ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಆಮೀರ್‌ ಖಾನ್‌ ಕಾಲೆಳೆದ ಸಲ್ಮಾನ್‌ ಖಾನ್‌; ಫುಲ್‌ ವೈರಲ್‌ ಆಗ್ತಿದೆ ಈ ವಿಡಿಯೊ

Salman Khan and Aamir Khan: ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ನಡೆಸಿಕೊಡುವ ಟೂ ಮಚ್ ಎಂಬ ಹೊಸ ಟಾಕ್ ಶೋ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರನ್ನು ಆಹ್ವಾನಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಗೆಳೆಯ ಅಮೀರ್ ಖಾನ್ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದು ಅದರ ಕೆಲವು ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಮೀರ್‌ ಖಾನ್‌ಗೆ ಸಲ್ಮಾನ್‌ ಖಾನ್‌ ಫುಲ್‌ ಟೀಸಿಂಗ್‌- ವಿಡಿಯೊ ವೈರಲ್‌

-

Profile Pushpa Kumari Sep 26, 2025 4:42 PM

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಬಿಡುಗಡೆಯಾದ ಅವರ ಸಿಕಂದರ್ ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಪಡೆಯಲಿಲ್ಲ. ಅದಾದ ಬಳಿಕ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ಬಾಲಿವುಡ್ ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿದ್ದಾರೆ. ಈ ನಡುವೆ ಅವರು ಟಾಕ್ ಶೋ ಒಂದಕ್ಕೆ ತೆರಳಿದ್ದು ಸಿಕ್ಕಾಪಟ್ಟೆ ಫನ್ನಿ ಕ್ಷಣಗಳನ್ನು ಕಳೆದಿದ್ದಾರೆ. ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ನಡೆಸಿಕೊಡುವ 'ಟೂ ಮಚ್' ಎಂಬ ಹೊಸ ಟಾಕ್ ಶೋ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರನ್ನು ಆಹ್ವಾನಿಸಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಗೆಳೆಯ ಆಮೀರ್‌ ಖಾನ್‌ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದು, ಅದರ ಕೆಲವು ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟ ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರ ನಡುವೆ ಉತ್ತಮ ಬಾಂಧವ್ಯ ಇರುವ ವಿಚಾರ ಎಲ್ಲರಿಗೂ ತಿಳಿದೆ ಇದೆ‌. ಅಂತೆಯೇ ಅವರಿಬ್ಬರನ್ನು ಸಿನಿಮಾ ಸಂಬಂಧಿತ ಅನೇಕ ಕಾರ್ಯಕ್ರಮದಲ್ಲಿ ನಾವು ಕೂಡ ಕಂಡಿರುತ್ತೇವೆ. ಈ ಬಾರಿ ಟು ಮಚ್ ವಿತ್ ಕಾಜೋಲ್ ಮತ್ತು ಟ್ವಿಂಕಲ್ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗಿದ್ದಾರೆ. ಇದೇ ಸಂದ ರ್ಭದಲ್ಲಿ ಅನೇಕ ಫನ್ನಿ ದೃಶ್ಯಗಳು ಈ ಟಾಕ್ ಶೋ ನಲ್ಲಿ ನಡೆದಿದ್ದು ಈ ವಿಡಿಯೊ ವೈರಲ್ ಆಗಿದೆ.



ವೈರಲ್ ಆಗಿರುವ ವಿಡಿಯೋದಲ್ಲಿ ನಟಿ ಕಾಜೋಲ್ ಮತ್ತು ಟ್ವಿಂಕಲ್ ಅವರು ಸೂಪರ್‌ಸ್ಟಾರ್ ಅತಿಥಿಗಳಿಗೆ ಮೇಜಿನ ಮೇಲೆ ವಿವಿಧ ತಿಂಡಿಗಳನ್ನು ನೀಡುವುದರೊಂದಿಗೆ ಶೋ ಪ್ರಾರಂಭ ವಾಗುತ್ತದೆ. ಇದರಲ್ಲಿ ಆಹಾರ ಪ್ರಿಯನಾಗಿರುವ ನಟ ಆಮೀರ್ ಖಾನ್ ಅವರು ಬೇಗನೆ ಡಬೇಲಿ ಖಾದ್ಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರು ಇದನ್ನು ತಿನ್ನುವ ಮೊದಲು ಸಲ್ಮಾನ್ ತಮಾಷೆಯಾಗಿ ಮಾತನಾಡಿದ್ದಾರೆ.

'ಡಬೇಲಿ' ತಿಂಡಿ ಟೇಬಲ್ ಮೇಲೆ ಇಟ್ಟಿದ್ದನ್ನು ಕಂಡ ನಟ ಸಲ್ಮಾನ್ ಖಾನ್ ಅವರು ಈ ಬಗ್ಗೆ ಮಾತನಾಡಿ, ನಿನ್ನೆ ಬೇರೆ ಅವರಿಗೆ ಸಂದರ್ಶನ ಮಾಡಿದ್ದಾರೆ ಆಗ ಬಂದ ಅತಿಥಿಗಳು ಈ ಆಹಾರ ವನ್ನು ಬಿಟ್ಟಿರಬೇಕು.. ನೊಣಗಳು ಬರದಂತೆ ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟಿರಬಹುದು‌. ಈಗ ನೀವು ಅದನ್ನು ತಿಂದಿದ್ದೀರಿ ಎಂದು ಆಮೀರ್ ಖಾನ್ ಅವರಿಗೆ ನಟ ಸಲ್ಮಾನ್ ಖಾನ್ ತಮಾಷೆ ಮಾಡಿದ್ದಾರೆ.

ಇದನ್ನು ಓದಿ:OG Movie: ಪವನ್‌ ಕಲ್ಯಾಣ್‌ ಅಭಿನಯದ ʼಓಜಿʼ ಚಿತ್ರಕ್ಕೆ ಭಜರಂಗಿ ಲೋಕಿ ವಿಲನ್‌

ಬಳಿಕ ಇದಕ್ಕೆ ಶೋ ನಿರೂಪಕಿ ಟ್ವಿಂಕಲ್ ಅವರು ಆಮೀರ್ ಅವರಿಗೆ ಏನು ಆಗೊಲ್ಲ..ಇದಕ್ಕಿಂತ ಕೆಟ್ಟದ್ದನ್ನು ಅವರು ತಿಂದಿರಬಹುದು... ನಾನು ಅವರನ್ನು ಅನೇಕ ವರ್ಷದಿಂದ ನೋಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿ, ನೀವು ದೊಡ್ಡ ಆಹಾರ ಪ್ರಿಯ ರೆಂದು ನನಗೆ ತಿಳಿದಿದೆ. ನಿಮ್ಮ ಮನೆಗೆ ಬರುವ ಪ್ರತಿಯೊಬ್ಬರನ್ನು ನೀವು ಹೇಗಿದ್ದೀರಿ? ಎಂದು ಕೇಳೊಲ್ಲ ಬದಲಾಗಿ ನೀವು ಏನು ತಿನ್ನುತ್ತೀರಿ? ಎಂದು ಕೇಳುತ್ತೀರಂತೆ ಅದು ನಿಜವೇ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುತ್ತಾ, ಸಲ್ಮಾನ್ ಅದು ನಿಜ ಎಂದು ಹೇಳಿದ್ದಾರೆ. ನಟ ಸಲ್ಮಾನ್ ಖಾನ್ ಅವರ ಆಹಾರ ಪ್ರಿಯತೆ ಹಾಗೂ ಮನೆಗೆ ಬಂದ ಅತಿಥಿಗಳ ಮೇಲೆ ಅವರು ತೋರಿಸುವ ಪ್ರೀತಿಯ ಅಭಿವ್ಯಕ್ತಿ ಕಂಡು ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚಿಕೊಂಡಿದ್ದಾರೆ. ಅದೇ ರೀತಿ ಲ್ಮಾನ್ ಖಾನ್ ತಮ್ಮ ಮಿತ್ರ ಅಮೀರ್‌ಗೆ ತಮಾಷೆಯಾಗಿ ಚುಡಾಯಿಸಿದ ಕ್ಷಣಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.