'ಕಾಂತಾರ: ಚಾಪ್ಟರ್ 1' ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತೆಲುಗಿನ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದರು. 'ಮೈತ್ರಿ ಮೂವಿ ಮೇಕರ್ಸ್' ಸಂಸ್ಥೆಯೊಂದಿಗೆ ಈಗಾಗಲೇ 'ಜೈ ಹನುಮಾನ್' ಸಿನಿಮಾವನ್ನು ಆರಂಭಿಸಿರುವ ಅವರು, 'ಸಿತಾರಾ ಎಂಟರ್‌ಟೇನ್‌ಮೆಂಟ್ಸ್' ಬ್ಯಾನರ್‌ನಲ್ಲೂ ಒಂದು ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿತ್ತು. 'ಆಕಾಶವಾಣಿ' ಖ್ಯಾತಿಯ ನಿರ್ದೇಶಕ ಅಶ್ವಿನ್ ಗಂಗರಾಜು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಬಂದಿರುವ ಮಾಹಿತಿಯೊಂದು ಅಭಿಮಾನಿಗಳಿಗೆ ತೀವ್ರ ಆಘಾತ ನೀಡಿದೆ.
ನಿಂತುಹೋಯ್ತಾ ಈ ಸಿನಿಮಾ?
ಹೌದು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ರಿಷಬ್ ಶೆಟ್ಟಿ ಅವರ ಕಾಂಬಿನೇಷನ್‌ನಲ್ಲಿ 18ನೇ ಶತಮಾನದ ಹಿನ್ನೆಲೆಯ ಐತಿಹಾಸಿಕ ಆಕ್ಷನ್ ಡ್ರಾಮಾ ಸಿನಿಮಾವೊಂದನ್ನು ನಿರ್ಮಿಸಲು ಯೋಜಿಸಿತ್ತು. ಈ ಚಿತ್ರವನ್ನು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿ, ಉಳಿದ ಭಾಷೆಗಳಿಗೆ ಡಬ್ ಮಾಡಲು ನಿರ್ಮಾಪಕರು ಉದ್ದೇಶಿಸಿದ್ದರು. ಆದರೆ, ಇದೀಗ ಈ ಸಿನಿಮಾವನ್ನು ಕೈಬಿಡಲಾಗಿದೆ ಎಂಬ ವರದಿಗಳು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿವೆ.
Rishab Shetty: ಹಾಲಿವುಡ್‌ನಲ್ಲಿ ಮಿಂಚಿದ ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್
ಸಿನಿಮಾ ನಿಲ್ಲಲು ಕಾರಣವೇನು?
'ಕಾಂತಾರ' ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು, ನಿರ್ಮಾಪಕ ಸೂರ್ಯದೇವರ ನಾಗವಂಶಿ ಅವರ ಬಳಿ ಭಾರಿ ಮೊತ್ತದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಎಲ್ಲಾ ರೀತಿಯಲ್ಲೂ ಲೆಕ್ಕಾಚಾರ ಹಾಕಿದ ನಿರ್ಮಾಪಕ ನಾಗವಂಶಿ ಅವರಿಗೆ ಅಷ್ಟೊಂದು ಬಜೆಟ್ ಭರಿಸಲು ಸಾಧ್ಯವಾಗದ ಕಾರಣ, ಈ ಯೋಜನೆಯನ್ನು ಇಲ್ಲಿಗೆ ಕೈಬಿಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಿಕ್ಕಿಲ್ಲ ಅಧಿಕೃತ ಸ್ಪಷ್ಟನೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಘೋಷಣೆಯಾಗಿದ್ದ ಈ ಸಿನಿಮಾ 2026ರ ಆರಂಭದಲ್ಲೇ ಸೆಟ್ಟೇರಬೇಕಿತ್ತು. ಆದರೆ ಸಿನಿಮಾ ರದ್ದಾಗಿರುವ ಕಾರಣ, ನಿರ್ದೇಶಕ ಅಶ್ವಿನ್ ಗಂಗರಾಜು ತಮ್ಮ ಕಥೆಗೆ ಹೊಸ ನಟನ ಹುಡುಕಾಟದಲ್ಲಿದ್ದಾರಂತೆ. ಆದರೆ, ಈ ಸುದ್ದಿಯ ಕುರಿತು ಚಿತ್ರತಂಡವಾಗಲಿ ಅಥವಾ ರಿಷಬ್ ಶೆಟ್ಟಿ ಅವರಾಗಲಿ ಈವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
Rishab shetty: `ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್ ಬಿಗ್ ಅಪ್‌ಡೇಟ್! ಫ್ಯಾನ್ಸ್ ಖುಷ್
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಿಷಬ್
ಪ್ರಸ್ತುತ ರಿಷಬ್ ಶೆಟ್ಟಿ ಅವರು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿರುವ 'ಜೈ ಹನುಮಾನ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ, ಈ ವರ್ಷಾಂತ್ಯದಲ್ಲಿ ಸಂದೀಪ್ ಸಿಂಗ್ ನಿರ್ದೇಶನದ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರದ ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ಕರುನಾಡಿನ 'ಬೆಳವಡಿ ಮಲ್ಲಮ್ಮ'ನ ಪಾತ್ರದಲ್ಲಿ ಭೂಮಿ ಪೆಡ್ನೇಕರ್ ನಟಿಸಲಿರುವುದು ವಿಶೇಷ.