ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರುಕ್ಮಿಣಿ ವಸಂತ್‌ ನಟಿಸ್ತಾರಾ? ಸಾಯಿ ಪಲ್ಲವಿಗೆ ಕೋಕ್‌ ನೀಡಿತೇ ಚಿತ್ರತಂಡ?

ಸಂಗೀತ ಲೋಕದ ದಂತಕಥೆ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಿಂದ ಸಾಯಿ ಪಲ್ಲವಿ ಅವರನ್ನು ಕೈಬಿಟ್ಟು ರುಕ್ಮಿಣಿ ವಸಂತ್‌ಗೆ ಚಾನ್ಸ್‌ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಗೌತಮ್ ತಿನ್ನನೂರಿ ಹಾಗೂ ಗೀತಾ ಆರ್ಟ್ಸ್ ನಿರ್ಮಾಣದ ಈ ಚಿತ್ರಕ್ಕೆ ಅಕ್ಟೋಬರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಮಧ್ಯೆ ನಾಯಕಿ ಬದಲಾವಣೆ ಸುದ್ದಿ ವೈರಲ್‌ ಆಗಿದೆ.

MS Subbulakshmi ಬಯೋಪಿಕ್‌ನಲ್ಲಿ ಸಾಯಿ ಪಲ್ಲವಿ ಬದಲು ರುಕ್ಮಿಣಿಗೆ ಚಾನ್ಸ್?

-

Avinash GR
Avinash GR Apr 26, 2026 4:05 PM

ಭಾರತೀಯ ಸಂಗೀತ ಲೋಕದ ದಂತಕಥೆ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾವು ಚಿತ್ರೀಕರಣ ಆರಂಭಿಸುವ ಮೊದಲೇ ಸಾಕಷ್ಟು ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಲಿದ್ದಾರೆ ಎಂದು ಬಹಳ ಹಿಂದೆಯೇ ಹೇಳಲಾಗಿತ್ತು. ತೆಲುಗಿನ 'ಜೆರ್ಸಿ' ಸಿನಿಮಾ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಈ ಮಧ್ಯೆ ಒಂದು ಅಚ್ಚರಿ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಸಾಯಿ ಪಲ್ಲವಿ ಜಾಗಕ್ಕೆ ರುಕ್ಮಿಣಿ ವಸಂತ್?

ಹೌದು, ಎಂ ಎಸ್‌ ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ ಕುರಿತಂತೆ ಪೂರ್ವಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಸಾಯಿ ಪಲ್ಲವಿ ಕೂಡ ಈ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಾಯಿ ಪಲ್ಲವಿ ಈಗ ಹಿಂದಿ ಮತ್ತು ದಕ್ಷಿಣ ಭಾರತದ ಇತರ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ ಶುರುವಾಗೋದು ವಿಳಂಬವಾಗುತ್ತಿದೆ. ಹಾಗಾಗಿ, ಸಾಯಿ ಪಲ್ಲವಿ ಜಾಗಕ್ಕೆ ನಟಿ ರುಕ್ಮಿಣಿ ವಸಂತ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎಂಬ ವದಂತಿಗಳು ಕೇಳಿಬಂದಿವೆ. ಹಾಗಾದರೆ, ರುಕ್ಮಿಣಿ ಸೆಲೆಕ್ಟ್‌ ಆಗಿರೋದು ನಿಜವೇ?

ʻಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆʼ ಎಂದ ರಣಬೀರ್;‌ ʻರಾವಣʼ ಯಶ್‌ ಬಗ್ಗೆ ಕಪೂರ್‌ ಕುಡಿ ಹೇಳಿದ್ದೇನು?

ನಿರ್ಮಾಣ ತಂಡದಿಂದ ಬಂದ ಸ್ಪಷ್ಟನೆ ಏನು?

ಸಾಯಿ ಪಲ್ಲವಿ ಅವರ ಬದಲು ರುಕ್ಮಿಣಿ ವಸಂತ್‌ಗೆ ಚಿತ್ರತಂಡ ಮಣೆ ಹಾಕಿದೆ ಎಂಬ ವಿಚಾರದಲ್ಲಿ ಸತ್ಯಾಂಶವಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ, ಈ ವದಂತಿಗಳನ್ನು ತಳ್ಳಿಹಾಕಿದೆ. "ಸಾಯಿ ಪಲ್ಲವಿ ಅವರೇ ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ಗೆ ಫೈನಲ್‌ ಆಯ್ಕ ಆಗಿದ್ದು, ತಾರಾಗಣದಲ್ಲಿ ಯಾವುದೇ ಬದಲಾವಣೆ ಇಲ್ಲ" ಎಂದು ನಿರ್ಮಾಪಕರು ಹೇಳಿದ್ದಾರೆ. ರುಕ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿದ್ದಾರೆ. ಆ ಕಾರಣಕ್ಕಾಗಿಯೇ ಸಾಯಿ ಪಲ್ಲವಿ ಬದಲಿಗೆ ರುಕ್ಮಿಣಿ ಹೆಸರು ಕೇಳಿಬಂದಾಗ ಈ ಸುದ್ದಿ ಎಲ್ಲರ ಗಮನ ಸೆಳೆದಿತ್ತು. ಆದರೆ ಈಗ ಅದು ಸುಳ್ಳೆಂದು ಗೊತ್ತಾಗಿದೆ.

ʻಲೆಜೆಂಡರಿʼ ಮಣಿರತ್ನಂ ಜೊತೆ ಕೈಜೋಡಿಸಿದ ನಟ ವಿಜಯ್‌ ಸೇತುಪತಿ; ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ ಯಾವಾಗ ಶುರು?

ಸಾಯಿ ಪಲ್ಲವಿ ಅವರು 'ರಾಮಾಯಣ' ಸರಣಿ ಮತ್ತು ಮಣಿರತ್ನಂ ಅವರ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಎಂ. ಎಸ್. ಸುಬ್ಬುಲಕ್ಷ್ಮಿ ಚಿತ್ರ ತಡವಾಗಿದೆ ಎಂದು ತಂಡ ತಿಳಿಸಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದ್ದು, ಒಂದೇ ಶೆಡ್ಯೂಲ್‌ನಲ್ಲಿ ಶೂಟಿಂಗ್‌ ಮುಗಿಸುವ ಪ್ಲ್ಯಾನ್‌ ಇದೆ. ಗೀತಾ ಆರ್ಟ್ಸ್ ಈ ಬಯೋಪಿಕ್ ಅನ್ನು ನಿರ್ಮಿಸುತ್ತಿದೆ.