S/O Muttanna Movie: ಮಾರ್ಚ್‌ನಲ್ಲಿ ತೆರೆಗೆ ಬರಲಿದೆ ತಂದೆ - ಮಗನ ಬಾಂಧವ್ಯ ಸಾರುವ 'S/O ಮುತ್ತಣ್ಣ' ಚಿತ್ರ
ಡೈನಾಮಿಕ್ ಹೀರೊ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ಅಭಿನಯದ ʼS/O ಮುತ್ತಣ್ಣʼ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಚಿತ್ರ ಮಾರ್ಚ್ ವೇಳೆಗೆ ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಡೈನಾಮಿಕ್ ಹೀರೊ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ (Pranam Devaraj) ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರು ನಾಯಕನಾಗಿ ನಟಿಸಿರುವ 'S/O ಮುತ್ತಣ್ಣ' (S/O Muttanna Movie) ಚಿತ್ರತಂಡ ಶುಭಾಶಯ ತಿಳಿಸಿದೆ. ನಾಯಕ ಪ್ರಣಮ್ ದೇವರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮತ್ತೊಂದು ಸಂತೋಷದ ವಿಷಯ ಹೊರಬಂದಿದೆ. ʼS/O ಮುತ್ತಣ್ಣ' ಚಿತ್ರತಂಡ ಹಾಗೂ ಪ್ರಣಮ್ ಅವರ ಕಾಂಬಿನೇಶನ್‌ನಲ್ಲಿ ಸದ್ಯದಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

ಈಗಾಗಲೇ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿರುವ, ತಂದೆ - ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ʼS/O ಮುತ್ತಣ್ಣʼ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಈ ಚಿತ್ರದ ಟೀಸರ್ ಅನಾವರಣಗೊಂಡಿತ್ತು. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಲಿದೆ. ಮಾರ್ಚ್ ವೇಳೆಗೆ ತೆರೆಗೆ ಬರಲಿದೆ. ಬೆಂಗಳೂರು ಹಾಗೂ ಕಾಶಿಯಲ್ಲಿ ಚಿತ್ರೀಕರಣ ನಡೆದಿದೆ.
ಪುರಾತನ ಫಿಲಂಸ್ ಹಾಗೂ ಎಸ್‌ಅರ್‌ಕೆ ಫಿಲಂಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ಶ್ರೀಕಾಂತ್ ಹುಣಸೂರು ನಿರ್ದೇಶಿಸಿದ್ದಾರೆ. ರಚನೆ ಹಾಗೂ ನಿರ್ದೇಶನ ಶ್ರೀಕಾಂತ್ ಹುಣಸೂರು ಅವರದೆ. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಪ್ರಣಮ್ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Winter Fringe Jacket Fashion: ಚಳಿಗಾಲದಲ್ಲಿ ಟ್ರೆಂಡಿಯಾದ ಫ್ರಿಂಜ್ ಜಾಕೆಟ್ಸ್ & ಕೋಟ್ಸ್
ಸಚಿನ್ ಬಸ್ರೂರು ಸಂಗೀತವಿರುವ 's/o ಮುತ್ತಣ್ಣ' ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.