ನಟಿ ರುಕ್ಮಿಣಿ ವಸಂತ್ (rukmini vasanth) ಫೇಕ್ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇನ್‌ಸ್ಟಾಗ್ರಾಮ್ ಮಾತ್ರವಲ್ಲ, ಟ್ವಿಟರ್‌ನಲ್ಲಿ ಕೂಡ ಈಗ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಬಹುತೇಕ ಎಲ್ಲಾ ಜನಪ್ರಿಯ ನಟಿಯರ AI ಜನರೇಟೆಡ್ ಫೋಟೊ, ವೀಡಿಯೋಗಳು ಇನ್‌ಸ್ಟಾಗ್ರಾಮ್‌ನಲ್ಲಿದೆ. ಸಿನಿಮಾ (Cinema Shooting) ಚಿತ್ರೀಕರಣಕ್ಕಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಹರಿದಾಡ್ತಿದೆ.
ರುಕ್ಮಿಣಿಗೆ ಸಂಕಷ್ಟ
ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದರಲ್ಲಿ ಇದೆ.
ಇದನ್ನೂ ಓದಿ: Tumbadchi Manjula Trailer: ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹೇಗಿದೆ ಟ್ರೈಲರ್?
ಅಕ್ಕಪಕ್ಕದಲ್ಲಿ ಕ್ಯಾಮೆರಾಮ್ಯಾನ್ಗಳು ಕೂಡ ಇದ್ದಾರೆ ಲವರು ಇದು AI ಫೋಟೋ, ವೀಡಿಯೋ ಎಂದು ವಾಸ್ತವ ಸಂಗತಿ ತಿಳಿಸುತ್ತಿದ್ದಾರೆ. ಈ ಅವತಾರದಲ್ಲಿ ರುಕ್ಮಿಣಿ ನಟಿಸಲ್ಲ ಬಿಡಿ ಎನ್ನುತ್ತಿದ್ದಾರೆ. ಆದರೆ ಕಿಡಿಗೇಡಿಗಳ ಉಪಟಳದಿಂದ ಆಕೆಗೆ ಸಂಕಷ್ಟ ಎದುರಾಗಿದೆ.
ಮ್ಯಾಗಜಿನ್ ಫೋಟೋಶೂಟ್ ಸಲುವಾಗಿ ರುಕ್ಮಿಣಿ ವಸಂತ್ ಅವರು ಈ ರೀತಿ ಬೋಲ್ಡ್ ಆಗಿ ಪೋಸ್ ನೀಡಿರಬಹುದಾ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಕೂಡ ರುಕ್ಮಿಣಿ ವಸಂತ್ ಅವರು ಇನ್ನೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಬಹುನಿರೀಕ್ಷಿತ ಪ್ರಾಜೆಕ್ಟ್ಗಳಿವೆ. ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಪ್ರಶಾಂತ್ ನೀಲ್, ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ‘ಡ್ರ್ಯಾಗನ್’ ಸಿನಿಮಾಗೂ ರುಕ್ಮಿಣಿ ವಸಂತ್ ಅವರು ನಾಯಕಿ ಆಗಿದ್ದಾರೆ.
ಇದನ್ನೂ ಓದಿ: Aishwarya Rai: ಮಗಳು ಆರಾಧ್ಯ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವರ್ಯಾ ರೈ!
7 ವರ್ಷಗಳ ಹಿಂದೆ 'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ಚಂದನವನ ಪ್ರವೇಶಿಸಿದ್ದರು. 'ಬಘೀರ', 'ಭೈರತಿ ರಣಗಲ್' ಸಿನಿಮಾಗಳು ಹಿಟ್ ಆಗಿತ್ತು. 'ಅಪುಡೊ ಇಪುಡೊ ಎಪುಡೊ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. 'ಏಸ್' ಹಾಗೂ 'ಮದರಾಸಿ' ಎಂಬ ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.