ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rishab Shetty: ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ʼಟಾಕ್ಸಿಕ್‌ʼ ಬಗ್ಗೆ ರಿಷಬ್‌ ಶೆಟ್ಟಿ ಮೆಚ್ಚುಗೆಯ ಪೋಸ್ಟ್‌

Rishab Shetty:`ಟಾಕ್ಸಿಕ್’ (Toxic Movie) ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಉಪೇಂದ್ರ (Upendra) ಕೂಡ ಟ್ವೀಟ್‌ ಮಾಡಿದ್ದರು. ಇದೀಗ ರಿಷಬ್‌ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ. .ಕನ್ನಡ ಸಿನಿಮಾವನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುವ ನಿಮ್ಮ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.

ಟಾಕ್ಸಿಕ್‌ ಸಿನಿಮಾ

`ಟಾಕ್ಸಿಕ್’ (Toxic Movie) ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ (Sudeep) ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಉಪೇಂದ್ರ (Upendra) ಕೂಡ ಟ್ವೀಟ್‌ ಮಾಡಿದ್ದರು. ಇದೀಗ ರಿಷಬ್‌ ಕೂಡ ಯಶ್‌ಗೆ (Yash actor) ಸಾಥ್‌ ಕೊಟ್ಟಿದ್ದಾರೆ.

ಹೃದಯದಿಂದಲೇ ಜೀವಂತ

ಕಲಾವಿದನಾಗಿ ನೀವು ಒಂದು ಪಾತ್ರವನ್ನು ಮಾಡುವಾಗ ಅದನ್ನು ಹೃದಯದಿಂದಲೇ ಜೀವಂತಗೊಳಿಸಲು ಪ್ರಯತ್ನಿಸುತ್ತೀರಿ. ಇಲ್ಲಿ ಒಬ್ಬ ಶಕ್ತಿಶಾಲಿ ಮನುಷ್ಯನ ಹೋರಾಟವನ್ನು ಎಷ್ಟು ನಂಬಿಕೆಯಿಂದ ತೋರಿಸಿದ್ದಾರೆ ಎಂದು ನೋಡಿ ನಾನು ನಿಜವಾಗಿಯೂ ತುಂಬಾ ಇಷ್ಟಪಟ್ಟೆ. ಬಹುಶಃ ಕಥೆ ಮತ್ತು ಮುಖ್ಯ ಪಾತ್ರಗಳು ಬೇರೆ ಚಿತ್ರಗಳಂತೆ ಸಾಮಾನ್ಯ ರೀತಿಯಲ್ಲಿ ಇಲ್ಲ. ಆದರೆ ಅದು ತಪ್ಪು ಎಂದು ಹೇಳಲಾಗದು. ಒಂದು ಕಥೆಯನ್ನು ಹೇಳುವುದರಲ್ಲಿ ಹಾಕುವ ಪ್ರಯತ್ನ, ಮನಸ್ಸಿನಲ್ಲಿ ಹುಟ್ಟಿದ ಆಲೋಚನೆಯಿಂದ ಪರದೆಯ ಮೇಲೆ ಚಿತ್ರವಾಗುವವರೆಗಿನ ಪ್ರಯಾಣ ತುಂಬಾ ದೊಡ್ಡದು.

ಇದನ್ನೂ ಓದಿ: Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ

ಯಶ್‌ ಸರ್, ದೊಡ್ಡ ಪ್ರದರ್ಶನ ಬೇಕಾಗುವ ಪಾತ್ರಕ್ಕೆ ಮತ್ತು ಆ ಜಗತ್ತಿಗೆ ನೀವು ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡ ರೀತಿಗೆ Hats off . ಪ್ರತಿ ದೃಶ್ಯದಲ್ಲೂ ಅದನ್ನು ನಾನು ಸ್ಪಷ್ಟವಾಗಿ ಅನುಭವಿಸಿದೆ. ತಪ್ಪು ಮಾಡಿದ ಅಪರಾಧ ಭಾವನೆ ಹೇಗೆ ಹೆಚ್ಚಾಗುತ್ತಾ ಹೋಗಿ ಜೀವನವನ್ನು ವಿಷಮಯವಾಗಿಸುತ್ತದೆ ಎಂಬುದನ್ನು ಪ್ರೇಕ್ಷಕರಿಗೆ ಅನುಭವಿಸುವಂತೆ ಮಾಡುವುದು ಸುಲಭವಲ್ಲ.

ಈ ಧೈರ್ಯದ ಪ್ರಯೋಗಕ್ಕೆ ನಾನು ನಿಮ್ಮ ಜೊತೆಗಿದ್ದೇನೆ ಸರ್.ಕನ್ನಡ ಸಿನಿಮಾವನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುವ ನಿಮ್ಮ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಗೀತು ಮೋಹನ್‌ದಾಸ್‌ ಅವರಿಗೂ ಅವರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

Toxic

ಸುದೀಪ್‌ ರಿಯಾಕ್ಷನ್‌ ಏನಿತ್ತು?

ಯಶ್ ನಿಮ್ಮ ಹಿಂದಿನ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಹಾದಿಯ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದ್ದೀರಿ. ಅದೇ ರೀತಿಯ ಮತ್ತೊಂದು ಸಾಮಾನ್ಯ, ನಿರೀಕ್ಷಿತ ಹಾಗೂ ಫಾರ್ಮುಲಾ ಸಿನಿಮಾವನ್ನು ಮಾಡುವ ಬದಲು, ನೀವು ನಿಜವಾಗಿಯೂ ವಿಭಿನ್ನವಾದ, ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇಂತಹ ವಿಭಿನ್ನ ಹಾಗೂ ವಿನೂತನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು.

ಇದನ್ನೂ ಓದಿ: Bigg Boss Kannada 13: ಇದೊಂದು ಕಾರಣಕ್ಕೆ ʻಅಗ್ನಿಪರೀಕ್ಷೆʼಯಿಂದ ಕುಮಾರಿ ವಿದಾಯ!

`ಟಾಕ್ಸಿಕ್’ ಒಂದು ಶ್ಲಾಘನೀಯ ಪ್ರಯತ್ನ. ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆ ಹಾಗೂ ಕಲಿಕೆಯ ಅವಕಾಶ ಮಾಡಿಕೊಡುವ ಹಲವು ಅಂಶಗಳಿವೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು, ವಿಭಿನ್ನವಾಗಿ ಪ್ರಯೋಗ ಮಾಡುವ ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಸ್ನೇಹಿತ.. ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು ಎಂದು ಬರೆದುಕೊಂಡಿದ್ದರು.

Yashaswi Devadiga

View all posts by this author