ಮುಂಬೈ: ಬಾಲಿವುಡ್‌ನ ಸೂಪರ್‌ಸ್ಟಾರ್ ನಟರಲ್ಲಿ ಸಲ್ಮಾನ್ ಖಾನ್ (Salman Khan) ಹೆಸರು ಕೂಡ ಮುಂಚೂಣಿಯಲ್ಲಿದೆ. ಕೇವಲ ಸಿನಿಮಾ ಅಲ್ಲದೆ ವಿವಿಧ ಇವೆಂಟ್, ಬಿಗ್ ಬಾಸ್ ನಿರೂಪಣೆ ಹೀಗೆ ಹಲವು ಕಾರ್ಯಕ್ರಮ ನಡೆಸಿಕೊಡುವುದರಲ್ಲೂ ಬ್ಯುಸಿ ಇದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಫ್ಯಾಷನ್ ಶೋ ವೊಂದರಲ್ಲಿ ರ‍್ಯಾಂಪ್ ಮಾಡುವ ಮೂಲಕ ಎಲ್ಲರ ಗಮನ ಸೆಳೆ ದರು. ವಿನ್ಯಾಸಕ ವಿಕ್ರಮ್ ಫಡ್ನಿಸ್ ಅವರ ಫ್ಯಾಷನ್ ಶೋ ಇವೆಂಟ್ ನಲ್ಲಿ ಆಕರ್ಷಕ ಬ್ಲ್ಯಾಕ್ ಡ್ರೆಸ್ ನಲ್ಲಿ ಮಿಂಚಿದ ಸಲ್ಮಾನ್, ತಮ್ಮ ವಿಶಿಷ್ಟ ಶೈಲಿ ಮತ್ತು ಕಾನ್ಫಿಡೆನ್ಸ್ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು.
ಸಲ್ಮಾನ್ ಖಾನ್ ಅವರು ತಮ್ಮ ಆಪ್ತ ಗೆಳೆಯ ಮತ್ತು ವಿನ್ಯಾಸಕ ವಿಕ್ರಮ್ ಫಡ್ನಿಸ್ ಅವರ ಫ್ಯಾಷನ್ ಇವೆಂಟ್ ನಲ್ಲಿ ರಾಂಪ್ ವಾಕ್ ಮಾಡಿ ಎಲ್ಲರನ್ನು ಆಕರ್ಷಣೆ ಮಾಡಿದರು. ವಿಕ್ರಮ್ ಫಡ್ನಿಸ್ ಅವರ 35 ವರ್ಷಗಳ ಆಚರಣೆಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು,100 ಕ್ಕೂ ಹೆಚ್ಚು ಮಾಡೆಲ್‌ಗಳು ಸಾಂಪ್ರದಾಯಿಕ ಉಡುಪಿನ ಮೂಲಕ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಿದರು. ಸಲ್ಮಾನ್ ಖಾನ್ ಕೂಡ ಬ್ಲ್ಯಾಕ್ ಕುರ್ತಾ ಪೈಜಾಮಾ ಧರಿಸಿ ಅದರ ಮೇಲೆ ಕಸೂತಿ ಮಾಡಿದ ಶೇರ್ವಾನಿ-ಶೈಲಿಯ ಜಾಕೆಟ್ ಅನ್ನು ಧರಿಸಿದ್ದರು. ಅವರ ಲುಕ್ ಗೆ ಈ ಕುರ್ತಾ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದ್ದು, ಯಂಗ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ.
ಸಲ್ಮಾನ್ ಖಾನ್ ವಿಡಿಯೊ ಇಲ್ಲಿದೆ:
ಶ್ರೀಮಂತ ರೇಷ್ಮೆಯಿಂದ ಮಾಡಿದ್ದ ಈ ಜಾಕೆಟ್ ನ ಎದೆ ಮತ್ತು ಶೋಲ್ಡರ್ ಮೇಲೆ ಗೋಲ್ಡ್ ಮತ್ತು ಮೆರೂನ್ ಬಣ್ಣದ ಹೂವಿನ ಕಸೂತಿಯಿಂದ ಕೂಡಿತ್ತು. ಇದು ವಿಕ್ರಮ್ ಫಡ್ನಿಸ್ ಅವರ ಐಷಾ ರಾಮಿ ವಿನ್ಯಾಸದ ಶೈಲಿಯನ್ನು ಮತ್ತಷ್ಟು ಆಕರ್ಷಣೆ ಮಾಡಿತ್ತು. ಸಲ್ಮಾನ್ ಧರಿಸಿದ್ದ ಬ್ಲ್ಯಾಕ್ ಲೆದರ್ ಶೂಗಳು ಅತ್ಯಾಧುನಿಕ ಸ್ಪರ್ಶ ನೀಡಿತು.
ಇದನ್ನೂ ಓದಿ:Salman Khan: ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; ಫುಲ್ ವೈರಲ್ ಆಗ್ತಿದೆ ಈ ವಿಡಿಯೊ
ಈ ಕಾರ್ಯಕ್ರಮದ ಇನ್ನೊಂದು ವಿಶೇಷ ಅಂದರೆ ಫ್ಯಾಷನ್ ಶೋ ನಲ್ಲಿ ಪಕ್ಕದಲ್ಲಿಯೇ ಸಲ್ಮಾನ್ ಖಾನ್ ಅವರ ಭದ್ರತಾ ಸಿಬ್ಬಂದಿಗಳು ನಿಂತಿರುವುದು ಎಲ್ಲರ ಗಮನ ಸೆಳೆಯಿತು. ನಟ ರ‍್ಯಾಂಪ್ ಮೇಲೆ ನಡೆಯುವಾಗ, ಅವರ ಭದ್ರತಾ ಸಿಬ್ಬಂದಿಗಳು ಬಲ ಭಾಗದಲ್ಲಿ ನಿಂತು, ಅವರ ಮೇಲೆಯೇ ದೃಷ್ಟಿ ಇಟ್ಟಿದ್ದು ಅಪರೂಪದ ದೃಶ್ಯವಾಗಿತ್ತು. ಸಾರ್ವಜನಿಕವಾಗಿ ಕಡಿಮೆ ಕಾಣಿಸಿಕೊಳ್ಳುತ್ತಿರುವ ಸಲ್ಮಾನ್ ಅವರ ಈ ರ‍್ಯಾಂಪ್ ವಾಕ್ ಹೆಚ್ಚಿನವರ ಗಮನ ಸೆಳೆಯಿತು. ಸದ್ಯ ಸಲ್ಮಾನ್ ಖಾನ್ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.