Bigg Boss Kannada 13: ಟಾಸ್ಕ್‌ನಲ್ಲಿ ಮೋಸ ಮಾಡಿದ್ರಾ ಗಗನ್ ಚಿನ್ನಪ್ಪ?
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳ ಗಲಾಟೆ ಜೋರಾಗಿದೆ. ಅದರಲ್ಲೂ ಟಾಸ್ಕ್ ಅಂತ ಬಂದರೆ ಉಸ್ತುವಾರಿ ಕೂಡ ಬಹಳ ಮುಖ್ಯ ಟಾಸ್ಕ್‌ನಲ್ಲಿ ವೈಷ್ಣವಿ ವಹಿಸಿದ ಉಸ್ತುವಾರಿ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಪ್ಪು ನಿರ್ಧಾರಗಳನ್ನ ತೆಗೆದುಕೊಂಡ ವೈಷ್ಣವಿ (Vaishnavi) ವಿರುದ್ಧ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada 13) ಸ್ಪರ್ಧಿಗಳ ಗಲಾಟೆ ಜೋರಾಗಿದೆ. ಅದರಲ್ಲೂ ಟಾಸ್ಕ್ ಅಂತ ಬಂದರೆ ಉಸ್ತುವಾರಿ ಕೂಡ ಬಹಳ ಮುಖ್ಯ ಟಾಸ್ಕ್‌ನಲ್ಲಿ ವೈಷ್ಣವಿ ವಹಿಸಿದ ಉಸ್ತುವಾರಿ ವೀಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಪ್ಪು ನಿರ್ಧಾರಗಳನ್ನ ತೆಗೆದುಕೊಂಡ ವೈಷ್ಣವಿ (Vaishnavi) ವಿರುದ್ಧ ಪ್ರೇಕ್ಷಕರು ಸೋಶಿಯಲ್ ಮೀಡಿಯಾಗಳಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಗಗನ್ ಚಿನ್ನಪ್ಪ (Gagan Chinnappa) ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಸೌಂದರ್ಯ, ಗಗನ್, ಜಗ್ಗ ಮಮ್ಮಿ ಹಾಗೂ ತಾಂಡವ್ ನಡುವೆ ನಡೆದ ಬಜರ್ ಟಾಸ್ಕ್‌ನಲ್ಲಿ, ಮೊದಲು ಬಜರ್ ಒತ್ತುವ ಸ್ಪರ್ಧಿಯ ಹೆಸರನ್ನ ವೈಷ್ಣವಿ ಸೂಚಿಸಬೇಕಿತ್ತು. ಮೊದಲ ಸುತ್ತಿನಲ್ಲಿ ಗಗನ್ ಮೊದಲು ಬಜರ್ ಪ್ರೆಸ್ ಮಾಡಿದ್ದರೂ, ಅದನ್ನ ಸರಿಯಾಗಿ ಗಮನಿಸಿಲ್ಲ ವೈಷ್ಣವಿ. ಜಗ್ಗ ಮಮ್ಮಿ ಮೊದಲು ಬಜರ್ ಒತ್ತಿದ್ದಾರೆ ಎಂದರು. ಏನ್ ಮಾತಾಡ್ತಾ ಇದ್ದೀಯಾ? ಫಸ್ಟ್ ಬಜರ್ ಪ್ರೆಸ್ ಮಾಡಿದ್ದು ನಾನು ಎಂದರು ಗಗನ್. ಎರಡನೇ ಸುತ್ತಿನಲ್ಲೂ ತಾಂಡವ್ ಸ್ಪಷ್ಟವಾಗಿ ಮೊದಲು ಬಜರ್ ಒತ್ತಿದ್ದರು. ಮೊದಲು ಬಜರ್ ಒತ್ತಿದ್ದು ಗಗನ್ ಎಂದರು ವೈಷ್ಣವಿ. ಇತರ ಸ್ಪರ್ಧಿಗಳೆಲ್ಲರೂ ತಾಂಡವ್ ಎಂದರು.
ಇದನ್ನೂ ಓದಿ: Amruthadhaare Serial: ಹೊಸ ರೂಪ - ಹೊಸ ತಿರುವು! ಭೂಮಿಕಾ ಪ್ರತಿರೂಪ, ಯಾರಿದು ದೀಪಿಕಾ ?
ನಾನು ಯಾವತ್ತೂ ಗೇಮ್‌ನಲ್ಲಿ ಮೋಸ ಮಾಡಲ್ಲ’ ಎಂದು ಗಗನ್ ಕಿರುಚಾಡುತ್ತಾ ತಮ್ಮ ಪಾಯಿಂಟ್ ಅನ್ನು ಸಮರ್ಥಿಸಿಕೊಂಡರು. ಆ ಬಳಿಕ ತಾಂಡವ್ ಮೊದಲು ಬಜರ್ ಒತ್ತಿದ್ದರು. ಈ ವೇಳೆ ವೈಷ್ಣವಿ, ಗಗನ್ ಚಿನ್ನಪ್ಪ ಮೊದಲು ಬಜರ್ ಒತ್ತಿದ್ದು ಎಂದರು. ಆಗ ಗಗನ್ ಸೈಲೆಂಟ್ ಆಗಿ ಇದ್ದರು. ಇದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಗಗನ್ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ, ಉಸ್ತುವಾರಿಯ ನಿರ್ಧಾರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾನು ಹಾಗೆಲ್ಲಾ ಯಾವುದನ್ನ ಕೂಡ ಫ್ರೀಯಾಗಿ ತಗೋಳೋದಿಲ್ಲ ಎಂದು ಅತ್ತ ತಾಂಡವ್ ಕೂಡ ಕಿಡಿಕಾರಿದ್ದಾರೆ. ವೈಷ್ಣವಿ ಅವರ ಈ ಗೊಂದಲದ ಉಸ್ತುವಾರಿ ಕಂಡು ವೀಕ್ಷಕರು ಬೈಯುತ್ತಿದ್ದಾರೆ.
ಇದನ್ನೂ ಓದಿ: Bigg Boss kannada 13: ಕಾಮನ್ ಮ್ಯಾನ್ ಸ್ಪರ್ಧಿಗಳ ಅತಿರೇಕದ ವರ್ತನೆ! ಕಿಚ್ಚನ ಕ್ಲಾಸ್ ನೆನೆದು ಮಂಜುಗೆ ಭಯ
ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವು ಸ್ಪರ್ಧಿಗಳು ತಮ್ಮ ಆಟವನ್ನು ಸಾಬೀತು ಮಾಡುಕೊಂಡಿಲ್ಲ.