ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

Rashmika Vijay Devarkonda: ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಗುರುವೈಭವೋತ್ಸವ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಸಮಾರೋಪ ಸಮಾರಂಭದಲ್ಲಿ, ಕಾಂತಾರ ಖ್ಯಾತಿಯ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಭಾಗಿಯಾಗಿದ್ದರು. ನವರಸನಾಯಕ ಜಗ್ಗೇಶ್​​​, ಮಾಜಿ ಡಿಸಿಎಂ ಅಶ್ವತ್ಥ್​ ನಾರಾಯಣ್ ಸೇರಿ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ರಶ್ಮಿಕಾ ಮಂದಣ್ಣ

ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಗುರುವೈಭವೋತ್ಸವ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಸಮಾರೋಪ ಸಮಾರಂಭದಲ್ಲಿ, ಕಾಂತಾರ ಖ್ಯಾತಿಯ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ (Rishab Shetty) ಭಾಗಿಯಾಗಿದ್ದರು. ನವರಸನಾಯಕ ಜಗ್ಗೇಶ್​​​, ಮಾಜಿ ಡಿಸಿಎಂ ಅಶ್ವತ್ಥ್​ ನಾರಾಯಣ್ ಸೇರಿ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು. ಈ ಪವಿತ್ರ ಕಾರ್ಯಕ್ರಮದ ಅಂಗವಾಗಿ ಮಂತ್ರಾಲಯಕ್ಕೆ (Manthralaya) ಭೇಟಿ ನೀಡಿದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ, ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು.

ಮಠಕ್ಕೆ ಆಗಮಿಸಿದ ರಿಷಭ್ ಶೆಟ್ಟಿ ಅವರು ರಾಯರ ಬೃಂದಾವನದ ಮುಂದೆ ಭಕ್ತಿಯಿಂದ ಕುಳಿತು ದರ್ಶನ ಪಡೆದರು. ರಾಯರ ಹುಟ್ಟುಹಬ್ಬದಂದೇ ಮಂತ್ರಾಲಯಕ್ಕೆ ಬಂದಿರುವುದು ತಮಗೆ ಲಭಿಸಿದ ದೊಡ್ಡ ಸೌಭಾಗ್ಯ ಎಂದು ಅವರು ಈ ವೇಳೆ ಸಂತಸ ಹಂಚಿಕೊಂಡರು.

ಇದನ್ನೂ ಓದಿ: Amruthadhaare Serial: ಸಿಂಹದ ಗರ್ಜನೆಗೆ ನರಿಗಳು ತತ್ತರ; ಗೌತಮ್ ದಿವಾನ್ ನೀಡ್ತಾನಾ ಕೇಡಿಯ ಅಹಂಕಾರಕ್ಕೆ ತಕ್ಕ ಉತ್ತರ?

ಜೈ ಹನುಮಾನ್‌ ಸಿನಿಮಾ ಹೇಗಿರಲಿದೆ?

ಈ ವೇಳೆ ಮಾಧ್ಯಮದ ಜೊತೆ ರಿಷಬ್‌ ಮಾತನಾಡಿ, ʻತುಂಬಾ ಖುಷಿ ಆಗುತ್ತೆ. ಬಹಳ ಒಳ್ಳೆಯ ದಿನ. ದರ್ಶನ ಪಡೆಯುವ ಅವಕಾಶ. ಸಂದರ್ಭ ಕೂಡಿಕೊಂಡು ಬಂದಿರೋದು ಖುಷಿ. ನನಗೆ ಕಥೆ ಇಷ್ಟ ಆದರೆ ಸಿನಿಮಾ ಮಾಡ್ತೀನಿ ಅಂತ ಇದೆ ವೇಳೆ ಮಾತನಾಡಿದರು. ಒಂದು ಕಥೆ ಬಂದಾಗ, ಒಳ್ಳೆ ನಿರ್ದೇಶಕರು, ನಿರ್ಮಾಪಕರು ಬಂದಾಗ, ಸಿನಿಮಾ ಮಾಡಬೇಕು ಅನ್ನೋದು ಪ್ರತಿಯೊಬ್ಬ ಕಲಾವಿದನ ಆಸೆ ಆಗಿರುತ್ತೆ. ಜೈ ಹನುಮಾನ್‌ ಸಿನಿಮಾ ನಿನ್ನಯಷ್ಟೇ ಮುಹೂರ್ತ ಆಗಿದೆ. ಹೋಗ್ತಾ ಹೋಗ್ತಾ ಜನರಿಗೆ ಅರ್ಥ ಆಗತ್ತೆ. ಜನರಿಗೆ ಖಂಡಿತ ಸಿನಿಮಾ ಇಷ್ಟ ಆಗತ್ತೆʼ ಎಂದಿದ್ದಾರೆ. ರಶ್ಮಿಕಾರ ಮದುವೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬೈ ಹೇಳಿ ಹೊರಟಿದ್ದಾರೆ.



ರಶ್ಮಿಕಾ, ವಿಜಯ್ ಮದುವೆ

ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ರಶ್ಮಿಕಾ, ವಿಜಯ್ ದೇವರಕೊಂಡ ಅವರನ್ನು ಪ್ರೀತಿಸಿ ಇದೀಗ ವಿವಾಹ ಆಗುತ್ತಿದ್ದಾರೆ. ರಶ್ಮಿಕಾರ ಯಶಸ್ಸಿಗೆ ಕಾರಣಕರ್ತರಾದ ಶೆಟ್ಟಿ ಗ್ಯಾಂಗಿನ ಸದಸ್ಯರ್​ಯಾರನ್ನೂ ಸಹ ರಶ್ಮಿಕಾ ಮದುವೆಗೆ ಆಮಂತ್ರಿಸಿಲ್ಲ. ಇತ್ತೀಚೆಗಷ್ಟೆ ಈ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿ, ತಮಾಷೆ ಮಾಡಿದ್ದರು.

ರಾಯರ ದರ್ಶನದ ನಂತರ ನಡೆದ ವೈಭವೋಪೇತ 'ಪರಿಮಳ ತೀರ್ಥ'ದ ತೆಪ್ಪೋತ್ಸವದಲ್ಲಿ ರಿಷಭ್ ಶೆಟ್ಟಿ ಭಾಗಿಯಾದರು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತುಂಗಭದ್ರಾ ನದಿಯ ತಟದಲ್ಲಿ ಈ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.

ಟಾಲಿವುಡ್‌ ʻರೌಡಿʼ ವಿಜಯ್‌ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ಅತ್ಯಂತ ಖಾಸಗಿಯಾಗಿ ಈ ಮದುವೆಯು ನಡೆಯುತ್ತಿದ್ದು, ಕೆಲವೇ ಕೆಲವು ಆಪ್ತರಿಗಷ್ಟೇ ಮದುವೆಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: Annayya Serial: ವೀರಭದ್ರನ ಹೆಡೆಮುರಿ ಕಟ್ಟೋಕೆ ಸಿದ್ಧವಾಯ್ತು ಅತ್ತೆ - ಸೊಸೆ ಜೋಡಿ!

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಅವರು ರಶ್ಮಿಕಾಗೆ ತುಂಬಾ ಹಳೆಯ ಗೆಳತಿ. ಹಾಗಾಗಿ, ರಶ್ಮಿಕಾ ಮದುವೆಗೆ ಆಗಲೇ ಆಶಿಕಾ ಹಾಜರಿ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಗೆ ಹೈದರಾಬಾದ್‌ನಿಂದ ಉದಯಪುರಕ್ಕೆ ಪುರೋಹಿತರನ್ನು ಕರೆಸಿಕೊಳ್ಳಲಾಗಿದೆ. ಮದುವೆ ಶಾಸ್ತ್ರಗಳನ್ನು ಈ ಪುರೋಹಿತರೇ ನಡೆಸಿಕೊಡಲಿದ್ದಾರೆ. ಅಂದಹಾಗೆ, ರಶ್ಮಿಕಾ ಮತ್ತು ವಿಜಯ್‌ ಎರಡು ಭಾರಿ ಮದುವೆ ಆಗಲಿದ್ದಾರೆ. ಮೊದಲಿಗೆ ತೆಲುಗು ಸಂಸ್ಕೃತಿಯಂತೆ ಮದುವೆ ನಡೆದರೆ, ನಂತರ ಕೊಡವ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆ ನಡೆಯಲಿದೆ.

Yashaswi Devadiga

View all posts by this author