ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ಓಮನ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಶ್ಮಿಕಾ ಮಂದಣ್ಣ; ಪಾರ್ಟಿಯಲ್ಲಿ ವಿಜಯ್‌ ದೇವರಕೊಂಡ ಭಾಗಿ?

Vijay Deverakonda: ಹಲವು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾದ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಓಮನ್‌ ಒಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ ಎನ್ನುವ ವದಂತಿ ಹರಡಿದೆ. ಇತ್ತೀಚೆಗೆ ಓಮನ್‌ನಲ್ಲಿ ರಶ್ಮಿಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಈ ವೇಳೆ ವಿಜಯ್‌ ಇದ್ದರು ಎನ್ನಲಾಗಿದೆ.

ಓಮನ್‌ನಲ್ಲಿ ವಿಜಯ್‌ ದೇವರಕೊಂಡ ಜತೆ ಹುಟ್ಟುಹಬ್ಬ ಆಚರಿಸಿಕೊಂಡ್ರಾ ರಶ್ಮಿಕಾ?

ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ.

Profile Ramesh B Apr 6, 2025 9:35 PM

ಮಸ್ಕತ್‌: ಸ್ಯಾಂಡಲ್‌ವುಡ್‌ ಮೂಲಕ ಚಿತ್ರರಂಗ ಪ್ರವೇಶಿಸಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬಹು ಬೇಡಿಕೆಯ ನಟಿ. ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲ ಬಾಲಿವುಡ್‌ನಲ್ಲೂ ಒಂದರ ಹಿಂದೆ ಒಂದರಂತೆ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಈ ಕೊಡಗಿನ ಬೆಡಗಿ ಶನಿವಾರ (ಏ. 5) 29ನೇ ವರ್ಷಕ್ಕೆ ಕಾಲಿಟ್ಟದ್ದಾರೆ. ಓಮನ್‌ಗೆ ಹಾರಿರುವ ಅವರು ಅಲ್ಲಿ ಆಪ್ತರು, ಸ್ನೇಹಿತರೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೀಗ ಈ ಬರ್ಡ್‌ಡೇ ಪಾರ್ಟಿಯಲ್ಲಿ ರಶ್ಮಿಕಾ ಅವರ ಬಾಯ್‌ಫ್ರೆಂಡ್‌, ಟಾಲಿವುಡ್‌ ನಟ ವಿಜಯ್‌ ದೇವರಕೊಂಡ (Vijay Deverakonda) ಕೂಡ ಭಾಗಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇಬ್ಬರು ಜತೆಯಾಗಿ ಪೋಸ್‌ ಕೊಟ್ಟಿರುವ ಫೋಟೊ ಹೊರ ಬರದಿದ್ದರೂ ಇಂತಹ ವದಂತಿ ಹರಡಲು ಇಬ್ಬರು ಪ್ರತ್ಯೇಕವಾಗಿ ಹಂಚಿಕೊಂಡ ಫೋಟೊಗಳೇ ಕಾರಣ ಎನ್ನುವುದು ವಿಶೇಷ.

ಹುಟ್ಟುಹಬ್ಬ ಆಚರಿಸಿಕೊಂಡ ಫೋಟೊವನ್ನು ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ಕುಳಿತಿರುವ ಫೋಟೊ ಇದಾಗಿದೆ. ಈ ಫೋಟೊ ವೈರಲ್‌ ಆದ ಬೆನ್ನಲ್ಲೇ ವಿಜಯ್‌ ದೇವರಕೊಂಡ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬೀಚ್‌ನಲ್ಲಿ ಪೋಸ್‌ ನೀಡಿರುವ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಹಂಚಿಕೊಂಡಿರುವ ಫೋಟೊದಲ್ಲಿನ ಸಾಮ್ಯತೆಯನ್ನು ಫ್ಯಾನ್ಸ್‌ ಗಮನಿಸಿದ್ದಾರೆ. ಹೀಗಾಗಿ ರಶ್ಮಿಕಾ ಬರ್ತ್‌ಡೇ ಪಾರ್ಟಿಯಲ್ಲಿ ವಿಜಯ್‌ ಕೂಡ ಭಾಗಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್‌ ಇಲ್ಲಿದೆ:

ವಿಜಯ್‌ ದೇವರಕೊಂಡ ಹಂಚಿಕೊಂಡ ಪೋಸ್ಟ್‌ ಇದು:

ಈ ಸುದ್ದಿಯನ್ನೂ ಓದಿ: Rashmika Mandanna: ಕೊನೆಗೂ ಪ್ರೀತಿಯಲ್ಲಿ ಬಿದ್ದಿರುವುದನ್ನು ಒಪ್ಪಿಕೊಂಡ ರಶ್ಮಿಕಾ! ಸೀಕ್ರೆಟ್‌ ಡೇಟಿಂಗ್‌ ಬಗ್ಗೆ ಹೇಳಿದ್ದೇನು?

ಫ್ಯಾನ್ಸ್‌ ಗಮನಿಸಿದ ಸಾಮ್ಯತೆ ಏನು?

ರಶ್ಮಿಕಾ ಮತ್ತು ವಿಜಯ್‌ ಅವರಿದ್ದ ಬ್ಯಾಕ್‌ಗ್ರೌಂಡ್‌ ಗಮನಿಸಿದರೆ ಇವರಿಬ್ಬರಿದ್ದ ಸ್ಥಳ ಒಂದೇ ಎನ್ನುವುದು ಹಲವರ ವಾದ. ಇಬ್ಬರ ಫೋಟೊದಲ್ಲಿಯೂ ಕಂಡು ಬರುವ ಬಿಳಿ ಮರಳು, ನೀಲಿ ಛತ್ರಿ ಮತ್ತು ತಾಳೆ ಮರ ಇದೆರಡೂ ಒಂದೇ ಜಾಗ ಎನ್ನುವುದಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಹೇಳಿದ್ದಾರೆ. ಹೀಗಾಗಿ ಓಮನ್‌ನಲ್ಲಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ.

ವಿಜಯ್‌ ಮತ್ತು ರಶ್ಮಿಕಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ವರ್ಷಗಳಿಂದ ಹರಿದಾಡುತ್ತಿದ್ದರೂ ಇಬ್ಬರು ಈ ಬಗ್ಗೆ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಕದ್ದುಮುಚ್ಚಿ ಓಡಾಡುವಾಗ ಈ ಜೋಡಿ ಹಲವು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

2018ರಲ್ಲಿ ತೆರೆಕಂಡ ಟಾಲಿವುಡ್‌ ಚಿತ್ರ ʼಗೀತ ಗೋವಿಂದಂʼನಲ್ಲಿ ಈ ಜೋಡಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿತ್ತು. ಈ ರೊಮ್ಯಾಂಟಿಕ್‌ ಡ್ರಾಮ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವ ಮೂಲಕ ವಿಜಯ್‌-ರಶ್ಮಿಕಾ ಸಿನಿಪ್ರಿಯರ ಹಾಟ್‌ ಫೆವರೇಟ್‌ ಎನಿಸಿಕೊಂಡರು. ಜತೆಗೆ ಈ ಚಿತ್ರದ ವೇಳೆ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆಯಿತು ಎನ್ನಲಾಗಿದೆ.

ಅದಾದ ಬಳಿಕ 2019ರಲ್ಲಿ ತೆರೆಕಂಡ ʼಡಿಯರ್‌ ಕಾಮ್ರೇಡ್‌ʼ ತೆಲುಗು ಸಿನಿಮಾದಲ್ಲಿಯೂ ಇವರು ಜತೆಯಾಗಿ ನಟಿಸಿದರು. ಈ ವೇಳೆ ಇವರ ಸಂಬಂಧ ಮತ್ತಷ್ಟು ಗಟ್ಟಿಯಾಯ್ತು. ಈ ಮಧ್ಯೆ ರಶ್ಮಿಕಾ ಹಲವು ಬಾರಿ ವಿಜಯ್‌ ಮನೆಯಲ್ಲಿ ಕಾಣಿಸಿಕೊಂಡರು. ಜತೆಗೆ ಇಬ್ಬರು ಆಗಾಗ ಕದ್ದುಮುಚ್ಚಿ ಪ್ರವಾಸ ಮಾಡುತ್ತಿದ್ದರು. ಇವರು ನೇರವಾಗಿ ಹೇಳದಿದ್ದರೂ ಪ್ರತ್ಯೇಕವಾಗಿ ಹಂಚಿಕೊಳ್ಳುತ್ತಿದ್ದ ಫೋಟೊ ಇಬ್ಬರೂ ಒಂದೇ ಸ್ಥಳದಲ್ಲಿದ್ದರು ಎನ್ನುವ ಸೂಚನೆ ನೀಡುತ್ತಲೇ ಇತ್ತು. ಸದ್ಯದಲ್ಲೇ ಇವರು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.