ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

120 ಕೋಟಿಯಿಂದ 70 ಕೋಟಿಗೆ ಸಂಭಾವನೆಯನ್ನು ಇಳಿಸಿಕೊಂಡ ಸಲ್ಮಾನ್‌ ಖಾನ್!‌ ʻಭಾಯಿಜಾನ್‌ʼ ಇಷ್ಟೊಂದು ಡಿಸ್ಕೌಂಟ್‌ ಕೊಟ್ಟಿದ್ದು ಯಾರಿಗೆ?

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ 120 ಕೋಟಿಯ ತಮ್ಮ ಸಂಭಾವನೆಯನ್ನು ಬರೋಬ್ಬರಿ 50 ಕೋಟಿ ರೂ. ಕಡಿತಗೊಳಿಸಿ, 70 ಕೋಟಿಗೆ ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸೋಲುಗಳ ನಂತರ 2027ರ ಈದ್‌ಗೆ ಬಿಗ್ ಕಂಬ್ಯಾಕ್ ಮಾಡಲು ಸಲ್ಮಾನ್ ಸಜ್ಜಾಗುತ್ತಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಇಷ್ಟೊಂದು ಡಿಸ್ಕೌಂಟ್‌ ಕೊಟ್ಟಿದ್ದು ಯಾರಿಗೆ?

ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ಎಂದರೆ ನೆನಪಾಗುವುದೇ ಅವರ ಬಾಕ್ಸ್ ಆಫೀಸ್ ಸ್ಟಾರ್‌ಡಮ್. ಒಂದು ಸಿನಿಮಾಗೆ ಕನಿಷ್ಠ ₹120 ಕೋಟಿವರೆಗೂ ಸಂಭಾವನೆ ಪಡೆಯುವ ಈ ಸೂಪರ್ ಸ್ಟಾರ್, ಇತ್ತೀಚೆಗೆ ತಮ್ಮ ಸಂಭಾವನೆಯಲ್ಲಿ ಬರೋಬ್ಬರಿ ₹50 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿ, ಬರೀ ₹70 ಕೋಟಿಗೆ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ!

ಇತ್ತೀಚಿನ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಸದ್ದು ಮಾಡದಿದ್ದರೂ, ಸಲ್ಮಾನ್ ತಮ್ಮ ಮಾರುಕಟ್ಟೆ ಮೌಲ್ಯವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇದೀಗ ಇಷ್ಟೊಂದು ಭಾರಿ ಪ್ರಮಾಣದ 'ಡಿಸ್ಕೌಂಟ್' ನೀಡಿರುವುದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.

ದಿಲ್‌ ರಾಜು ಸಿನಿಮಾಗಾಗಿ ಈ ಡಿಸ್ಕೌಂಟ್‌

ಅಂದಹಾಗೆ, ಸಲ್ಮಾನ್‌ ಖಾನ್‌ ಅವರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಂಭಾವನೆಯನ್ನು ಕೈಬಿಟ್ಟಿರುವುದು ತೆಲುಗಿನ ದಿಲ್‌ ರಾಜು ಅವರ ಜೊತೆಗಿನ ಹೊಸ ಸಿನಿಮಾಕ್ಕಾಗಿ. ಹೌದು, ಟಾಲಿವುಡ್‌ನ ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ, ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಆಕ್ಷನ್ ಎಂಟರ್‌ಟೈನರ್ 2027ರ ಈದ್ ಹಬ್ಬದ ವೇಳೆಗೆ ಚಿತ್ರಮಂದಿರಗಳಿಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿರುವ ನಟ ಸಲ್ಮಾನ್‌ ಖಾನ್‌ ಅವರು 50 ಕೋಟಿ ರೂ. ಸಂಭಾವನೆಯನ್ನು ಕಡಿತ ಮಾಡಿಕೊಂಡು, ನಿರ್ಮಾಪಕರಿಗೆ ಭಾರಿ ರಿಯಾಯಿತಿ ಕೊಟ್ಟಿದ್ದಾರಂತೆ.

Salman Khan: ಆಮೀರ್‌ ಖಾನ್‌ ಕಾಲೆಳೆದ ಸಲ್ಮಾನ್‌ ಖಾನ್‌; ಫುಲ್‌ ವೈರಲ್‌ ಆಗ್ತಿದೆ ಈ ವಿಡಿಯೊ

ಇಂಥದ್ದೊಂದು ನಿರ್ಧಾರಕ್ಕೆ ಕಾರಣವೇನು?

ಈ ನಿರ್ಧಾರಕ್ಕೆ ಕೇವಲ ಪ್ರಾಜೆಕ್ಟ್‌ನ ಬಜೆಟ್ ಲೆಕ್ಕಾಚಾರಗಳು ಮಾತ್ರ ಕಾರಣವಲ್ಲ. ಬದಲಿಗೆ ಈ ಸಿನಿಮಾದ ನಿರ್ಮಾಣ ಮತ್ತು ಸಿನಿಮಾ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹ-ನಿರ್ಮಾಪಕ ರಫಿ ಕಾಜಿ ಪ್ರಮುಖ ಕಾರಣ! ಯಾಕೆಂದರೆ, ಇವರು ಸಲ್ಮಾನ್ ಅವರ ಆಪ್ತ ಸ್ನೇಹಿತ. ಸ್ನೇಹ ಮತ್ತು ಸಂಬಂಧಗಳಿಗೆ ಆದ್ಯತೆ ನೀಡುವ ಸಲ್ಮಾನ್ ಖಾನ್, ತಮ್ಮ ಜೀವದ ಗೆಳೆಯನಿಗಾಗಿಯೇ ಈ 50 ಕೋಟಿ ರೂಪಾಯಿಗಳ ಭಾರಿ ಸಂಭಾವನೆ ಕಡಿತಕ್ಕೆ ಓಕೆ ಎಂದಿದ್ದಾರೆ ಎಂದು ವರದಿಯಾಗಿದೆ.

ವ್ಯಾಪಾರದ ಲಾಭ ಮತ್ತು ನೂರಾರು ಕೋಟಿ ಆದಾಯಕ್ಕಿಂತ ಮಾನವ ಸಂಬಂಧಗಳಿಗೇ ಸಲ್ಮಾನ್ ಬೆಲೆ ನೀಡುತ್ತಾರೆ, ಈ ಘಟನೆಯು ಮತ್ತೊಮ್ಮೆ ಅವರ ಮನಸ್ಸು ಎಂಥದ್ದು ಎಂಬುದನ್ನು ಸಾಬೀತುಪಡಿಸಿದೆ ಎಂದು ಚಿತ್ರರಂಗದ ಪ್ರಮುಖರು ಕೊಂಡಾಡುತ್ತಿದ್ದಾರೆ.

ಈ ಹಿಂದೆಯೂ ಹೀಗೆಯೇ ಮಾಡಿದ್ದ ಸಲ್ಮಾನ್

ಸಂಭಾವನೆ ವಿಚಾರದಲ್ಲಿ ಸಲ್ಮಾನ್ ‌ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಆಪ್ತ ನಿರ್ಮಾಪಕರು ಹಾಗೂ ಸ್ನೇಹಿತರ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಲು ಅವರು ಯಾವುದೇ ಸಂಭಾವನೆ ಪಡೆಯದೆ ಇರುವ ಉದಾಹರಣೆಗಳು ಸಾಕಷ್ಟು ಇವೆ. ಹಾಗೆಯೇ ಕೆಲವು ಸಿನಿಮಾಗಳಿಗೆ ನೇರವಾಗಿ ಹಣ ಪಡೆಯದೆ ಥಿಯೇಟ್ರಿಕಲ್ ಅಥವಾ ಡಿಸ್ಟ್ರಿಬ್ಯೂಷನ್ ಹಕ್ಕುಗಳು, ಒಟಿಟಿ ಮತ್ತು ಸ್ಯಾಟಲೈಟ್ ಲಾಭದಲ್ಲಿ ಪಾಲನ್ನು ಪಡೆಯುವ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ‌

ʻಅಯ್ಯಯ್ಯೋ, ಸಲ್ಲು ಭಾಯ್‌ಗೆ ಏನಾಗಿಹೋಯ್ತು?ʼ; ಸಲ್ಮಾನ್‌ ಖಾನ್‌ ಲುಕ್‌ ನೋಡಿ ಗಾಬರಿಬಿದ್ದ ಅಭಿಮಾನಿಗಳು!

ಬಿಗ್ 'ಕಂಬ್ಯಾಕ್' ನಿರೀಕ್ಷೆಯಲ್ಲಿ ಸೂಪರ್ ಸ್ಟಾರ್

ಇತ್ತೀಚೆಗೆ ತೆರೆಕಂಡ ಸಲ್ಮಾನ್ ಅಭಿನಯದ 'ಸಿಕಂದರ್', 'ಟೈಗರ್-3' ಮತ್ತು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಹೀಗಾಗಿ, ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಹೊಸ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ 'ಕಂಬ್ಯಾಕ್' ನೀಡಲೇಬೇಕು ಎಂಬ ಛಲದಲ್ಲಿ ಸಲ್ಮಾನ್ ಖಾನ್ ಇದ್ದಾರೆ.