Toxic Movie Teaser: `ಟಾಕ್ಸಿಕ್' ಟೀಸರ್ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್ ಫುಲ್ ಟೆನ್ಷನ್!
Rukmini Vasanth: ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ. ನೆಟ್ಟಿಗರು ಹಸಿಬಿಸಿ ದೃಶ್ಯಗಳಲ್ಲಿ ಇರೋ ನಾಯಕಿ ಯಾರು ಅಂತ ಹುಡುಕುವುದಕ್ಕೆ ಮುಂದಾಗಿದ್ದಾರೆ.
ರುಕ್ಮಿಣಿ ವಸಂತ್ -
(ಫೆ.20) ‘ಟಾಕ್ಸಿಕ್’ ಟೀಸರ್ (Toxic Teaser) ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ (Yash) ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟೀಸರ್ (Teaser) ಬಗ್ಗೆನೇ ಚರ್ಚೆಯಾಗುತ್ತಿದೆ. ನೆಟ್ಟಿಗರು ಹಸಿಬಿಸಿ ದೃಶ್ಯಗಳಲ್ಲಿ ಇರೋ ನಾಯಕಿ ಯಾರು ಅಂತ ಹುಡುಕುವುದಕ್ಕೆ ಮುಂದಾಗಿದ್ದಾರೆ. ರುಕ್ಮಿಣಿ ವಸಂತ್ (rukmini vasanth) ಅಭಿಮಾನಿಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಗಾಬರಿ ಕೂಡ ಆಗಿದ್ದಾರೆ. ಅದೇಕೆ?
ಬೋಲ್ಡ್ ದೃಶ್ಯದ ಬಗ್ಗೆ ಸಖತ್ ಚರ್ಚೆ
ಟಾಕ್ಸಿಕ್ ಟೀಸರ್‌ನಲ್ಲಿರೋ ಬೋಲ್ಡ್ ದೃಶ್ಯದ ಬಗ್ಗೆ ಸಖತ್ ಚರ್ಚೆಗಳು ಆಗುತ್ತಿವೆ. ‘ಟಾಕ್ಸಿಕ್’ ಟೀಸರ್ನಲ್ಲಿ ಒಂದು ಹಸಿಬಿಸಿ ದೃಶ್ಯ ಕಾಣಿಸಿದೆ. ಆದರೆ ಆ ದೃಶ್ಯದಲ್ಲಿ ಇರುವ ನಟಿ ಯಾರು ಎಂಬುದು ಸ್ಪಷ್ಟವಾಗಿಲ್ಲ. 'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ. ಟೀಸರ್ ರಿಲೀಸ್ ಆದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಸೀನ್‌ನಲ್ಲಿ ಇರುವ ನಟಿ ರುಕ್ಮಿಣಿ ವಸಂತ್ ಅಂತಲೇ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Cocktail 2: ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ
'ಸಪ್ತ ಸಾಗರದಾಚೆ ಎಲ್ಲೋ', 'ಕಾಂತಾರ ಚಾಪ್ಟರ್ 1'ನಂತಹ ಸಿನಿಮಾಗಳಲ್ಲಿ ನಟಿಸಿರುವ ನಟಿಯ ಫ್ಯಾನ್ಸ್ ಫಿದಾ ಆಗಿರುವುದು ಅವರ ಟ್ರೆಡಿಷನಲ್ ಲುಕ್ ಗಾಗಿ. ಹೀಗಾಗಿ ಬೋಲ್ಡ್ ಸೀನ್‌ಗಳಲ್ಲಿ ಅವರನ್ನು ನೋಡುವುದಕ್ಕೆ ಕಷ್ಟ ಅಂತ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ನಲ್ಲಿ ಯಾವುದೇ ನಟಿಯ ಮುಖ ಸ್ಪಷ್ಟವಾಗಿ ಕಾಣಿಸಿಲ್ಲ. ರಕ್ಮಿಣಿ ವಸಂತ್ ಮಾತ್ರವಲ್ಲದೇ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ನಟಿಯರು ಅಭಿನಯಿಸಿದ್ದಾರೆ.
Introducing Rukmini Vasanth @rukminitweets as MELLISA in - A Toxic Fairy Tale For Grown-Ups#TOXIC #TOXICTheMovie #Nayanthara @humasqureshi @advani_kiara #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere #SandeepSadashiva… pic.twitter.com/Fo0RWTtdzF
— Isha singh (@ishasingh0987) February 20, 2026
'ರಾಯ' ಎಂಬ ಪಾತ್ರದಲ್ಲಿ ಯಶ್
ಇದಕ್ಕೂ ಮುಂಚೆ ಪೋಸ್ಟರ್ ಔಟ್ ಆಗಿತ್ತು. ಯಶ್ ಅವರು ಟಾಕ್ಸಿಕ್‌ನಲ್ಲಿ 'ರಾಯ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಕ್ತಸಿಕ್ತ ಹಿಮಪಾತದ ನಡುವೆ ನಿಂತಿರುವ ಅವರ ಅವತಾರ ನಡುಕ ಹುಟ್ಟಿಸುವಂತಿತ್ತು. ಮದ್ಯದ ಬಾಟಲಿ ಹಿಡಿದು ನಿಂತಿರುವ ಯಶ್ ಸುತ್ತಲೂ ಭೀಕರ ಹಿಂಸಾಚಾರದ ಕುರುಹುಗಳು ಎದ್ದು ಕಾಣುತ್ತಿದ್ದು, ಚಿತ್ರವು ಕರಾಳ ಹಿಂಸೆ ಮತ್ತು ನೈತಿಕ ಸಂಘರ್ಷದ ಕಥೆಯನ್ನು ಒಳಗೊಂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಅದೇ ರೀತಿ ಇದೆ ಟೀಸರ್. ಹಾಲಿವುಡ್ ರೇಂಜ್‌ಗೆ ರಕ್ತಸಿಕ್ತವಾಗಿ ಭಯ ಹುಟ್ಟಿಸುವಂತಿದೆ.
ಇದನ್ನೂ ಓದಿ: Actor Yash: ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್ ಸೂಕ್ತ ಆಯ್ಕೆಯಂತೆ!
'ಟಾಕ್ಸಿಕ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಕಾಣಲಿದೆ.