ನಟಿ ಸಮಂತಾ ರುತ್ ಪ್ರಭು (Samantha) ಮತ್ತು ʻದಿ ಫ್ಯಾಮಿಲಿ ಮ್ಯಾನ್ʼ ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು ಅವರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಹಲವು ದಿನಗಳಿಂದ ಇವರಿಬ್ಬರು ಒಟ್ಟಿಗೆ ಓಡಾಡುತ್ತಿದ್ದಾರೆ. ಇದೀಗ ಇವರು ಮದುವೆ ಆಗುತ್ತಿದ್ದು, ತುಂಬಾ ಖಾಸಗಿಯಾಗಿ ಈ ಸಮಾರಂಭವು ನಡೆದಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಇದು ಇಬ್ಬರಿಗೂ ಕೂಡ ಎರಡನೇ ಮದುವೆ!
ಮದುವೆ ನಡೆಯುತ್ತಿರುವುದು ಎಲ್ಲಿ?
ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಮದುವೆ ನಡೆದಿದೆ ಎಂದು ವರದಿಗಳು ಹೇಳಿವೆ. ಈ ಮದುವೆಯಲ್ಲಿ ಕೇವಲ 30 ಅತಿಥಿಗಳು ಮಾತ್ರ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಸಾಕಷ್ಟು ಗೌಪ್ಯವಾಗಿ ಯಾವುದೇ ಮತ್ತು ಸರಳವಾಗಿ ಈ ಮದುವೆ ಸಮಾರಂಭ ನಡೆದಿದೆಯಂತೆ. ಆದರೆ ಇದುವರೆಗೂ ಈ ಬಗ್ಗೆ ಎಲ್ಲಿಯೂ ರಾಜ್ ಆಗಲಿ, ಸಮಂತಾ ಆಗಲಿ ಏನೊಂದು ಮಾಹಿತಿಯನ್ನು ಕೂಡ ಹಂಚಿಕೊಂಡಿಲ್ಲ.
Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?
ಇಬ್ಬರಿಗೂ ಇದು ಎರಡನೇ ಮದುವೆ
ಟಾಲಿವುಡ್ ನಟ ನಾಗ ಚೈತನ್ಯ ಅವರನ್ನು ನಟಿ ಸಮಂತಾ ಅವರು ಪ್ರೀತಿಸಿ ಮದುವೆ ಆಗಿದ್ದರು. ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ, ಬಳಿಕ ಕುಟುಂಬದವರನ್ನು ಒಪ್ಪಿಸಿ, ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡು ದೂರವಾದರು. ನಟಿ ಶೋಭಿತಾ ಧುಲಿಪಾಲ ಅವರನ್ನು ನಾಗ ಚೈತನ್ಯ ಕಳೆದ ವರ್ಷ ಮದುವೆ ಆಗಿದ್ದಾರೆ. ಇನ್ನು, ರಾಜ್ ನಿಡಿಮೋರು ಅವರು ಶ್ಯಾಮಿಲಿ ಡೇ ಎಂಬುವರನ್ನು ಮದುವೆಯಾಗಿ ಅವರಿಂದ ದೂರವಾಗಿದ್ದಾರೆ. 2015ರಲ್ಲಿ ಮದುವೆಯಾದ ರಾಜ್ ಮತ್ತು ಶ್ಯಾಮಿಲಿ ಅವರು 2022ರಲ್ಲಿ ಡಿವೋರ್ಸ್ ಪಡೆದುಕೊಂಡರು. ಇದೀಗ ಸಮಂತಾ ಮತ್ತು ರಾಜ್ ಅವರು ಹೊಸ ಜೀವನ ಶುರು ಮಾಡುತ್ತಿದ್ದಾರೆ.
Samantha Ruth Prabhu : ರಾಜ್ ನಿಡಿಮೋರ್ ಅಪ್ಪಿಕೊಂಡ ಫೋಟೊ ಶೇರ್ ಮಾಡಿದ ಸಮಂತಾ! ಶೀಘ್ರದಲ್ಲೇ ಗುಡ್ ನ್ಯೂಸ್?
ಮಾಜಿ ಪತ್ನಿ ಹೇಳಿದ್ದೇನು?
ಡಿಸೆಂಬರ್ 1ರಂದು ರಾಜ್ ಮತ್ತು ಸಮಂತಾ ಮದುವೆ ಆಗಿದ್ದಾರೆ ಎಂಬ ಟಾಕ್ ಕೇಳಿಬಂದ ಹಿನ್ನೆಲೆಯಲ್ಲೇ ಶ್ಯಾಮಿಲಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. "ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ" (Desperate people do desperate things) ಎಂದು ಶ್ಯಾಮಿಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ತಮ್ಮ ಮಾಜಿ ಪತಿ ರಾಜ್ ನಿಡಿಮೋರು ಹಾಗೂ ನಟಿ ಸಮಂತಾ ಅವರಿಗೇ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಯಾರು ಈ ರಾಜ್ ನಿಡಿಮೋರು?
ರಾಜ್ ನಿಡಿಮೋರು ಅವರು ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು 2003ರಿಂದಲೂ ಸಕ್ರಿಯವಾಗಿದ್ದಾರೆ. ಕೃಷ್ಣ ದಾಸರಕೋತಪಲ್ಲಿ (ಡಿಕೆ) ಅವರ ಜೊತೆಗೆ ಸೇರಿಕೊಂಡು ದಿ ಫ್ಯಾಮಿಲಿ ಮ್ಯಾನ್, ಫರ್ಜಿ, ಸಿಟಾಡೆಲ್, ಗನ್ಸ್ ಆಂಡ್ ಗುಲಾಬ್ಸ್ ಮುಂತಾದ ವೆಬ್ ಸರಣಿಗಳನ್ನು ನಿರ್ದೇಶಿಸಿದ್ದಾರೆ.