ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Azad Bharath: ಹಿಂದಿ ಸಿನಿಮಾ ನಿರ್ದೇಶಿಸಿದ ಕನ್ನಡತಿ ರೂಪಾ ಅಯ್ಯರ್;‌ ಈ ಚಿತ್ರದ ಹಾಡಿಗೆ ಧ್ವನಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

Azad Bharath Hindi Movie: ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರು 'ಆಜಾದ್ ಭಾರತ್' ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ತೆರೆಗೆ ಬರಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿ ಕಥೆಯನ್ನು ಈ ಚಿತ್ರ ಹೊಂದಿದೆ.

ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ ಜೊತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವ ರೂಪಾ ಅಯ್ಯರ್‌ ಅವರು ಇದೀಗ ಹೊಸದೊಂದು ಸಿನಿಮಾದ ಮೂಲಕ ಹಾಜರಾಗಿದ್ದಾರೆ. ವಿಶೇಷವೆಂದರೆ, ಇದು ಕನ್ನಡ ಸಿನಿಮಾ ಅಲ್ಲ, ಬದಲಿಗೆ ಹಿಂದಿ ಸಿನಿಮಾ! ಹೌದು, ರೂಪಾ ಅಯ್ಯರ್‌ ಅವರು ʻಆಜಾದ್‌ ಭಾರತ್‌ʼ ಎಂಬ ಹಿಂದಿ ಸಿನಿಮಾವನ್ನು ನಿರ್ದೇಶಿಸಿದ್ದು, ಜನವರಿ 2ರಂದು ಆ ಸಿನಿಮಾ ತೆರೆಗೆ ಬರಲಿದೆ.

ಶೀರ್ಷಿಕೆ ಬದಲಾವಣೆ

ಆರಂಭದಲ್ಲಿ ಈ ಸಿನಿಮಾಕ್ಕೆ 'ನೀರಾ ಆರ್ಯ' ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಆ ಹೆಸರನ್ನು ಬದಲಾಯಿಸಿ, ʻಆಜಾದ್ ಭಾರತ್ʼ ಎಂದು ಶೀರ್ಷಿಕೆ ಬದಲಿಸಲಾಗಿದೆ. ಈ ಚಿತ್ರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಅರ್ಪಣೆ ಮಾಡಲಾಗಿದ್ದು, ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆಯನ್ನು 'ಆಜಾದ್ ಭಾರತ್' ಚಿತ್ರದಲ್ಲಿ ಹೇಳಲಾಗಿದೆಯಂತೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಬಣ್ಣ ಹಚ್ಚಿದ್ದಾರೆ.

Mohan Vishwa Column: ಸುಭಾಷ್‌ ಚಂದ್ರ ಸಂಗ್ರಹಿಸಿದ್ದ ಸಂಪತ್ತೇನಾಯಿತು ?

ನೀರಾ ಆರ್ಯ ಪಾತ್ರದಲ್ಲಿ ರೂಪಾ

"ನಮ್ಮ ಈ ಚಿತ್ರದಲ್ಲಿ ಮೂರು ಮುಖ್ಯ ಪಾತ್ರಗಳಿದ್ದು, ನೀರಾ ಆರ್ಯ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ದುರ್ಗಾ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ನಟಿಸಿದ್ದಾರೆ. ಸರಸ್ವತಿ ರಾಜಾಮಣಿ ಎಂಬ ಪಾತ್ರದಲ್ಲಿ ಜನಪ್ರಿಯ ನಟಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುರೇಶ್ ಒಬೆರಾಯ್, ಬಿರಾದಾರ್, ಸುಚೇಂದ್ರ ಪ್ರಸಾದ್, ಜೀ ವಾಹಿನಿಯ ಮುಖ್ಯಸ್ಥರಾದ ಸುಭಾಷ್ ಚಂದ್ರ ಮುಂತಾದವರು ಆಜಾದ್‌ ಭಾರತ್‌ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ನನ್ನ ಪತಿ ಗೌತಮ್ ಶ್ರೀವತ್ಸ ನೀಡಿದ್ದಾರೆ. ಶ್ರಿ ಕ್ರೇಜಿ ಮೈಂಡ್ಸ್ ಅವರ ಸಂಕಲನವಿರುವ ಈ ಚಿತ್ರವನ್ನು ನಾನು, ಜಯಗೋಪಾಲ್ ಹಾಗೂ ರಾಜೇಂದ್ರ ರಾಜನ್ ನಿರ್ಮಿಸಿದ್ದೇವೆ" ಎಂದು ಹೇಳುತ್ತಾರೆ ರೂಪಾ ಅಯ್ಯರ್.

ನೇತಾಜಿ ಫ್ಯಾಮಿಲಿಯನ್ನು ಭೇಟಿಯಾಗಿದ್ದೇನೆ

"ಪ್ರತಿ ವರ್ಷ ಜನವರಿ ತಿಂಗಳನ್ನು ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಮಾಸ ಎಂದು ಆಚರಿಸಲಾಗುತ್ತದೆ. ಹಾಗಾಗಿ ಜನವರಿ 2ರಂದು ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಈ ಚಿತ್ರವನ್ನು ನಿರ್ಮಾಣ ಮಾಡುವ ಮೊದಲು ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದವರನ್ನು ಸಂಪರ್ಕ ಮಾಡಿ ಅನೇಕ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಚಿತ್ರ ತೋರಿಸುವ ಆಲೋಚನೆ ಇದೆ. 2026ರ ಜನವರಿ 2 ರಂದು ಜೀ ಸ್ಟುಡಿಯೋಸ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ‌" ಎಂದು ರೂಪಾ ಅಯ್ಯರ್ ಹೇಳುತ್ತಾರೆ.

ದೇಶಪ್ರೇಮ ಸಾರುವ ಚಿತ್ರದಲ್ಲಿ ನಟಿಸಿದ್ದು ಖುಷಿ

"ರೂಪಾ ಅಯ್ಯರ್ ಅವರು ಒಂದು ಕಾಲದ ಹೇಳದೇ ಹೋದ ಘಟನೆಗಳನ್ನು ತೆರೆಯ ಮೇಲೆ ಹೇಳಲು ಹೊರಟ್ಟಿದ್ದಾರೆ. ಇದಕ್ಕಾಗಿ ಬಹಳ ವರ್ಷಗಳ ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಅವರ ರಾಷ್ಟ್ರಪ್ರೇಮ. ಎಲ್ಲರೂ ಈ ಚಿತ್ರ ನೋಡಿ" ಎಂದು ಸುಚೇಂದ್ರ ಪ್ರಸಾದ್ ಹೇಳಿದರೆ, "ಇಂತಹ ದೇಶಪ್ರೇಮ ಸಾರುವ ಚಿತ್ರದಲ್ಲಿ ದುರ್ಗಾ ಪಾತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ" ಅಂತಾರೆ ನಟಿ ಹಿತಾ ಚಂದ್ರಶೇಖರ್.

ಸಾಂಗ್‌ಗೆ ಧ್ವನಿಯಾದ ಸಿಎಂ ಪತ್ನಿ

ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಒಂದು ಹಾಡನ್ನು ಹಾಡಿದ್ದಾರೆ. ಬಾಲಿವುಡ್‌ನ ಯಶ್ ರಾಜ್ ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಕೆಲಸ ಮಾಡಿರುವುದು ವಿಶೇಷ.