ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sanvi Sudeep: ಮೊದಲ ಬಾರಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ ಸಾನ್ವಿ ಸುದೀಪ್

ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚಾಗಿ ಅಪ್ಡೇಟ್ ಇರುವ ಸಾನ್ವಿ ಸುದೀಪ್ ಇದೀಗ ಆಸ್ಕ್‌ ಮಿ ಎನಿಥಿಂಗ್‌ ಎಂಬ ಫನ್ನಿ ಗೇಮ್‌ ಆಡಿದ್ದಾರೆ. ಅಂದರೆ ಅವರ ಫಾಲೋವರ್ಸ್‌ ಯಾವುದೇ ಪ್ರಶ್ನೆಗಳನ್ನ ಕೇಳಿದರೆ ಅದಕ್ಕೆ ಉತ್ತರ ನೀಡುವುದು. ಇದರಲ್ಲಿ ಇವರಿಗೆ ವಿವಿಧ ಪ್ರಶ್ನೆಗಳನ್ನ ಕೇಳಲಾಗಿದ್ದು, ಅದಕ್ಕೆಲ್ಲ ಉತ್ತರಿಸಿದ್ದಾರೆ.

ಮೊದಲ ಬಾರಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ ಸಾನ್ವಿ ಸುದೀಪ್

Sanvi Sudeep

Profile Vinay Bhat Mar 7, 2025 7:24 AM

ಸಾನ್ವಿ ಸುದೀಪ್‌ ಸ್ಯಾಂಡಲ್​ವುಡ್​ನ ಸ್ಟಾರ್‌ ಹೀರೋ ಅಭಿನಯ ಚಕ್ರವರ್ತಿ ಸುದೀಪ್‌ ಅವರ ಏಕಮಾತ್ರ ಪುತ್ರಿ. ನೋಡಲು ಬಬ್ಲಿ ಬಬ್ಲಿಯಾಗಿ ಕ್ಯೂಟ್‌ ಆಗಿರುವ ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇವರು ಸಿನಿರಂಗಕ್ಕೆ ಕೂಡ ಎಂಟ್ರಿ ಕೊಡುವ ಮುನ್ಸೂಚನೆ ಇದೆ. ಸಾನ್ವಿ ಸುದೀಪ್‌ ತಂದೆಯಂತೆಯೇ ಕಂಠ ಸಿರಿ ಹೊಂದಿದ್ದು, ಅದ್ಭುತ ಗಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ಕೂಡ ನಟನೆ ಮಾಡಿದ್ದಾರೆ.

ಸಾನ್ವಿ ಅವರು ಸುದೀಪ್​ರ ಸೋದರಳಿಯನ ಜಿಮ್ಮಿ ಸಿನಿಮಾಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚಾಗಿ ಅಪ್ಡೇಟ್ ಇರುವ ಸಾನ್ವಿ ಇದೀಗ ಆಸ್ಕ್‌ ಮಿ ಎನಿಥಿಂಗ್‌ ಎಂಬ ಫನ್ನಿ ಗೇಮ್‌ ಆಡಿದ್ದಾರೆ. ಅಂದರೆ ಅವರ ಫಾಲೋವರ್ಸ್‌ ಯಾವುದೇ ಪ್ರಶ್ನೆಗಳನ್ನ ಕೇಳಿದರೆ ಅದಕ್ಕೆ ಉತ್ತರ ನೀಡುವುದು. ಇದರಲ್ಲಿ ಇವರಿಗೆ ವಿವಿಧ ಪ್ರಶ್ನೆಗಳನ್ನ ಕೇಳಲಾಗಿದ್ದು, ಅದಕ್ಕೆಲ್ಲ ಉತ್ತರಿಸಿದ್ದಾರೆ.

ಮುಖ್ಯವಾಗಿ ಫಾಲೋವರ್ ಒಬ್ಬರು ಸಾನ್ವಿ ಬಳಿ ಬಾಯ್ ಫ್ರೆಂಡ್ ವಿಚಾರವಾಗಿ ಕೇಳಿದ್ದಾರೆ. ಇದಕ್ಕೆ ಅವರು ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. ಸಾನ್ವಿ ಸುದೀಪ್‌ ಅವರಿಗೆ ಬಾಯ್‌ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಓಡುತ್ತಿದೆ. ಇದಕ್ಕೆ ಸಾನ್ವಿ ಸುದೀಪ್‌ ಇದೀಗ ಉತ್ತರಿಸಿದ್ದಾರೆ. ನಿಮ್ಮ ಬಾಯ್‌ಫ್ರೆಂಡ್‌ ಹೆಸರೇನು? ಎಂದು ಓರ್ವ ಫಾಲೋವರ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಸಾನ್ವಿ ಸುದೀಪ್, ‘ನಂಗೆ ಬಾಯ್‌ಫ್ರೆಂಡ್‌ ಇಲ್ಲ ಬಾಸ್‌’ ಎಂದು ಹೇಳಿದ್ದಾರೆ.

ಸುದೀಪ್‌ ಅವರ ಬಿಗ್‌ ಬಾಸ್‌ ನಿರೂಪಕನ ಸ್ಥಾನದಿಂದ ಕೆಳಗಿಳಿದಿರುವುದು ಗೊತ್ತೇ ಇದೆ. ಈ ಬಗ್ಗೆ ಫಾಲೋವರ್ ಒಬ್ಬರು ಮುಂದಿನ ಬಿಗ್‌ ಬಾಸ್‌ ಹೋಸ್ಟ್‌ ನೀವು ಆಗಬಹುದು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಾನ್ವಿ ಅವರು ‘ನನಗೆ ಅಷ್ಟು ತಾಳ್ಮೆ ಇಲ್ಲ ಬಾಸ್‌ ಸಾರಿ’ ಎಂದು ನಗುವ ಇಮೋಜಿಯನ್ನು ಹಾಕಿದ್ದಾರೆ.

ಒಂದು ದಿನದ ಮಟ್ಟಿಗೆ ನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ, ಯಾವ ಪಾತ್ರದಲ್ಲಿ ಬದಲಾಗ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಾನ್ವಿ ಸುದೀಪ್‌, ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಾಡಿರುವ ಶ್ರೀವಲ್ಲಿ ಪಾತ್ರದಲ್ಲಿರಲು ಬಯಸುತ್ತೇನೆ ಎಂದು ಹೇಳಿರುವುದು ಮಾತ್ರವಲ್ಲ ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಶ್ರೀವಲ್ಲಿ ಆಗಲು ಬಯಸುವ ಕಾರಣ ಪುಷ್ಪರಾಜ್‌ ಎಂದು ಹೇಳಿದ್ದಾರೆ. ಪುಷ್ಪನಂತಹ ಗಂಡ ಸಿಕ್ಕಿದರೆ ಇದಕ್ಕಿಂತ ಹೆಚ್ಚು ಇನ್ನು ಏನು ಕೇಳುವುದು ಎಂದು ಸಾನ್ವಿ ಬರೆದುಕೊಂಡಿದ್ದಾರೆ. ತಮ್ಮ ಆಲ್‌ಟೈಮ್‌ ಫೇವರಿಟ್‌ ಪರ್ಸನ್‌ ಸಂಚಿತ್‌ ಸಂಜೀವ್‌ ಎಂದು ಹೇಳಿದ್ದು, ಇವನು ನನಗೆ ಅಣ್ಣ ಅಂತಲೂ ತಿಳಿಸಿದ್ದಾರೆ.

Ramesh Aravind: ರಮೇಶ್ ವೃತ್ತಿ ಬದುಕಿಗೆ 40 ವರ್ಷ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಸರಿಗಮಪ ಶೋ