ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thalapathy Vijay: ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ, ಶಿವಣ್ಣ ಅಭಿನಂದನೆ

Thalapathy Vijay: ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಮ್ ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೊದಲ ಚುನಾವಣೆಯಲ್ಲೇ ಈ ಸಾಧನೆ ಮಾಡಿದ್ದು, ವಿಜಯ್ ರಾಜಕೀಯ ಪ್ರವೇಶಕ್ಕೆ ಭಾರಿ ಯಶಸ್ಸು ತಂದಿದೆ. ಕನ್ನಡದ ಸ್ಟಾರ್ ನಟರಾದ ಶಿವರಾಜ್​ಕುಮಾರ್ , ರಿಷಬ್ ಶೆಟ್ಟಿ ಕೂಡ ಅಭಿನಂದನೆ ತಿಳಿಸಿದ್ದಾರೆ.

ರಿಷಬ್‌ ಶಿವಣ್ಣ

ದಳಪತಿ ವಿಜಯ್ (Thalapathy Vijay) ನೇತೃತ್ವದ ತಮಿಳಗ ವೆಟ್ರಿ ಕಳಗಮ್ (TVK) ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದೆ. ಮೊದಲ ಚುನಾವಣೆಯಲ್ಲೇ ಈ ಸಾಧನೆ ಮಾಡಿದ್ದು, ವಿಜಯ್ ರಾಜಕೀಯ ಪ್ರವೇಶಕ್ಕೆ ಭಾರಿ ಯಶಸ್ಸು ತಂದಿದೆ. ಕನ್ನಡದ ಸ್ಟಾರ್ ನಟರಾದ ಶಿವರಾಜ್​ಕುಮಾರ್ (Shivarajkumar), ರಿಷಬ್ ಶೆಟ್ಟಿ (Rishab shetty) ಕೂಡ ಅಭಿನಂದನೆ ತಿಳಿಸಿದ್ದಾರೆ.

ರಿಷಬ್‌ ಪೋಸ್ಟ್‌ ಏನು?

ರಿಷಬ್‌ ಪೋಸ್ಟ್‌ನಲ್ಲಿ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಕ್ಕಾಗಿ ವಿಜಯ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮ ನಾಯಕತ್ವದಲ್ಲಿ ರಾಜ್ಯವು ಹೆಚ್ಚಿನ ಪ್ರಗತಿ ಸಾಧಿಸಲಿ ಮತ್ತು ಬಲವಾದ ಸಾರ್ವಜನಿಕ ಸೇವೆಯನ್ನು ಪಡೆಯಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Vijay: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ; ಮೊದಲ ಬಾರಿಗೆ ಫ್ಯಾನ್ಸ್‌ ಮುಂದೆ ಬಂದ ವಿಜಯ್‌!

ಶಿವಣ್ಣ ಟ್ವೀಟ್‌ನಲ್ಲಿ ,ಅರ್ಹವಾದ ಗೆಲುವು. ನಿಮ್ಮ ಮೇಲೆ ಕಟುವಾದ ಟೀಕೆಗಳು ಬಂದಾಗಲೂ ಮೌನವಾಗಿದ್ದು, ಕೆಲಸವೇ ಮಾತನಾಡಲಿ ಎಂದು ಬಿಡುವುದು ಅತಿದೊಡ್ಡ ವಿಜಯವಾಗಿದೆ. ಒಮ್ಮೆ ಮಾಧ್ಯಮಗಳ ಜೊತೆಗಿನ ಮಾತುಕತೆಯ ವೇಳೆ ನಾನು ತಮಾಷೆಯಾಗಿ ‘TVK ಎಂದರೆ ಟ್ರೈ ವಿಜಯ್ ಆಸ್ ಕಿಂಗ್’ (Try Vijay As King) ಎಂದು ಹೇಳಿದ್ದೆ. ಇಂದು ನೀವು ರಾಜನಂತೆ ಎತ್ತರವಾಗಿ ನಿಂತಿದ್ದೀರಿ’ ಎಂದು ಶಿವಣ್ಣ ಹೇಳಿದ್ದಾರೆ. ‘ತಮಿಳುನಾಡಿನ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಶಕ್ತಿ ನಿಮಗೆ ಸಿಗಲಿ ಮತ್ತು ರಾಜ್ಯವು ಅಭಿವೃದ್ಧಿಯತ್ತ ಸಾಗಲಿ’ ಎಂದು ಶಿವಣ್ಣ ಆಶಿಸಿದ್ದಾರೆ.



2026ರ ತಮಿಳುನಾಡು ಚುನಾವಣೆಯಲ್ಲಿ (Tamil Nadu election) ಅಚ್ಚರಿ ಮೂಡಿಸಿದ ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ (Viajay) ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮವು ಚೆನ್ನೈ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ. ಇದು ವಿಜಯ್ ಅವರ ಚಲನಚಿತ್ರ ಸಂಬಂಧಿತ ಸಮಾರಂಭ ನಡೆಯುತ್ತಿದ್ದ ಸ್ಥಳ. ಆದರೆ ಟಿವಿಕೆ ವಿಜಯ್ ಅವರ ಪ್ರಮಾಣವಚನ ಸಮಾರಂಭದ ಬಗ್ಗೆ ಔಪಚಾರಿಕ ಹೇಳಿಕೆ ನೀಡಿಲ್ಲ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗಳಿಸಿದ್ದು, 10 ಸ್ಥಾನಗಳ ಕೊರತೆಯಿದೆ. ಕಾಂಗ್ರೆಸ್ ವಿಜಯ್ ಅವರ ಪಕ್ಷದೊಂದಿಗೆ ಕೈಜೋಡಿಸಬಹುದು ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಡಿವೆ.



ಈ ಮಧ್ಯೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಒಂದು ದಿನದ ನಂತರ, ಟಿವಿಕೆ ಮುಖ್ಯಸ್ಥ ವಿಜಯ್ ಮೇ 5ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Amruthadhaare Serial: ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳೊಂದಿಗೆ ಜಯಗಳಿಸಿದ ನಂತರ ಪಕ್ಷದ ಶಾಸಕಾಂಗ ಕಾರ್ಯತಂತ್ರವನ್ನು ರೂಪಿಸುವಲ್ಲಿ ಈ ಸಭೆ ಮೊದಲ ಔಪಚಾರಿಕ ಹೆಜ್ಜೆ ಎನಿಸಿಕೊಂಡಿದೆ.

Yashaswi Devadiga

View all posts by this author