ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Salman Khan: ಇದೊಂದು ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲೇ ಗರಂ ಆದ ಸಲ್ಮಾನ್‌ ಖಾನ್‌!

Salman Khan: ಮಂಗಳವಾರ, ಸಲ್ಮಾನ್ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಯಾರೋ ಒಬ್ಬರನ್ನು ಭೇಟಿ ಮಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಪ್ರವೇಶಿಸಿದಾಗ ನಟ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಅವರು ಆವರಣದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳೊಂದಿಗೆ ಅಸಮಾಧಾನಗೊಂಡು ತಾಳ್ಮೆ ಕಳೆದುಕೊಂಡಂತೆ ಕಂಡುಬಂದರು.

ಸಲ್ಮಾನ್‌ ಖಾನ್‌

ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಸಲ್ಮಾನ್‌ (Salman Khan) ಕಾಣಿಸಿಕೊಂಡಾಗ ಛಾಯಾಗ್ರಾಹಕರು ಅವರನ್ನು ಹಿಂಬಾಲಿಸಿ 'ಮಾತೃಭೂಮಿ' (Maatrubhumi) ಎಂದು ಕೂಗಿದ್ದಾರೆ. ಇದು ನಟನಿಗೆ ಕೋಪ ಬಂದಿದೆ. ನಟ ಛಾಯಾಗ್ರಾಹಕರ ವಿರುದ್ಧ ವಾಗ್ದಾಳಿ ನಡೆಸಿ, ನಿಮಗೆ ಬುದ್ಧಿ ಸರಿ ಇದೆಯೇ ಎಂದು ಗರಂ ಆಗಿಯೇ ಸಲ್ಮಾನ್‌ ಕೂಗಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ.

ಮಂಗಳವಾರ, ಸಲ್ಮಾನ್ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಯಾರೋ ಒಬ್ಬರನ್ನು ಭೇಟಿ ಮಾಡುತ್ತಿರುವುದು ಕಂಡುಬಂದಿದೆ.

ಆಸ್ಪತ್ರೆಗೆ ಪ್ರವೇಶಿಸಿದಾಗ ನಟ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಅವರು ಆವರಣದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳೊಂದಿಗೆ ಅಸಮಾಧಾನಗೊಂಡು ತಾಳ್ಮೆ ಕಳೆದುಕೊಂಡಂತೆ ಕಂಡುಬಂದರು.

ತಾಳ್ಮೆ ಕಳೆದುಕೊಂಡ ಸಲ್ಮಾನ್‌ ಖಾನ್‌

ನಟ ನಂತರ ಆವರಣದಿಂದ ಹೊರಬರುತ್ತಿದ್ದಂತೆ, ಕೆಲವು ಛಾಯಾಗ್ರಾಹಕರು ಅವರ ಗಮನ ಸೆಳೆಯುವ ಪ್ರಯತ್ನದಲ್ಲಿ ಅವರ ಮುಂಬರುವ ಚಿತ್ರವನ್ನು ಉಲ್ಲೇಖಿಸಿ "ಭಾಯ್, ಭಾಯ್, ಮಾತೃಭೂಮಿ!" ಎಂದು ಕೂಗಲು ಪ್ರಾರಂಭಿಸಿದರು. ಆಗ ಸಲ್ಮಾನ್ ತಾಳ್ಮೆ ಕಳೆದುಕೊಂಡರು.

ಇದನ್ನೂ ಓದಿ: Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

ಆ ಸಮಯದಲ್ಲಿ, ಸಿಟ್ಟಿಗೆದ್ದ ಸಲ್ಮಾನ್ ಛಾಯಾಗ್ರಾಹಕರ ಮೇಲೆ ನಿಮಗೆ ಹುಚ್ಚು ಹಿಡಿದಿದ್ದೆಯಾ? ಎಂದು ಸನ್ನೆ ಮಾಡಿದ್ದಾರೆ.

ಆ ವಿಡಿಯೋದಲ್ಲಿ, ಸಲ್ಮಾನ್ ಛಾಯಾಗ್ರಾಹಕರ ಕಡೆಗೆ ನಡೆದು ಬಂದು, ತಮ್ಮ ಕುಟುಂಬದ ಸದಸ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೆ ಅವರಿಗೆ ಹೇಗನಿಸುತ್ತದೆ ಎಂದು ಪ್ರಶ್ನಿಸುತ್ತಿರುವುದು ಕಂಡುಬರುತ್ತದೆ. ನಂತರ ಛಾಯಾಗ್ರಾಹಕರು ನಟನ ಬಳಿ ಕ್ಷಮೆ ಕೇಳಿದ್ದಾರೆ.

ಸಲ್ಮಾನ್ ಶೀಘ್ರದಲ್ಲೇ 'ಮಾತೃಭೂಮಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಈ ಚಿತ್ರಕ್ಕೆ 'ಬ್ಯಾಟಲ್ ಆಫ್ ಗಾಲ್ವಾನ್' ಎಂದು ಹೆಸರಿಸಲಾಗಿತ್ತು ಇನ್ನೂ ಯಾವುದೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿಲ್ಲ.



ಅಪೂರ್ವ ಲಖಿಯಾ ಅವರು ‘ಮಾತೃಭೂಮಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಸಂಘರ್ಷದ ಬಗ್ಗೆ ಸಿನಿಮಾ ಇದೆ. ದಿವಂಗತ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಸದ್ಯದ ರಾಜಕೀಯ ಸನ್ನಿವೇಶಗಳ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Amitabh Bachchan : ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್‌ ಬಚ್ಚನ್? ಏನಿದು ಸುದ್ದಿ?

ಭಾರತ ಮತ್ತು ಚೀನಾ ನಡುವಿನ ಸಂಬಂಧದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಥೆ ಬದಲಿಸಲಾಗಿದೆ. ಗಲ್ವಾನ್ ಸಂಘರ್ಷದ ಮೇಲೆ ಮಾತ್ರ ಕೇಂದ್ರೀಕರಿಸುವ ಬದಲು ಶಾಂತಿ, ಸಾಮರಸ್ಯ ಮತ್ತು ಯುದ್ಧ ಮಾಡುವುದರಿಂದ ಹೋಗುವ ಜೀವಗಳ ವಿಷಯದ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದೆ.

Yashaswi Devadiga

View all posts by this author