ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ ; ಶಾಕಿಂಗ್‌ ವಿಚಾರ ರಿವೀಲ್‌!

Rukmini Vasanth: ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.

ರುಕ್ಮಿಣಿ ವಸಂತ್‌

ಕಾಂತರ ಸಿನಿಮಾ ನಟಿ ರುಕ್ಮಿಣಿ ವಸಂತ್ (Rukmini Vasanth) ಬಿಕಿನಿ ಫೋಟೋ ವೈರಲ್ ಪ್ರಕರಣದ ತನಿಖೆಯನ್ನ ಸೈಬರ್ ಕ್ರೈಂ ಪೊಲೀಸರು (Cyber Crime Police) ಚುರುಕುಗೊಳಿಸಿದ್ದಾರೆ. ತಮ್ಮ ಅಶ್ಲೀಲ ವಿಡಿಯೋ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಫೇಸ್‌ಬುಕ್ ಖಾತೆಗಳ (Facebook) ಬಗ್ಗೆ ನಟಿ ದೂರಿನಲ್ಲಿ ಉಲ್ಲೇಖಿಸಿದ್ದರು. ಬಹುತೇಕರು ಹೊರ ರಾಜ್ಯದವರು ಎಂಬ ಸಂಗತಿ ಸಿಸಿಬಿ ಸೈಬರ್ (Cyber Crime) ಕ್ರೈಂ ಠಾಣೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಡೀಪ್ ಫೇಕ್ ವಿಡಿಯೋ ವೈರಲ್

ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.
ಇದನ್ನೂ ಓದಿ: Amruthadhaare Serial: ಕೇಡಿ ಜೈದೇವ್‌ ಮುಖವಾಡ ಕಳಚಿ ಬೀಳೋ ಹೊತ್ತು ಬಂದಾಯ್ತು!

ಖಾತೆಗಳ ವಿವರ ಕಲೆ ಹಾಕಿದಾಗ ಅವರೆಲ್ಲ ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿ ಹೊರ ರಾಜ್ಯದ ವ್ಯಕ್ತಿಗಳು ಎಂಬುದು ಗೊತ್ತಾಯಿತು. ಪ್ರಕರಣ ದಾಖಲಾದ ಬಳಿಕ ಖಾತೆ ಬಂದ್ ಮಾಡಿದ್ದಾರೆ. ಈ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಂದು ವರದಿಯಾಗಿದೆ.

ಎಐ ತಂತ್ರಜ್ಞಾನ ಬಳಸಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋಗಳನ್ನ ಎಡಿಟ್ ಮಾಡಿ ವಿವಿಧ ಅಕೌಂಟ್‌ಗಳಿಂದ ವೈರಲ್ ಮಾಡಲಾಗುತ್ತಿತ್ತು. ಸಾಮಾಜಿಕ ಜಾಲಾತಾಣದಲ್ಲಿ ನನ್ನ ಬಿಕಿನಿ ಫೋಟೋಗಳನ್ನ ಹಾಕಿ ತೆಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ನಟಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ: Alia Bhatt: ʻಆಲ್ಫಾʼ ಟೀಸರ್ ಬಿಡುಗಡೆ; ಆಲಿಯಾ ಭಟ್ ಬಗ್ಗೆ ಅಮಿತಾಭ್‌ ಮೆಚ್ಚುಗೆ

ಅದಕ್ಕೂ ಮೊದಲು ವೈರಲ್ ಫೋಟೋಸ್‌ಗಳ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ನಟಿ ವೈರಲ್ ಫೋಟೋ ಅಸಲಿಯೋ ಎಐ ಜನರೇಟೆಡೋ ಅನ್ನೋದನ್ನ ಖಾತರಿ ಪಡಿಸಿಕೊಳ್ಳಲಾಗಿದೆ.

Yashaswi Devadiga

View all posts by this author