ಟಿ ಕಾಂಬಿನೇಶನ್‌ಗಳು ಇದೀಗ ಮತ್ತೆ ನೆನಪಾಗುವಂತೆ ಮಾಡಿದೆ. ನಟಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಹುಟ್ಟು ಹಬ್ಬ ಆಚರಿಸಿದ್ದ ಕೆಲವು ಫೋಟೊಗಳು ವೈರಲ್ ಆಗಿದ್ದು ಈ ಪೋಟೋ ನೋಡಿದ್ರೆ ಅವರೇ ಇವರಾ ಎಂಬ ಅಚ್ಚರಿ ಮೂಡುತ್ತದೆ. ವೈರಲ್‌ ಆಗಿರುವ ಫೋಟೋ ಮತ್ತು ವಿಡಿಯೋಗಳಲ್ಲಿ ಇಬ್ಬರು ಡಿಫರೆಂಟ್‌ ಆಗಿ ಕಾಣುತ್ತಿದ್ದಾರೆ.

ಇದನ್ನು ಓದಿ: Rashmika Mandanna: ಓಮನ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ; ಪಾರ್ಟಿಯಲ್ಲಿ ವಿಜಯ್‌ ದೇವರಕೊಂಡ ಭಾಗಿ?

ವೈರಲ್ ಆದ ಫೋಟೋದಲ್ಲಿ ನಟ ರಕ್ಷಿತ್ ಶೆಟ್ಟಿ‌ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬರ್ತಡೇ ಟ್ಯಾಗ್ ಹಾಕಿ, ಕೇಕ್ ಕಟ್ ಮಾಡಿ ತಿನ್ನಿಸುವ ಜೊತೆಗೆ ಇನ್ನಿತರ ಫೋಟೊ ‌ಕೂಡ ವೈರಲ್ ಅಗಿವೆ. ಈ ಮೂಲಕ ಇವರಿಬ್ಬರ ಹಳೆ ಪ್ರೇಮ್ ಕಹಾನಿ ಮತ್ತೆ ಈಗ ಸುದ್ದಿಯಲ್ಲಿದೆ. ಈ ಜೋಡಿ ನಿಶ್ಚಿತಾರ್ಥ ‌ ಮಾಡಿಕೊಂಡ ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿ ಇಬ್ಬರು ಪ್ರೀತಿಯಿಂದ ದೂರ ಸರಿದಿದ್ದಾರೆ. ಹಾಗಿದ್ದರೂ ರಶ್ಮಿಕಾ ಅವರ ಈ ನಿರ್ಧಾರವನ್ನು ಸ್ಯಾಂಡಲ್ ವುಡ್ ನ ಅಭಿಮಾನಿಗಳು ಟೀಕೆ ಮಾಡುತ್ತಲೇ ಇದ್ದಾರೆ.

ಸದ್ಯ ನಟಿ ರಶ್ಮಿಕಾ ಮಂದಣ್ಣ ಬಹುಭಾಷೆಯಲ್ಲಿ ಅಭಿನಯಿಸಿ ಸೈ ಎನಿಸಿ ಕೊಂಡರು. ಪುಷ್ಪ, ಪುಷ್ಪ 2, ಬಾಲಿವುಡ್ ನ ಅನಿಮಲ್, ಗೀತಾ ಗೋವಿಂ ದಂ ಇತರ ಸಿನಿಮಾಗಳು ಹಿಟ್ ಆಗಿದೆ. ಈಗ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಬ್ಯುಸಿ ಆಗಿದ್ದು ಈ ನಡುವೆ ನಟಿಯ ಹಳೆಯ ಬರ್ತ್ ಡೇ‌ ಸೆಲೆಬ್ರೇಶನ್ ಫೋಟೋ ಕೂಡ ಬಹಳಷ್ಟು ವೈರಲ್ ಆಗುತ್ತಿವೆ.