ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rukmini Vasanth: ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವಿಚಾರ; ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲು

Rukmini Vasanth: ನಟಿ ರುಕ್ಮಿಣಿ ವಸಂತ್‌ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. AI ತಂತ್ರಜ್ಞಾನ ಬಳಸಿ ಅಶ್ಲೀಲ ಪೋಟೊ ಸೃಷ್ಟಿ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ (Deep Fake) ಬಳಸಿ ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖ ಅಳವಡಿಕೆ ಮಾಡಲಾಗಿದೆ. ವಿಡಿಯೋ ಮತ್ತು ಪೋಟೊ ಕ್ರಿಯೆಟ್ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಬಿಕಿನಿ ಫೋಟೋ ವಿಚಾರ; ಕೇಸ್ ದಾಖಲಿಸಿದ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್‌ -

Yashaswi Devadiga
Yashaswi Devadiga Jun 2, 2026 10:04 AM

ನಟಿ ರುಕ್ಮಿಣಿ ವಸಂತ್‌ (Rukmini Vasanth) ಅವರು ಸಿನಿಮಾ ಒಂದರ ಚಿತ್ರೀಕರಣಕ್ಕೆ ಬಿಕಿನಿ (Bikini) ಧರಿಸಿದ್ದಾರೆ ಎನ್ನಲಾದ ಫೇಕ್ ವಿಡಿಯೋ ವೈರಲ್‌ ಆಗಿತ್ತು. ಈಗ ನಟಿ ರುಕ್ಮಿಣಿ ವಸಂತ್‌ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. AI ತಂತ್ರಜ್ಞಾನ ಬಳಸಿ ಅಶ್ಲೀಲ ಪೋಟೊ ಸೃಷ್ಟಿ ಮಾಡಲಾಗಿದೆ. ಡೀಪ್‌ಫೇಕ್ ತಂತ್ರಜ್ಞಾನ (Deep Fake) ಬಳಸಿ ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖ ಅಳವಡಿಕೆ ಮಾಡಲಾಗಿದೆ. ವಿಡಿಯೋ ಮತ್ತು ಪೋಟೊ ಕ್ರಿಯೆಟ್ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಪ್ರಕರಣ ದಾಖಲು

ರುಕ್ಮಿಣಿ ವಸಂತ್‌ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಎಐ (AI) ತಂತ್ರಜ್ಞಾನ ಬಳಸಿ ನನ್ನ ಫೋಟೋವನ್ನು ಬಿಕಿನಿ ರೀತಿ ಸೃಷ್ಟಿ ಮಾಡಿದ್ದಾರೆ. ಡೀಪ್‌ಫೇಕ್ (Deepfake) ತಂತ್ರಜ್ಞಾನ ಬಳಸಿ ಬೇರೆಯೊಬ್ಬರ ದೇಹಕ್ಕೆ ನನ್ನ ಮುಖವನ್ನು ಬಳಸಿದ್ದಾರೆ. ಈ ರೀತಿ ನಕಲಿ ವಿಡಿಯೋ ಮತ್ತು ಪೊಟೊವನ್ನು ಸೃಷ್ಟಿ ಮಾಡಿದ್ದಾರೆ.

ಇದನ್ನೂ ಓದಿ: CM Vijay : MGR ಕೂಡ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ! ಸಿಎಂ ವಿಜಯ್ ನೇರ ಹೇಳಿಕೆ

ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದರು.29 ಸಾಮಾಜಿಕ ಸೋಶಿಯಲ್‌ ಮೀಡಿಯಾ ಅಕೌಂಟ್ ವಿರುದ್ಧ ದೂರು ನೀಡಿದ್ದರು. 9 ಇನ್ಸ್ಟಾಗ್ರಾಂ ಅಕೌಂಟ್ , 14 ಎಕ್ಸ್‌ ಖಾತೆ, 6 ಫೇಸ್ ಬುಕ್ ಅಕೌಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿತ್ತು. ಇದೀಗ ಐಟಿ ಕಾಯ್ದೆ ಹಾಗೂ ಬಿಎನ್‌ಎಸ್‌ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋ, ವೀಡಿಯೋಸ್ ಗಳು ವೈರಲ್ ಆಗಿತ್ತು. ಸಿನಿಮಾ ಶೂಟಿಂಗ್ ಗಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿಕೊಂಡು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆಗಲು ಶುರುವಾಗಿತ್ತು.

ಇದನ್ನೂ ಓದಿ: Ravi Mohan: ಹೇಳಿದ್ದೇ ಒಂದು, ಮಾಡಿದ್ದೇ ಇನ್ನೊಂದು! ಉಲ್ಟಾ ಹೊಡೆದ ನಟ ಜಯಂ ರವಿ

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಈಗಾಗಲೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಎಐಯನ್ನು ಒಳ್ಳೆಯ ಉದ್ದೇಶಕ್ಕೆ ಬಳಸಬೇಕೇ ಹೊರತು ಕೆಟ್ಟ ಕೆಲಸಗಳಿಗೆ ಅಲ್ಲ. ವಲ ನಟಿಯರಷ್ಟೇ ಅಲ್ಲ ಬೇರೆ ಹೆಣ್ಣು ಮಕ್ಕಳಿಗೂ ಸಹ ಇದರಿಂದ ಸಮಸ್ಯೆ ಆಗುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ತಿಳಿಸಿದ್ದರು.