ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

Amruthadhaare Serial: ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.

ಜೈದೇವ್‌ ಬೀದಿ ಪಾಲು; ಪಾಪದ ಕೊಡ ತುಂಬಿ ಬದುಕಾಯಿತು ಮಣ್ಣು ಪಾಲು!

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga May 5, 2026 10:03 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada serial) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಅನ್ಯಾಯದ ಹಾದಿಯಲ್ಲಿ ಮೆರೆದ ಜೆಡಿ ಬೀದಿ ಪಾಲು ಆಗಿದ್ದಾನೆ. ಪಾಪದ ಕೊಡ ತುಂಬಿ ಬದುಕು ಮಣ್ಣು ಪಾಲು ಆಗಿದೆ. ಅತ್ತ ಗೌತಮ್‌ ದಿವಾನ್‌ (Gowtham diwan) ಕುಟುಂಬ ಮತ್ತೆ ತಮ್ಮ ಮನೆಗೆ ಮರಳಿ ಹೋಗುತ್ತಿದೆ.

ಜೈದೇವ್‌ ಈಗ ಬೀದಿ ಪಾಲು

ಜೈದೇವ್‌ ಕತೆ ಅದೋಗತಿ ಆಗಿದೆ. ಇದ್ದ ದಿಯಾ ಕೂಡ ಈಗ ಸಪೋರ್ಟ್‌ಗೆ ಇಲ್ಲವಾಗಿದ್ದಾಳೆ. ಬಂಗಾರ, ಹಣ ಎಲ್ಲವನ್ನೂ ದೋಚಿಕೊಂಡು ಬಂದು ಪಾರ್ಟಿ ಮಾಡಿದ್ದಾಳೆ. ಅಲ್ಲಿಗೆ ನೇರವಾಗಿ ಬಂದ ಜೈದೇವ್‌ನನ್ನು ಮನೆಯಿಂದ ಆಚೆ ಹಾಕಿದ್ದಾಳೆ. ಅದಕ್ಕೂ ಸುಮ್ಮನಾಗದ ಜೈದೇವ್‌ ಕಂಪೌಂಡ್‌ ಹಾರಿ ದಿಯಾ ಪಾರ್ಟಿ ಮಾಡುತ್ತಿರುವ ಜಾಗಕ್ಕೆ ಬಂದಿದ್ದಾನೆ.

ಇದನ್ನೂ ಓದಿ: Actress Rajini: 'ಅಮೃತವರ್ಷಿಣಿ' ರಜಿನಿ ವಿರುದ್ಧ ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ ಚಿತ್ರತಂಡ!

ಅಷ್ಟೇ ಅಲ್ಲ ದಿಯಾ ಕೂಡ ಕೂಗಾಡಿದ್ದಾಳೆ. ತನಗೂ ಜೈದೇವ್‌ ಸಂಬಂಧ ಇಲ್ಲ ಎಂದಿದ್ದಾಳೆ. ಒಟ್ಟಾರೆಯಾಗಿ ಜೈದೇವ್‌ ಈಗ ಬೀದಿ ಪಾಲಾಗಿದ್ದಾನೆ.

ಗೌತಮ್‌ ದಿವಾನ್‌ ಆಸ್ತಿ ಹರಾಜಿಗೆ ಬಂದಿತ್ತು. ಅಖಿಲಾಂಡೇಶ್ವರಿ ಸಹಾಯದಿಂದ ಗೌತಮ್‌ ಮತ್ತೆ ಆಸ್ತಿಯನ್ನು ಮರಳಿ ಪಡೆದಿದ್ದಾನೆ. ಗೌತಮ್‌ ದಿವಾನ್‌ ಈ ರೀತಿ ಆಸ್ತಿ ಖರೀದಿ ಮಾಡಿದ್ದು ಜಯದೇವ್‌ಗೆ ಆಶ್ಚರ್ಯ ಆಗಿದೆ. ಇಷ್ಟೆಲ್ಲ ಹಣವನ್ನು ಅವನು ಹೇಗೆ ತಂದನು ಎಂದು ಯೋಚನೆ ಮಾಡುತ್ತಿರುವಾಗಲೇ, ಗೌತಮ್‌ ದಿವಾನ್‌ ಅವನನ್ನು ಮನೆಯಿಂದ ಹೊರಗಡೆ ಹಾಕಿದ್ದಾನೆ.

ಗಾಬರಿ ಆಗಿದ್ದಾರೆ ಭೂಮಿಕಾ ಹಾಗೂ ಗೌತಮ್‌

ಗೌತಮ್‌ ಮನೆಯವರೆಲ್ಲರೂ ಈಗ ಒಳ್ಳೆಯ ದಿನ ನೋಡಿ ಮತ್ತೆ ಅದೇ ಮನೆಗೆ ಹೋಗುತ್ತಿದ್ದಾರೆ. ಶಾಸ್ತಿಗಳು ಬಂದಿದ್ದಾರೆ. ಆದರೆ ಒಂದು ಆಘಾತ ಕೊಡುವ ವಿಚಾರವನ್ನು ಭೂಮಿ ಮತ್ತು ಗೌತಮ್‌ ಮುಂದೆ ಹೇಳಿದ್ದಾರೆ. ನಿಮಗೆ ಜನಿಸಿದ ಹೆಣ್ಣು ಮಗುವಿನಿಂದ ನಿಮಗೆ ಕಂಟಕ ಇದೆ ಎಂದು ಜಾತಕದಲ್ಲಿ ಇದೆ. ನಿಮಗೆ ತುಂಬಾ ಹತ್ತಿರದಲ್ಲಿ ಇರೋರೆ ನಿಮಗೆ ಸಮಸ್ಯೆ ಕಾಡುವ ಸಂಭವ ಇದೆ. ಕೆಲವೊಂದಿಷ್ಟು ಹಾಗೇಯೇ ನಾವು ಮುಗಿದು ಹೋಯ್ತು ಅಂತ ಅಂದುಕೊಂಡಿರ್ತಿವಿ. ಆದರೆ ಮುಗಿದು ಹೋಗಲ್ಲ ಎಂದಿದ್ದಾರೆ. ಶಾಸ್ತ್ರಿಗಳ ಈ ಮಾತು ಕೇಳಿ ಗಾಬರಿ ಆಗಿದ್ದಾರೆ ಭೂಮಿಕಾ ಹಾಗೂ ಗೌತಮ್‌.

ಗೌತಮ್‌ ದಿವಾನ್‌ ಈಗ ಜಯದೇವ್‌ನನ್ನು ಮನೆಯಿಂದ ಹೊರಗಡೆ ಹಾಕಿದಮೇಲೂ ಕೂಡ ಅವನಿಗೆ ಬುದ್ಧಿಯೇ ಬಂದಿಲ್ಲ. ಇನ್ನೊಂದು ಕಡೆ ದಿಯಾ ಕೂಡ ಅವನಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾಳೆ. ಮುಂದೆ ಜಯದೇವ್‌, ಗೌತಮ್‌ ಕುಟುಂಬಕ್ಕೆ ತೊಂದರೆ ಕೊಡ್ತಾನಾ? ಅಥವಾ ಶಕುಂತಲಾ, ಜಯದೇವ್‌ ಆಡಿದ ಮತ್ತೆ ನಾಟಕ ಮಾಡಿದ್ರಾ ಅನ್ನೋ ಎಂಬ ಪ್ರಶ್ನೆ ವೀಕ್ಷರಲ್ಲಿ ಇದೆ.

ಇದನ್ನೂ ಓದಿ: Amruthadhaare Serial: ಎಲ್ಲ ಸರಿ ಹೋಗೋ ಹೊತ್ತಲ್ಲೇ ಗೌತಮ್‌ ದಿವಾನ್‌ಗೆ ಹೊಸ ಸಂಕಷ್ಟ; ಶಾಕ್‌ ಆದ್ಲು ಭೂಮಿಕಾ!

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.