ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rukmini Vasanth: ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!

Rukmini Vasanth: ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್​ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದರಲ್ಲಿ ಇದೆ.ಇದರ ಹಿಂದಿನ ಸತ್ಯಾಂಶ ಕೊನೆಗೂ ಹೊರಬಿದ್ದಿದೆ. ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಕಿನಿ ವಿಡಿಯೋಗೆ ಕೊನೆಗೂ ಸ್ಪಷ್ಟನೆ ಕೊಟ್ಟ ರುಕ್ಮಿಣಿ ವಸಂತ್!

ರುಕ್ಮಿಣಿ ವಸಂತ್‌ -

Yashaswi Devadiga
Yashaswi Devadiga May 23, 2026 1:09 PM

ರುಕ್ಮಿಣಿ ವಸಂತ್ (Rukmini Vasanth) ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್​ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ (Photo) ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ . ಇದರ ಹಿಂದಿನ ಸತ್ಯಾಂಶ ಕೊನೆಗೂ ಹೊರಬಿದ್ದಿದೆ. ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸೈಬರ್ ಕಿಡಿಗೇಡಿಗಳ ಕಾಟಕ್ಕೆ ಬೇಸತ್ತ ರುಕ್ಮಿಣಿ, ಫೇಕ್ ಕಂಟೆಂಟ್ ಕ್ರಿಯೇಟರ್ಸ್ ವಿರುದ್ಧ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದು, ಕಾನೂನು ಕ್ರಮ ಈಗಾಗಲೇ ಆರಂಭವಾಗಿದೆ. “ಇದು ಬೇಜವಾಬ್ದಾರಿತನದ ಪರಮಾವಧಿ. ಇಂತಹ ನಕಲಿ ಕಂಟೆಂಟ್ ಸೃಷ್ಟಿಸುವವರಿಗೂ, ಅದನ್ನು ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ” ಎಂದು ನಟಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Aishwarya Rai: ಮಗಳು ಆರಾಧ್ಯ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವರ್ಯಾ ರೈ!

ಈ ಬಗ್ಗೆ ನಟಿ ಪೋಸ್ಟ್‌ ಮಾಡಿ, ‘ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳು ಸಂಪೂರ್ಣವಾಗಿ ನಕಲಿ ಮತ್ತು ಸೃಷ್ಟಿಸಲ್ಪಟ್ಟವುಗಳಾಗಿವೆ’ ಇದು ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನನ್ನ ಮುಖವನ್ನು ಬೇರೊಬ್ಬರ ದೇಹಕ್ಕೆ ಜೋಡಿಸಿ ಸೃಷ್ಟಿಸಿರುವ ಪಿತೂರಿಯಾಗಿದೆ.

ಇಂತಹ ಕೃತ್ಯಗಳು ಒಬ್ಬ ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತವೆ ಎಂದು ಬೇಸರ ವ್ಯಕ್ತಪಡಿಸಿರುವ ರುಕ್ಮಿಣಿ, ಸುಳ್ಳು ಫೋಟೋಗಳನ್ನು ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ ಅಭಿಮಾನಿಗಳು ಮತ್ತು ಸಾರ್ವಜನಿಕರು ಇಂತಹ ಯಾವುದೇ ನಕಲಿ ವಿಡಿಯೋಗಳನ್ನು ನಂಬಬಾರದು ಮತ್ತು ಅದನ್ನು ಶೇರ್ ಮಾಡಬಾರದು ಎಂದು ಬರೆದುಕೊಂಡಿದ್ದಾರೆ.

Rukmini Vasanth

ಸಿನಿಮಾ ವಿಚಾರಕ್ಕೆ ಬರುವುದಾದರೆ, ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಿವೆ. ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಪ್ರಶಾಂತ್ ನೀಲ್, ಜೂನಿಯರ್ ಎನ್​ಟಿಆರ್ ಕಾಂಬಿನೇಷನ್​ನ ‘ಡ್ರ್ಯಾಗನ್’ ಸಿನಿಮಾಗೂ ರುಕ್ಮಿಣಿ ವಸಂತ್ ಅವರು ನಾಯಕಿ ಆಗಿದ್ದಾರೆ.

ಇದನ್ನೂ ಓದಿ: Tumbadchi Manjula Trailer: ಮರಾಠಿಗೆ ‘ಸು ಫ್ರಮ್ ಸೋ’ ರಿಮೇಕ್; ಹೇಗಿದೆ ಟ್ರೈಲರ್‌?

7 ವರ್ಷಗಳ ಹಿಂದೆ 'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ಚಂದನವನ ಪ್ರವೇಶಿಸಿದ್ದರು. 'ಬಘೀರ', 'ಭೈರತಿ ರಣಗಲ್' ಸಿನಿಮಾಗಳು ಹಿಟ್ ಆಗಿತ್ತು. 'ಅಪುಡೊ ಇಪುಡೊ ಎಪುಡೊ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. 'ಏಸ್' ಹಾಗೂ 'ಮದರಾಸಿ' ಎಂಬ ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.