ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

6 ತಿಂಗಳ ಹಿಂದಷ್ಟೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದ ಎಸ್‌. ಜಾನಕಿ; ಇಳಿವಯಸ್ಸಿನಲ್ಲಿ ಕಾಡಿತೇ ಪುತ್ರಶೋಕ?

ದಕ್ಷಿಣ ಭಾರತದ ಹೆಮ್ಮೆಯ ಹಿರಿಯ ಹಿನ್ನೆಲೆ ಗಾಯಕಿ, ಸ್ವರ ಸಾಮ್ರಾಜ್ಞಿ ಎಸ್. ಜಾನಕಿ (88) ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದರು ಜಾನಕಮ್ಮ.

ಇಳಿವಯಸ್ಸಿನಲ್ಲಿ ಜಾನಕಮ್ಮಗೆ ಕಾಡಿತೇ ಪುತ್ರಶೋಕ? 6 ತಿಂಗಳ ಹಿಂದೆ ಮಗನ ಸಾವು!

-

Avinash GR
Avinash GR Jul 11, 2026 9:21 PM

ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ, ಸ್ವರ ಸಾಮ್ರಾಜ್ಞಿ ಎಂದೇ ಖ್ಯಾತರಾಗಿದ್ದ ಹಿರಿಯ ಹಿನ್ನೆಲೆ ಗಾಯಕಿ ಎಸ್‌. ಜಾನಕಿ (88) ಅವರು ಇಂದು (ಜುಲೈ 11) ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಏರುಪೇರಿನಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಚಿರನಿದ್ರೆಗೆ ಜಾರಿದ್ದಾರೆ.

ಕಳೆದ ಆರು ತಿಂಗಳ ಹಿಂದಷ್ಟೇ (ಜನವರಿಯಲ್ಲಿ) ಜಾನಕಿ ಅವರು ತಮ್ಮ ಇದ್ದೊಬ್ಬ ಮಗ ಮುರಳಿ ಕೃಷ್ಣ (65) ಅವರನ್ನು ಹೃದಯಾಘಾತದಿಂದ ಕಳೆದುಕೊಂಡಿದ್ದರು. ಮಗನ ಅಗಲಿಕೆಯ ತೀವ್ರ ಪುತ್ರಶೋಕ ಮತ್ತು ಒಂಟಿತನ ಇಳಿವಯಸ್ಸಿನಲ್ಲಿ ಅವರನ್ನು ತೀವ್ರವಾಗಿ ಕಾಡಿತ್ತು. ಮಗ ನಿರ್ಗಮಿಸಿದ ಕೇವಲ ಆರು ತಿಂಗಳ ಅವಧಿಯಲ್ಲೇ ತಾಯಿ ಜಾನಕಮ್ಮನೂ ಇಹಲೋಕ ತ್ಯಜಿಸಿ ಮಗನನ್ನೇ ಅರಸಿ ಹೋಗಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

Singer S Janaki: ಮಹಾನಟಿ ಸಾವಿತ್ರಿ ಸಿನಿಮಾಗೆ ಹಾಡಲ್ಲ ಎಂದಿದ್ದ ಎಸ್‌.ಜಾನಕಿ; ಇಂಥ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ಆರು ತಿಂಗಳ ಹಿಂದೆ ಪುತ್ರ ನಿಧನ

ಎಸ್‌. ಜಾನಕಿ ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ತಮ್ಮ 65ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ತಾಯಿಯಂತೆಯೇ ಕಲಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಳ ಜೊತೆಗೆ ಭರತನಾಟ್ಯವನ್ನೂ ಪ್ರವೀಣರಾಗಿ ಅಭ್ಯಾಸ ಮಾಡಿದ್ದ ಅವರು, ನೃತ್ಯ ತರಬೇತಿ ವೇಳೆ ತಮ್ಮ ಗುರುವಾಗಿದ್ದ ಉಮಾ ಎಂಬುವವರನ್ನು ಇಷ್ಟಪಟ್ಟು ವಿವಾಹವಾಗಿದ್ದರು.

Legendary singer S Janaki : ಗಾನ ಕೋಗಿಲೆ ಎಸ್.ಜಾನಕಿಯ ಸಂಗೀತ ಲೋಕದ ಪಯಣವಿದು

ಅಮ್ಮನೊಂದಿಗೆ ವಾಸವಾಗಿದ್ದ ಮಗ

ದಾಂಪತ್ಯ ಜೀವನದಲ್ಲಿ ಇಬ್ಬರು ಹೆಣ್ಣು ಮಕ್ಕಳು ಜನಿಸಿದ ಬಳಿಕ ವೈಯಕ್ತಿಕ ಕಾರಣಗಳಿಂದಾಗಿ ಮುರಳಿ ಕೃಷ್ಣ ಅವರು ಪತ್ನಿ ಉಮಾ ಅವರಿಂದ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ಪುತ್ರಿಯರು ತಾಯಿಯೊಂದಿಗೆ ನೆಲೆಸಿದ್ದರು. ಇದರಿಂದ ಏಕಾಂಗಿಯಾದ ಮುರಳಿ ಕೃಷ್ಣ ಅವರು ತಮ್ಮ ತಾಯಿ ಎಸ್. ಜಾನಕಿ ಅವರ ಆರೈಕೆಯಲ್ಲಿ ಅವರೊಂದಿಗೇ ವಾಸಿಸುತ್ತಿದ್ದರು. ಆದರೆ ಕಳೆದ ಜನವರಿಯಲ್ಲಿ ಸಂಭವಿಸಿದ ಹಠಾತ್ ಹೃದಯಾಘಾತ ಅವರ ಜೀವನವನ್ನು ಕೊನೆಗಾಣಿಸಿತು. ಮಗನ ಅಗಲಿಕೆಯ ಈ ಆಳವಾದ ನೋವು ಜಾನಕಮ್ಮ ಅವರನ್ನು ತೀವ್ರವಾಗಿ ಕಾಡಿತ್ತು.

ಆರು ದಶಕಗಳ ಅದ್ಭುತ ಸಂಗೀತ ಪಯಣ

ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್. ಜಾನಕಿ ಅವರು 1950ರ ದಶಕದಲ್ಲಿಯೇ ಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಸುಮಾರು ಆರು ದಶಕಗಳ ಕಾಲ ಸುದೀರ್ಘವಾಗಿ ಗಾಯನ ವೃತ್ತಿಜೀವನ ನಡೆಸಿದ ಅವರು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒಟ್ಟು 45 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. 2016ರಲ್ಲಿ ಅವರು ಮಲಯಾಳಂ ಸಿನಿಮಾವೊಂದಕ್ಕಾಗಿ ಹಾಡಿದ 'ಅಮ್ಮಪೂವಿನುಮ್...' ಅವರ ವೃತ್ತಿಜೀವನದ ಅಧಿಕೃತ ಕೊನೆಯ ಗೀತೆಯಾಗಿದೆ.