ಬಿಗ್ಬಾಸ್ ಮನೆಯಲ್ಲಿ (Bigg Boss Kannada 13) ಕ್ಯಾಪ್ಟನ್ ಆಗುವುದು ಬಿಗ್ಬಾಸ್ಗೆ ಅಥವಾ ಸುದೀಪ್ಗೆ ಉಪನಾಯಕ ಆದಂತೆ. ಬಿಗ್ಬಾಸ್ ಮನೆಯ ಕ್ಯಾಪ್ಟನ್ಗೆ ವಿಶೇಷ ಗೌರವ ಇರುತ್ತದೆ. ಸಂಗೀತಾ ಭಟ್ (Sangeetha bhat) ಅವರು ಈ ಸೀಸನ್ನಿನ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಆಸಿಯಾ ಫಿರ್ದೋಸ್ ಹಾಗೂಸಂಗೀತಾ ಭಟ್‌ಎದುರಾಳಿಗಳಾಗಿ ಫೈಟ್ ಕೊಟ್ಟಿದ್ದು, ಇವರಿಗೆ ತಂಡಗಳ ಸಪೋರ್ಟ್‌ಬೇಕಿತ್ತು. ಎಲ್ಲಹಂತದಲ್ಲೂ ಸಂಗೀತಾ ಭಟ್‌ಗೆ ಸಾಥ್ ಸಿಕ್ಕಿದ್ದು, ‘ಬಿಗ್ ಬಾಸ್ ಸೀಸನ್-13’ರ ಮೊಟ್ಟ ಮೊದಲ ಕ್ಯಾಪ್ಟನ್ (Captain) ಆದರು.
‘ಕಣ್ಗಾವಲು’ ಟಾಸ್ಕ್ ಗೆದ್ದಿದ್ದ ಸಂಗೀತಾ ಭಟ್ ಅವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಫೈಲೆಟ್ ಆಗಿ ಆಯ್ಕೆ ಆದರು. ಆಸಿಯಾ ಫಿದೋಸ್ ಅವರನ್ನ ಕೋ-ಫೈಲೆಟ್ ಆಯ್ಕೆ ಮಾಡಿಕೊಂಡರು. ಆಸಿಯಾ ತಮ್ಮ ವಿರುದ್ದ ಆಡಲು ಅವಿನಾಶ್, ಯಶಸ್, ಧನುಷ್ ಅವರನ್ನ ಆಯ್ಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ: Bigg Boss kannada 13: ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ಭಯ
ಆಸಿಯಾಗೆ ಗಗನ್, ಯಶಸ್‌ಗೆ ಸೌಂದರ್ಯ, ಧನುಷ್‌ಗೆ ಜಗದೀಶ್, ಅವಿನಾಶ್‌ಗೆ ತಾಂಡವ್ ರಾಮ್ ಜೊತೆಯಾಗಿ ಆಟವಾಡಿದರು. ಇದರಲ್ಲಿ ಆಸಿಯಾ ಗೆದ್ದು, ತಮ್ಮ ಕೋ-ಕ್ಯಾಪ್ಟನ್ ಸ್ಥಾನವನ್ನ ಉಳಿಸಿಕೊಂಡು, ಮುಖ್ಯ ಕ್ಯಾಪ್ಟನ್ಸಿ ಟಾಸ್ಕ್ ಆಡಿದರು.
ಕೆಲವರು ಅಡ್ಡ ಹಾದಿ ಹಿಡಿದರು. ವಸ್ತುಗಳನ್ನು ಸಂಗ್ರಹಿಸುವ ಟಾಸ್ಕ್ ಬಂದಾಗ ಕೆಲವರು ಕಳ್ಳತನ ಮಾಡಿದರೆ, ಕೆಲವರು ದೌರ್ಜನ್ಯ ಮಾಡಿದರು. ಸಂಗೀತಾ ಎಲ್ಲೂ ಸಹ ನಿಯಮ ಮುರಿಯದೆ, ಅಡ್ಡದಾರಿ ಹಿಡಿಯದೆ ಮುಖ್ಯವಾಗಿ ತಾಳ್ಮೆ ಕಳೆದುಕೊಳ್ಳದೆ, ನ್ಯಾಯಯುತವಾಗಿ ಆಟ ಆಡಿ ಫೈನಲ್ ಪ್ರವೇಶ ಮಾಡಿದರು.
ಫೈನಲ್ನಲ್ಲಿ ಭಯವಾದರೂ ಸಹ ಧೈರ್ಯ ಮಾಡಿ ಏಣಿಯನ್ನು ಹತ್ತಿದರು. ಸಂಗೀತಾ ಗೆದ್ದರು. ಆ ಮೂಲಕ ಈ ಸೀಸನ್ನಿನ ಮೊಟ್ಟ ಮೊದಲ ಕ್ಯಾಪ್ಟನ್ ಎನಿಸಿಕೊಂಡರು.
ಆರಂಭದಿಂದಲೂ ಸಂಗೀತಾ ಅವರ ತಂಡ ಮುಂದಿತ್ತು. ಆಸಿಯಾ ತಂಡ, ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ಸು ಕಂಡರು. ಅಷ್ಟರಲ್ಲಾಗಲೇ ಮರದ ತುಂಡುಗಳನ್ನ ಜೋಡಿಸಿ, ಜೋರಾಗಿ ತಳಿದ ಸಂಗೀತಾ ರಭಸಕ್ಕೆ ಆಸಿಯಾ ಫೋಟೋ ಸ್ವೀಮ್ಮಿಂಗ್ ಪೂಲ್‌ಗೆ ಬಿತ್ತು.
ಇದನ್ನೂ ಓದಿ: Bigg Boss Kannada 13: ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್ ಚಿನ್ನಪ್ಪ?
ಒಂದರಂತೆ ತುಂಡುಗಳು ತಳ್ಳಿಕೊಂಡು ಹೋಗಿ ಫೋಟೋ ಬೀಳಬೇಕಿತ್ತು. ಆಸಿಯಾ ಕರೆಕ್ಟ್ ಆಗಿ ಆಡಿ, ತುಂಡುಗಳನ್ನ ಬೀಳಿಸಿದರು.ಅದರ ನಡುವೆ ಸಂಗೀತಾ ಭಟ್ ಅವರನ್ನ ವಿನ್ನರ್ ಎಂದು ಘೋಷಿಸಿದರು. ಸೋತರು ಸಹ ಆಸಿಯಾ ಅವರು ಸಂಗೀತಾ ಅವರ ಗೆಲುವನ್ನು ಸಂಭ್ರಮಿಸಿದರು.